Site icon Vistara News

Parineeti Chopra: ದೇವನಾಗರಿ ಲಿಪಿಯಲ್ಲಿ ʻರಾಘವ್ʼ ಹೆಸರು; ಲೆಹೆಂಗಾ ತಯಾರಿಸಲು 104 ದಿನಗಳು ಬೇಕಾಯ್ತು!

Parineeti Chopra

ಬೆಂಗಳೂರು: ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadh) ಹಾಗೂ ನಟಿ ಪರಿಣಿತಿ ಚೋಪ್ರಾ (Parineeti Chopra) ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ಹೊಟೇಲ್‌ನಲ್ಲಿ ಸೆ. 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಸಂಭ್ರಮದ ಪೋಟೊಗಳನ್ನು ಪರಿಣಿತಿ ಚೋಪ್ರಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಮನೀಷ್ ಮಲ್ಹೋತ್ರಾ ಅವರು ವಿನ್ಯಾಸಗೊಳಿಸಿದ ಲೆಹಂಗಾ ಧರಿಸಿದ್ದರು ಪರಿಣಿತಿ ಚೋಪ್ರಾ. ಪರಿಣಿತಿ ಪರಿಣಿತಿ ಚೋಪ್ರಾ ಧರಿಸಿದ್ದ ಲೆಹಂಗಾವನ್ನು ತಯಾರಿಸಲು ಬರೋಬ್ಬರಿ 104 ದಿನಗಳು ತೆಗೆದುಕೊಂಡಿತು ಎಂದು ವಿನ್ಯಾಸಕಾರರು ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.

ಪರಿಣಿತಿ ಅವರು ಧರಿಸಿದ್ದ ವೈಟ್ ದುಪಟ್ಟಾ ಮೇಲೆ ಗೋಲ್ಡನ್ ಶೈನಿಂಗ್​ನಲ್ಲಿ ರಾಘವ್ ಎಂದು ಬರೆಯಲಾಗಿತ್ತು. ಇದನ್ನು ಧರಿಸಿ ನಡೆದುಕೊಂಡು ಹೋಗುವ ಫೋಟೊವನ್ನು ಕ್ಲಿಕ್ ಮಾಡಲಾಗಿದೆ. ಬ್ರೇಕ್​ಫಾಸ್ಟ್ ಟೇಬಲ್​ನಿಂದ ಇಲ್ಲಿಯವರೆಗೆ ಎಂದು ನಟಿ ಫೋಟೊಗಳ ಜತೆ ಕ್ಯಾಪ್ಶನ್ ಬರೆದಿದ್ದಾರೆ. ದೇವನಾಗರಿ ಲಿಪಿಯಲ್ಲಿ ʻರಾಘವ್ʼ ಹೆಸರು ಪ್ರಮುಖ ಹೈಲೈಟ್‌ ಆಗಿತ್ತು.

ಈ ಬಗ್ಗೆ ಮನೀಷ್ ಮಲ್ಹೋತ್ರಾ ಮಾತನಾಡಿ “ಟೋನಲ್ ಎಕ್ರು ಬೇಸ್ ( tonal ecru base) ಟೋನ್‌ನಲ್ಲಿ ಕೈ ಕಸೂತಿಯಿಂದ ತಯಾರಿಸಲಾಗಿದೆ. ವಿಂಟೇಜ್ ಗೋಲ್ಡ್‌ ಥ್ರೆಡ್‌ ಮಾದರಿಯಲ್ಲಿ ಬಳಸಲಾಗಿದೆ. ನಕ್ಷಿ ಮತ್ತು ಮೆಟಲ್ ಸ್ಪರ್ಶ ಕೂಡ ಇದಕ್ಕಿದೆ. ಎಂಎಂಬ್ಲೌಸ್ (mmblouse) ಮತ್ತು ಟ್ಯೂಲ್ ಫ್ರೇಮ್‌ವರ್ಕ್ (tulle framework) ದುಪಟ್ಟಾ ಮುತ್ತುಗಳಿಂದ ಅಲಂಕರಿಸಲ್ಪಟ್ಟಿದೆʼʼ ಎಂದು ಹೇಳಿಕೊಂಡಿದ್ದಾರೆ. ದೇವನಾಗರಿ ಲಿಪಿಯಲ್ಲಿ ರಾಘವ್ ಹೆಸರನ್ನು ಕಲಾತ್ಮಕತೆಯಿಂದ ಲೆಹೆಂಗಾದಲ್ಲಿ ರಚಿಸಲಾಗಿದೆ. ಜಾಂಬಿಯನ್ ಮತ್ತು ರಷ್ಯನ್ ಫಿನಿಶಿಂಗ್‌ ಕೂಡ ಇದೆ ಎಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: Parineeti Chopra: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ; ಕ್ಯೂಟ್‌ ಫೋಟೋಸ್ ಔಟ್‌!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್ ಸಿಎಂ ಭಗವಂತ್ ಮಾನ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಮತ್ತು ಮನೀಶ್ ಮಲ್ಹೋತ್ರಾ ಮದುವೆಯಲ್ಲಿ ಭಾಗಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ಅವರು ಪರಿಣಿತಿ ವಿವಾಹಕ್ಕೆ ಗೈರಾಗಿದ್ದು ಪ್ರಿಯಾಂಕಾ ತಾಯಿ ಮಧು ಚೋಪ್ರಾ ಮದುವೆಯಲ್ಲಿ ಪಾಲ್ಗೊಂಡಿದ್ದರು. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷ ಮೇ 13ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.

ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ʼಚಮ್ಕೀಲಾʼ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.

Exit mobile version