ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) 27ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಶ್ಮಿಕಾ ಅವರಿಗೆ ಅವರ ಅಭಿಮಾನಿಗಳು ಸೇರಿದಂತೆ, ಹಲವು ಪ್ರೊಡಕ್ಷನ್ ಹೌಸ್‌ಗಳು ಶುಭ ಹಾರೈಸಿವೆ. ಇದೀಗ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋಸ್ ರಶ್ಮಿಕಾಗೆ ವಿಶ್ ಮಾಡಿದೆ. ಕೆಲವು ನೆಟ್ಟಿಗರು ರಶ್ಮಿಕಾ ಅವರನ್ನು ಕಾಲೆಳೆದರೆ, ಇನ್ನು ಕೆಲವರು ರಕ್ಷಿತ್ ಶೆಟ್ಟಿ ಅವರನ್ನು ಹೊಗಳಿದ್ದಾರೆ.
2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ ಚಿತ್ರವನ್ನು ಪರಂವಃ ಸ್ಟುಡಿಯೋಸ್ ಹಾಗೂ ಪುಷ್ಕರ್ ಫಿಲ್ಮ್ಸ್ ಒಟ್ಟಾಗಿ ನಿರ್ಮಾಣ ಮಾಡಿತ್ತು. ಈ ಚಿತ್ರದಿಂದ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಮೊದಲಾದವರಿಗೆ ದೊಡ್ಡ ಬ್ರೇಕ್ ಸಿಕ್ಕಿತು. ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿ ಶುರುವಾಗಿದ್ದು ಇದೇ ಸಿನಿಮಾದಿಂದ. ಇಬ್ಬರೂ ಹಲವು ಸಮಯ ಪ್ರೀತಿಯಲ್ಲಿದ್ದರು. ಇವರ ನಿಶ್ಚಿತಾರ್ಥ ಕೂಡ ಆಯಿತು. ಆದರೆ, ಈ ಎಂಗೇಜ್ಮೆಂಟ್ ಹೆಚ್ಚು ದಿನ ಉಳಿಯಲೇ ಇಲ್ಲ. ಇವರ ಸಂಬಂಧ ಮುರಿದುಬಿತ್ತು. ಕಳೆದ ವರ್ಷವೂ ರಕ್ಷಿತ್ ವಿಶ್ ಮಾಡಿದರೂ ಈ ಸಲವೂ ರಕ್ಷಿತ್ ವಿಶ್ ಮಾಡಿದ್ದಾರೆ. ಆದರೆ ನಿರ್ಮಾಣ ಸಂಸ್ಥೆ ಮೂಲಕ.
ಇದನ್ನೂ ಓದಿ:Rashmika Mandanna: ಹೊಸ ಪೋಸ್ಟರ್ ಹಂಚಿಕೊಂಡ ಮೈತ್ರಿ ಮೂವಿ ಮೇಕರ್ಸ್, ಮಿಂಚಿದ ʻಭೀಷ್ಮʼ ಬ್ಯೂಟಿ
ಪರಂವಃ ಸ್ಟುಡಿಯೋಸ್
ʻʻರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಂತೋಷ, ನಗು ಮತ್ತು ಯಶಸ್ಸಿನಿಂದ ಈ ವರ್ಷ ತುಂಬಿರಲಿ’ʼʼಎಂದು ಪರಂವಃ ಸ್ಟುಡಿಯೋಸ್ ವತಿಯಿಂದ ವಿಶ್ ಮಾಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ʻʻನಿಜವಾದ ಕರ್ಣ ಗುರು ನೀನುʼʼ ಎಂದು ರಕ್ಷಿತ್‌ಗೆ ಹೇಳಿದ್ದಾರೆ. , ‘ನಿಮ್ಮ ಹುಟ್ಟುಹಬ್ಬ ಇದ್ದಾಗ ತಿರುಗೂ ನೋಡಲ್ಲ ಇಷ್ಟು ಒಳ್ಳೆ ತನ ಯಾಕಣ್ಣ’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʻʻ ರಕ್ಷಿತ್ ಅವರಿಗೋಸ್ಕರ ರಶ್ಮಿಕಾರನ್ನು ಅನ್‌ಫಾಲೋ ಮಾಡಿದ್ವಿ, ರಿಷಬ್ ಶೆಟ್ಟಿ ಅವರೇ ರಕ್ಷಿತ್‌ಗೆ ಬುದ್ದಿ ಹೇಳಿ, ಊರಿಗೆ ಇವಳೊಬ್ಬಳೆನಾ ಪದ್ಮಾವತಿ?ʼʼಎಂದು ಬರೆದಿದ್ದಾರೆ. ರಶ್ಮಿಕಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, VNRTrio ಸಿನಿಮಾ, ಪುಷ್ಪ-2 ಸಿನಿಮಾಗಳಲ್ಲಿ ತೊಡಗಿದ್ದಾರೆ.