Site icon Vistara News

Shahrukh Khan: ಶಾರುಖ್‌ ಪುತ್ರ ಯಾಕೆ ನಗಲ್ಲ ಎನ್ನುವರಿಗೆ ನಟಿ ಪಾಲಕ್ ತಿವಾರಿ ಕೊಟ್ಟ ಉತ್ತರವೇನು?

Palak Tiwari spoke about Aryan Khan's personality

ಬೆಂಗಳೂರು: ಬಾಲಿವುಡ್‌ ನಟ ಶಾರುಖ್ ಖಾನ್ (Shahrukh Khan) ಅವರ ಮಗ ಆರ್ಯನ್ ಖಾನ್ ಸಾರ್ವಜನಿಕವಾಗಿ ಎಂದಿಗೂ ನಗು ಮುಖದಲ್ಲಿ ಕಾಣಿಸಿಕೊಂಡಿಲ್ಲ ಎಂದು ನೆಟ್ಟಿಗರು ಆಗಾಗ ಆರ್ಯನ್‌ ಖಾನ್‌ ಅವರನ್ನು ಟ್ರೋಲ್‌ ಮಾಡುತ್ತಲೇ ಇರುತ್ತಾರೆ. ಪಾರ್ಟಿಗಳಿಂದ ಹಿಡಿದು ತಂದೆಯ ಐಪಿಎಲ್ ತಂಡ ಕೋಲ್ಕೊತಾ ನೈಟ್ ರೈಡರ್ಸ್ ಪಂದ್ಯಗಳವರೆಗೆ, ಆರ್ಯನ್‌ ಖಾನ್‌ ತನ್ನ ಗಂಭೀರ ನೋಟದಿಂದಲೇ ಸುದ್ದಿಯಾಗುತ್ತಲೇ ಇರುತ್ತಾರೆ. ಶಾರುಖ್‌ ಅಭಿಮಾನಿಗಳು ʻಯಾಕೆ ಆರ್ಯನ್‌ ಅವರು ತಮ್ಮ ನಗುವನ್ನು ತಡೆ ಹಿಡಿಯುತ್ತಾರೆʼ ಎಂದು ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಇದೀಗ ಆರ್ಯನ್ ಖಾನ್ ಅವರ ವ್ಯಕ್ತಿತ್ವದ ಬಗ್ಗೆ ನಟಿ ಪಾಲಕ್ ತಿವಾರಿ ಮಾತನಾಡಿದ್ದಾರೆ.

ಸುಹಾನಾ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್‌ವರೆಗೆ, ಪಾಲಕ್ ತಿವಾರಿ ಕೆಲವು ಜನಪ್ರಿಯ ಸ್ಟಾರ್ ಮಕ್ಕಳೊಂದಿಗೆ ಹಲವಾರು ಪಾರ್ಟಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿರುವ ಇವರು, ಆರ್ಯನ್ ಖಾನ್ ಜತೆಗೆ ಒಳ್ಳೆಯ ಸ್ನೇಹವನ್ನು ಹೊಂದಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಪಾಲಕ್ ತಿವಾರಿ ಸೂಪರ್‌ಸ್ಟಾರ್ ಶಾರುಖ್‌ ಅವರ ಮಗ ಆರ್ಯನ್‌ ಖಾನ್‌ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ʻʻಆರ್ಯನ್‌ ಕೆಲವೇ ಕೆಲವು ಮಾತುಗಳನ್ನು ಹೇಳುತ್ತಾನೆ. ಆದರೆ ಅವುಗಳು ನಿಖರವಾಗಿ ಇರುವದರೊಂದಿಗೆ ಪ್ರಭಾವಶಾಲಿ ಹೇಳಿಕೆಯನ್ನು ನೀಡುತ್ತಾನೆ. ಆರ್ಯನ್‌ ವ್ಯಕ್ತಿತ್ವವೇ ಹಾಗೆ. ತುಂಬಾ ಸರಳ ವ್ಯಕ್ತಿ, ತುಂಬಾ ಒಳ್ಳೆಯವನು. ನೀವು ಅವನೊಂದಿಗೆ ಮಾತನಾಡಲು ಬಯಸಿದರೆ ಅವನು ನಿಮ್ಮೊಂದಿಗೆ ಮತ್ತು ಎಲ್ಲರೊಂದಿಗೆ ಮಾತನಾಡುತ್ತಾನೆ. ಶಾಂತ ಸ್ವಭಾವದ ವ್ಯಕ್ತಿತ್ವ ಅವನದುʼʼಎಂದರು.

ಇದನ್ನೂ ಓದಿ: Shahrukh Khan: ಟೈಮ್ ಮ್ಯಾಗಜಿನ್‌ ವಾರ್ಷಿಕ ಓದುಗರ ಸಮೀಕ್ಷೆಯಲ್ಲಿ ಶಾರುಖ್ ಖಾನ್‌ಗೆ ನಂ.1 ಸ್ಥಾನ!

ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಾಲಕ್ ತಿವಾರಿ ಅವರು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ದಗ್ಗುಬಾಟಿ ವೆಂಟಕೇಶ್ ಮತ್ತು ಇತರರು ನಟಿಸಿದ್ದಾರೆ. ಏಪ್ರಿಲ್ 21ಕ್ಕೆ ಚಿತ್ರಮಂದಿರಕ್ಕೆ ಬರಲಿದೆ.
ಆರ್ಯನ್ ತಮ್ಮ ಚೊಚ್ಚಲ ಯೋಜನೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹೊಸ ಪ್ರಾಜೆಕ್ಟ್‌ನ ಸ್ಕ್ರಿಪ್ಟ್ ಬರೆಯುತ್ತಿದ್ದು, ಈ ಯೋಜನೆ, ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

Exit mobile version