Site icon Vistara News

Main Atal Hoon | ಅಟಲ್‌ ಜೀ ಜನುಮ ದಿನ: ʻಮೈ ಅಟಲ್‌ ಹೂಂʼ ಚಿತ್ರದ ಫಸ್ಟ್‌ ಲುಕ್‌ ಔಟ್‌

Main Atal Hoon

ಬೆಂಗಳೂರು: ಭಾರತದ ಮಾಜಿ ಪ್ರಧಾನಮಂತ್ರಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Film on Vajpayee) ಜೀವನ ಚರಿತ್ರೆ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಇದೀಗ ಅಟಲ್‌ ಅವರ ಜನುಮದಿನದ ಪ್ರಯುಕ್ತ ‘ಮೈ ಅಟಲ್ ಹೂಂ’ (Main Atal Hoon) ಚಿತ್ರ ತಂಡ ಫಸ್ಟ್‌ ಲುಕ್‌ ರಿವೀಲ್‌ ಮಾಡಿದೆ. ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ನಟ ಪಂಕಜ್ ತ್ರಿಪಾಠಿ ನಟಿಸುತ್ತಿದ್ದು, ಅವರ ಫಸ್ಟ್ ಲುಕ್ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ರವಿ ಜಾಧವ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಫಸ್ಟ್ ಲುಕ್ ಚಿತ್ರಗಳನ್ನು ಹಂಚಿಕೊಂಡಿರುವ ಪಂಕಜ್ ತ್ರಿಪಾಠಿ ʻʻಅಟಲ್ ಜಿ ಅವರ ವ್ಯಕ್ತಿತ್ವವನ್ನು ತೆರೆಯ ಮೇಲೆ ನಿಜವಾಗಿಸಲು ನಟನೆ ಮೂಲಕ ನಾನು ಪ್ರಯತ್ತಿಸುತ್ತೇನೆ. ಈ ಪಾತ್ರವನ್ನು ನಿರ್ವಹಿಸಲು ತುಂಬ ಉತ್ಸುಕನಾಗಿದ್ದೇನೆ. ಈ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಆ ನಂಬಿಕೆ ಇದೆ ʼʼಎಂದು ಬರೆದುಕೊಂಡಿದ್ದಾರೆ. ವಿಡಿಯೊ ಮಾಂಟೇಜ್ ಅನ್ನು ಹಂಚಿಕೊಂಡು ʻʻಈ ಅಪರೂಪದ ವ್ಯಕ್ತಿತ್ವವನ್ನು ತೆರೆಯ ಮೇಲೆ ಚಿತ್ರಿಸಲು ನನಗೆ ಉತ್ತಮ ಅವಕಾಶ ಸಿಕ್ಕಿದೆ. ನಾನು ಕೃತಜ್ಞನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Film on Vajpayee | ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ

ಚಿತ್ರವನ್ನು ಭಾನುಶಾಲಿ ಸ್ಟುಡಿಯೋಸ್‌ ಹಾಗೂ ಲೆಜೆಂಡ್‌ ಸ್ಟುಡಿಯೋಸ್‌ ಪ್ರಸ್ತುತಪಡಿಸಲಿವೆ. ʼಜನ್‌ಹಿತ್‌ ಮೇ ಜಾರಿʼ ಖ್ಯಾತಿಯ ನಿರ್ಮಾಪಕರಾದ ವಿನೋದ್ ಭಾನುಶಾಲಿ ಮತ್ತು ಪಿಎಂ ನರೇಂದ್ರ ಮೋದಿ (2019) ಚಿತ್ರ ನಿರ್ಮಿಸಿದ ಸಂದೀಪ್ ಸಿಂಗ್ ಈ ಸಿನೆಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್, ಕಮಲೇಶ್ ಭಾನುಶಾಲಿ, ವಿಶಾಲ್ ಗುರ್ನಾನಿ , ಜೂಹಿ ಪರೇಖ್ ಮೆಹ್ತಾ, ಜೀಶನ್ ಅಹ್ಮದ್ ಮತ್ತು ಶಿವ್ ಶರ್ಮಾ ಸಹ-ನಿರ್ಮಾಣ ಮಾಡಿದ್ದಾರೆ.

ಸಲೀಂ ಸುಲೈಮಾನ್ ಅವರ ಸಂಗೀತ, ಸಮೀರ್ ಅವರ ಸಾಹಿತ್ಯ ಚಿತ್ರಕ್ಕಿದೆ. ಸೋನು ನಿಗಮ್‌ ಹಾಡಿದ್ದಾರೆ. ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಅನುಪಮ್ ಖೇರ್, ನೀನಾ ಗುಪ್ತಾ, ಕೊಂಕಣ ಸೇನ್ ಶರ್ಮಾ, ಅಲಿ ಫಜಲ್ ಮತ್ತು ಫಾತಿಮಾ ಸನಾ ಶೇಖ್ ತಾರಾಬಳಗ ಚಿತ್ರಕ್ಕಿದೆ. ಸದ್ಯ ಕೋಲ್ಕೊತಾದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಪಂಕಜ್ ತ್ರಿಪಾಠಿ ಅವರು ಸಂಜನಾ ಸಂಘಿ ಮತ್ತು ಪಾರ್ವತಿ ತಿರುವೋತ್ತು ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ | Film on Vajpayee | ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ತೆರೆಯ ಮೇಲೆ ಬರಲು ಸಜ್ಜು

Exit mobile version