ಬೆಂಗಳೂರು : 777 ಚಾರ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ್ದ ರಕ್ಷಿತ್ ಶೆಟ್ಟಿ ನೇತೃತ್ವದ “ಪರಂವಃ ಸ್ಟುಡಿಯೋಸ್ʼʼ ತನ್ನ ಮುಂದಿನ ಪ್ರಾಜೆಕ್ಟ್ ಅನ್ನು ರಿವೀಲ್ ಮಾಡಿದೆ. ಮುಂದಿನ ಸಿನಿಮಾದಲ್ಲಿ ನಟ ವಿಹಾನ್ ಹಾಗೂ ಕಿರುತೆರೆ ನಟಿ ಅಂಕಿತಾ ಮಿಂಚಲಿದ್ದಾರೆ.
ಚಂದ್ರಜೀತ್ ಬೆಳ್ಳಿಯಪ್ಪ ನಿರ್ದೇಶನದ ಈ ಸಿನಿಮಾದಲ್ಲಿ ರೊಮ್ಯಾನ್ಸ್ ಡ್ರಾಮಾ ಇದ್ದು ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಆಗಸ್ಟ್ ವೇಳೆಗೆ ಚಿತ್ರದ ಶೀರ್ಷಿಕೆ ರಿವೀಲ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸೆಪ್ಟೆಂಬರ್ನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.
ಇದನ್ನೂ ಓದಿ | Gargi Movie | ಅಪ್ಪ- ಮಗಳ ಎಮೋಷನ್ಗೆ ಭಾವ ನೀಡಿದ ಸಾಯಿ ಪಲ್ಲವಿ, ಟ್ವಿಟರ್ನಲ್ಲಿ ಗಾರ್ಗಿ ಹವಾ
ʻಕಾಲ್ ಕೆಜಿ ಪ್ರೀತಿʼ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ವಿಹಾನ್ ಪದಾರ್ಪಣೆ ಮಾಡಿದ್ದರು. ಯೋಗರಾಜ್ ಭಟ್ ನಿರ್ದೇಶನದ ʻಪಂಚತಂತ್ರʼ ಸಿನಿಮಾದ ಮೂಲಕ ಗಮನ ಸೆಳೆದಿದ್ದರು. ನಂತರ ಅವರಿಗೆ ಅವಕಾಶ ದೊರೆತಿರಲಿಲ್ಲ. ಈ ಹೊಸ ಚಿತ್ರದಲ್ಲಿ ಅವರು ಕಾಲೇಜ್ ವಿದ್ಯಾರ್ಥಿ, ಕ್ರಿಕೆಟ್ ಆಟಗಾರ, ಉದ್ಯಮಿಯಾಗಿ ಮಿಂಚಲಿದ್ದಾರೆ. ಈ ಮೂರು ಹಂತದ ಕಥಾ ಹಂದರವನ್ನು ಚಿತ್ರ ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಅಂಕಿತಾ ಅಮರ್ ಬಾನದಾರಿಯಲ್ಲಿ ಸಿನಿಮಾಗೆ ನಾಯಕಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿದ್ದು, ಅಷ್ಟರಲ್ಲಿಯೇ ಅವರಿಗೆ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ರಕ್ಷಿತ್ ಶೆಟ್ಟಿ ಅವರ ಸೆವೆನ್ ಆಡ್ಸ್ ತಂಡದಲ್ಲಿ ಬರಹನಾಗಿ ಗುರುತಿಸಿಕೊಂಡಿದ್ದರು. ರಿಷಬ್ ಶೆಟ್ಟಿ ಅವರ ಕಥಾ ಸಂಗಮ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಿದ್ದರು. ಅವರ ಹೊಸ ಚಿತ್ರಕ್ಕೆ ಶ್ರೀವಾತ್ಸವನ್ ಛಾಯಾಗ್ರಹಣ ಮಾಡಲಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಇದನ್ನೂ ಓದಿ | ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್