Site icon Vistara News

Parineeti Chopra: ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌?

Parineeti Chopra and Raghav Chadha engaged in Delhi

ಬೆಂಗಳೂರು: ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್​ ಚಡ್ಡಾ (Raghav Chadha) ಜತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಸಾಕಷ್ಟು ದಿನದಿಂದ ಹರಿದಾಡುತ್ತಿದೆ. ಇವರಿಬ್ಬರ ನಿಶ್ಚಿತಾರ್ಥ ಮೇ 13ರಂದು ನವದೆಹಲಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಸಮಾರಂಭದಲ್ಲಿ ಪರಿಣಿತಿ ಮತ್ತು ರಾಘವ್ ಅವರ ಕುಟುಂಬಗಳು ಮತ್ತು ಅವರ ಆಪ್ತರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಪರಿಣಿತಿ ಚೋಪ್ರಾ- ರಾಘವ್​ ಚಡ್ಡಾ ಪದೇಪದೆ ಒಟ್ಟಿಗೆ ಕಾಣಿಸಿಕೊಂಡಿದ್ದೇ ಹೀಗೊಂದು ಸುದ್ದಿ ಹುಟ್ಟಲು ಕಾರಣ. ಕಳೆದ ಚೋಪ್ರಾ ಮತ್ತು ಚಡ್ಡಾ ಕಳೆದ ತಿಂಗಳು ಎರಡ್ಮೂರು ಬಾರಿ ಒಟ್ಟೊಟ್ಟಿಗೆ ರೆಸ್ಟೋರೆಂಟ್​ಗೆ ಹೋಗಿದ್ದರು. ಅವರು ಒಂದೇ ಕಾರಿನಲ್ಲಿ ಹೋಗಿ ಹೋಟೆಲ್​ ಮುಂದೆ ಇಳಿಯುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗೆ ಈ ಜೋಡಿ ಬಗ್ಗೆ ಇಂಟರ್​ನೆಟ್​​ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈಗೊಂದು ಹೊಸ ಸುದ್ದಿ ಎದ್ದಿದೆ. ‘ಅಕ್ಟೋಬರ್​ ಕೊನೆಯಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ’ ಎಂದು ಹೇಳಲಾಗಿದೆ.

ನಿಶ್ಚಿತಾರ್ಥ ಬಗ್ಗೆ ಮಾಧ್ಯಮವೊಂದು ʻʻದೆಹಲಿಯಲ್ಲಿ ನಿಶ್ಚಿತಾರ್ಥ ನಡೆದ ದಿನ ಅತಿಥಿಗಳಿಗೆ ಊಟವನ್ನು ಏರ್ಪಡಿಸಲಾಗುತ್ತಿದೆ. ಪರಿಣಿತಿ ಮತ್ತು ರಾಘವ್ ಅವರ ರೋಕಾ ಮುಗಿದಿದೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಇವರಿಬ್ಬರು ಮದುವೆಯಾಗುವ ಸಾಧ್ಯತೆಯಿದೆʼʼ ಎಂದು ಮೂಲಗಳು ತಿಳಿಸಿದೆ.

ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾಗಿದ್ದಾರಂತೆ ಆಪ್​ ನಾಯಕ ರಾಘವ್ ಚಡ್ಡಾ- ನಟಿ ಪರಿಣೀತಿ ಚೋಪ್ರಾ; ಅಕ್ಟೋಬರ್​ ಅಂತ್ಯಕ್ಕೆ ಮದುವೆ?

ಕುತೂಹಲಕಾರಿ ಸಂಗತಿಯೆಂದರೆ, ಪರಿಣಿತಿ ಅವರ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ ಅದೇ ಸಮಯದಲ್ಲಿ ʻಜಿಯೋ ಮಾಮಿʼ ಚಲನಚಿತ್ರೋತ್ಸವಕ್ಕಾಗಿ ಭಾರತದಲ್ಲಿರುತ್ತಾರೆ. ಪರಿಣಿತಿ ಮತ್ತು ರಾಘವ್​ ಚಡ್ಡಾ ಇವರಿಬ್ಬರಿಗೂ 34 ವರ್ಷ. ಪರಿಣಿತಿ ಬಾಲಿವುಡ್​​ ನಟಿ, ರಾಘವ್​ ಚಡ್ಡಾ ರಾಜಕೀಯದಲ್ಲಿ ಚಾಪು ಮೂಡಿಸಿದವರು. ಇತ್ತೀಚೆಗೆ ಪರಿಣಿತಿ ಚೋಪ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಎಡಗೈ ಉಂಗುರದ ಬೆರಳಿಗೆ ಬೆಳ್ಳಿಯ ಬ್ಯಾಂಡ್​ ಇತ್ತು. ಇದೇ ಕಾರಣಕ್ಕೆ ರೋಕಾ ಆಚರಣೆ ನಡೆದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಿಣಿತಿ ಮೂಲತಃ ಹರ್ಯಾಣದವರು ಆಗಿದ್ದರಿಂದ ಅಲ್ಲಿನ ಸಂಪ್ರದಾಯದ ಪ್ರಕಾರ ಮದುವೆ ಗೊತ್ತಾದ ಬಳಿಕ ನಿಶ್ಚಿತಾರ್ಥಕ್ಕೂ ಪೂರ್ವ ವಧು ಮತ್ತು ವರನ ಕುಟುಂಬದವರು ಸೇರಿಕೊಂಡು ಈ ರೋಕಾ ಆಚರಣೆ ಮಾಡುತ್ತಾರೆ. ಹುಡುಗಿ-ಹುಡುಗ ಇಬ್ಬರಿಗೂ ತಿಲಕ ಇಡಲಾಗುತ್ತದೆ. ಅಲಂಕಾರ ಮಾಡಲಾಗುತ್ತದೆ. ಎರಡೂ ಕುಟುಂಬದವರೂ ಪರಸ್ಪರರಿಗೆ ಉಡುಗೊರೆ ಕೊಡುತ್ತಾರೆ. ಇದು ಮದುವೆಯಾಗಲು ಒಪ್ಪಿದ್ದಕ್ಕೆ ಮೊದಲ ಸಮಾರಂಭವಾಗಿದೆ.

Exit mobile version