ಬೆಂಗಳೂರು: ಶ್ವೇತಾ ತಿವಾರಿ ಅವರ ಪುತ್ರಿ ಪಲಕ್ ತಿವಾರಿ ಅವರು ಸಲ್ಮಾನ್ ಖಾನ್ (Salman Khan) ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಸೆಟ್‌ಗಳಲ್ಲಿ ಮಹಿಳೆಯರ ಉಡುಗೆಯ ಬಗ್ಗೆ ಹೊಸ ರೂಲ್ಸ್ ಮಾಡಲಾಗಿತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಪಲಕ್ ಈ ಕುರಿತು ಮಾತನಾಡಿದ್ದು ʻʻಹಲವರಿಗೆ ಇದು ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ, ಸಲ್ಮಾನ್ ಸರ್ ಅವರು ಸೆಟ್‌ನಲ್ಲಿರುವ ಪ್ರತಿಯೊಬ್ಬ ಹುಡುಗಿಯೂ ಧರಿಸುವ ಬಟ್ಟೆಯು ಲೋ ನೆಕ್‌ಲೈನ್ ಹೊಂದಿರಬಾರದು ಎಂದು ಬಯಸುತ್ತಾರೆ. ಅವರಿಗೆ ಮಹಿಳೆಯರ ಕತ್ತಿನ ಬಳಿ ಡ್ರೆಸ್ ಸರಿಯಾಗಿ ಇರಬೇಕಿತ್ತುʼʼ ಎಂದು ಹೇಳಿಕೆ ನೀಡಿದ್ದಾರೆ.
ʻʻಸಲ್ಮಾನ್ ಅವರಿಗೆ ಸೆಟ್‌ನಲ್ಲಿ ಇರುವ ಮಹಿಳೆಯರು ಕತ್ತಿನ ಬಳಿ ಡ್ರೆಸ್ ಸರಿಯಾಗಿ ಇರಬೇಕು. ದೇಹದ ಮುಖ್ಯ ಪಾರ್ಟ್ ಕವರ್ ಆಗಿರಬೇಕಿತ್ತು’ ಎಂದಿದ್ದಾರೆ ಪಲಕ್. ಟಿವಿ ಶೋ ಒಂದರಲ್ಲಿ ಈ ಬಗ್ಗೆ ಸಲ್ಮಾನ್ ಮಾತನಾಡಿ ʻನನ್ನ ಪ್ರಕಾರ, ಮಹಿಳೆಯರ ದೇಹವು ಬಹಳ ಅಮೂಲ್ಯವಾಗಿದೆ. ಅವರು ಹೆಚ್ಚು ಬಟ್ಟೆಗಳಿಂದ ಕವರ್ ಆದರೆ ಚೆನ್ನಾಗಿರುತ್ತದೆ. ಇದು ಕೇವಲ ಮಹಿಳೆಯರ ಬಗ್ಗೆ ಮಾತ್ರವಲ್ಲ, ಪುರುಷರ ಬಗ್ಗೆಯು ಕೂಡ. ಪುರುಷರು ಮಹಿಳೆಯರನ್ನು ನೋಡುವ ರೀತಿ, ನಿಮಗೆ ತಿಳಿದಿದೆ. ಅದು ನಿಮ್ಮ ಸಹೋದರಿಯರು, ನಿಮ್ಮ ಹೆಂಡತಿ, ನಿಮ್ಮ ತಾಯಂದಿರು ಕೂಡ ಆಗಿರಬಹುದು. ಅದು ನನಗೆ ಇಷ್ಟವಾಗುವುದಿಲ್ಲʼʼ ಎಂದರು.
ಸಲ್ಮಾನ್ ಖಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನಿಮಾ ಪದಾರ್ಪಣೆ ಮಾಡುವ ಮೊದಲು ‘ಅಂತಿಮ್: ದಿ ಫೈನಲ್ ಟ್ರುತ್’ ಸಿನಿಮಾದಲ್ಲಿ ಪಲಕ್ ಅವರು ಸಹಾಯಕ ನಿರ್ದೇಶಕಿ ಆಗಿದ್ದರು. ಆಯುಷ್ ಶರ್ಮಾ ನಟನೆಯ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಲ್ಮಾನ್ ಜತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ಪಲಕ್, “ಸಲ್ಮಾನ್ ಸರ್ ಅವರಿಂದ ಹಲವಾರು ವಿಚಾರಗಳನ್ನು ಕಲಿತಿದ್ದೇನೆ. ಸಿನಿಮಾ ನಿರ್ಮಾಣದ ತಾಂತ್ರಿಕ ಅಂಶಗಳ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ ಅವರ ಸಿನಿಮಾ ಬಗ್ಗೆ ಇರುವ ಆಸಕ್ತಿ ಹತ್ತಿರದಿಂದ ನೋಡಿದ್ದೇನೆ. ಸಲ್ಮಾನ್ ಖಾನ್ ಸೆಟ್‌ನಲ್ಲಿ ಹೇಗೆ ಇರುತ್ತಾರೆ ಮತ್ತು ಕೆಲಸದ ಸ್ಥಳದಲ್ಲಿ ಅವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಗಮನಿಸುವುದು ಒಂದು ಒಳ್ಳೆಯ ಅನುಭವʼʼಎಂದರು.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್‌ಗೆ ಶೇಕ್‌ಹ್ಯಾಂಡ್ ಮಾಡಲು ಬಂದ ಅಭಿಮಾನಿಯನ್ನು ತಳ್ಳಿದ ಬಾಡಿಗಾರ್ಡ್
ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಲಕ್ ತಿವಾರಿ ಅವರು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ದಗ್ಗುಬಾಟಿ ವೆಂಟಕೇಶ್ ಮತ್ತು ಇತರರು ನಟಿಸಿದ್ದಾರೆ. ಏಪ್ರಿಲ್ 21ಕ್ಕೆ ಸಿನಿಮಾ ತೆರೆ ಕಂಡಿತು.