Site icon Vistara News

Parineeti and Raghav : ರಾಘವ್‌ ಜತೆ ಪರಿಣಿತಿ ಚೋಪ್ರಾ ಲವ್ವಲ್ಲಿ ಬಿದ್ದಿದ್ದು ಹೇಗೆ? ಇದು ಒಂದು ತಿಂಡಿಯ ಕಥೆ!

#image_title

ನವದೆಹಲಿ: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಛಡ್ಡಾ (Parineeti and Raghav) ನಿಶ್ಚಿತಾರ್ಥ ಮಾಡಿಕೊಂಡು ವಾರ ಕಳೆದಿದೆ. ಇದೀಗ ನಟಿ ತಮ್ಮ ಜೀವನದಲ್ಲಿ ರಾಘವ್‌ ಬಗ್ಗೆ ಪ್ರೀತಿ ಹುಟ್ಟಿದ್ದು ಹೇಗೆ ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಪರಿಣಿತಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿಶ್ಚಿತಾರ್ಥದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಪ್ರೇಮಕಥೆಯ ಬಗ್ಗೆಯೂ ಬರೆದುಕೊಂಡಿದ್ದಾರೆ. “ನಾವಿಬ್ಬರೂ ಒಟ್ಟಿಗೆ ಒಮ್ಮೆ ಉಪಾಹಾರ ಮಾಡಿದ್ದೆವು. ಆಗಲೇ ನನಗೆ ಗೊತ್ತಾಯಿತು ಇದು ನನ್ನ ಜೀವ ಎಂದು. ಉಪಾಹಾರ ಕೂಟದ ಆ ಮೊದಲ ಭೇಟಿಯಲ್ಲೇ ನಾನು ಅವರಲ್ಲಿ ಭಾವಪರವಶವಾದೆ. ಅತ್ಯಂತ ಅದ್ಭುತ ವ್ಯಕ್ತಿ ಅವರು. ಅವರ ಶಾಂತವಾದ ಶಕ್ತಿಯು ಸ್ಫೂರ್ತಿದಾಯಕ. ಅವರ ಬೆಂಬಲ, ಹಾಸ್ಯ, ಬುದ್ಧಿ ಮತ್ತು ಸ್ನೇಹವು ನನಗೆ ಖುಷಿಯ ಸಂಗತಿ. ಅವರೇ ನನ್ನ ಮನೆ” ಎಂದು ಪರಿಣಿತಿ ಹೇಳಿದ್ದಾರೆ.

ಇದನ್ನೂ ಓದಿ: Parineeti And Raghav : ಪರಿಣಿತಿ ಚೋಪ್ರಾ ನಿಶ್ಚಿತಾರ್ಥದ ಮನಮುಟ್ಟುವ ಪೋಸ್ಟ್‌ ಹಾಕಿದ ತಾಯಿ ರೀನಾ
ಹಾಗೆಯೇ, “ನಮ್ಮ ನಿಶ್ಚಿತಾರ್ಥದ ಪಾರ್ಟಿಯು ಒಂದು ಕನಸಿನಂತೆ ಇತ್ತು. ಅದು ಪ್ರೀತಿ, ನಗು, ಭಾವನೆಗಳು ಮತ್ತು ನೃತ್ಯಗಳ ನಡುವೆ ಸುಂದರವಾಗಿ ತೆರೆದುಕೊಂಡ ಕನಸು. ನಾವು ಆತ್ಮೀಯವಾಗಿ ಪ್ರೀತಿಸುವವರನ್ನು ತಬ್ಬಿಕೊಂಡು ಅವರೊಂದಿಗೆ ಸಂಭ್ರಮಿಸುವಾಗ, ಭಾವನೆಗಳು ಉಕ್ಕಿ ಹರಿಯುತ್ತವೆ. ರಾಜಕುಮಾರಿಯ ಕಥೆಗಳನ್ನು ಕೇಳುತ್ತಾ, ನನ್ನ ಕಾಲ್ಪನಿಕ ಕಥೆಯು ಹೇಗೆ ಪ್ರಾರಂಭವಾಗುತ್ತದೆ ಎಂದು ನಾನು ಊಹಿಸಿದ್ದೆ. ಈಗ ಅದು ನನಸಾಗಿದೆ. ನಾನು ಊಹಿಸಿದ್ದಕ್ಕಿಂತಲೂ ಉತ್ತಮವಾಗಿ ನನಸಾಗಿದೆ” ಎಂದೂ ಪರಿಣಿತಿ ಹೇಳಿದ್ದಾರೆ.

ಪರಿಣಿತಿ ಮತ್ತು ರಾಘವ್‌ ಛಡ್ಡಾ ಅವರು ಮೇ 13ರಂದು ದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಅವರಿಬ್ಬರು ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆಗಲೇ ಅವರ ಮದುವೆಯ ಬಗ್ಗೆ ಚರ್ಚೆಗಳು ಆರಂಭವಾಗಿತ್ತು. ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ಚಮ್ಕೀಲಾ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.

Exit mobile version