Site icon Vistara News

Parineeti Chopra: ಪರಿಣಿತಿ ಚೋಪ್ರಾ ಗರ್ಭಿಣಿ?; ಊಹಾಪೋಹಕ್ಕೆ ನಟಿಯ ಪ್ರತಿಕ್ರಿಯೆ ಇದು

Parineeti Chopra

Parineeti Chopra

ಮುಂಬೈ: ಕೆಲವು ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ (Parineeti Chopra) ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯನ್ನು ಸ್ವತಃ ನಟಿಯೇ ನಿರಾಕರಿಸಿದ್ದಾರೆ. ಪರಿಣಿತಿ ಚೋಪ್ರಾ ಇತ್ತೀಚೆಗೆ ದಿಲ್ಜಿತ್ ದೋಸಾಂಜ್ (Diljit Dosanjh) ಅವರೊಂದಿಗೆ ನಟಿಸಿರುವ ತಮ್ಮ ಮುಂಬರುವ ನೆಟ್‌ಫ್ಲಿಕ್‌ ಚಿತ್ರ ʼಚಮ್ಕಿಲಾʼ (Chamkila)ದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಸಡಿಲವಾದ ಕಪ್ಪು ‘ಕಫ್ತಾನ್ ಡ್ರೆಸ್’ (Kaftan dress) ಧರಿಸಿ ಬಂದಿದ್ದರು. ಅವರು ಗರ್ಭಿಣಿಯಾಗಿದ್ದು, ತನ್ನ ಬೇಬಿ ಬಂಪ್ ಅನ್ನು ಮರೆ ಮಾಚಲು ಈ ರೀತಿಯ ಸಡಿಲವಾದ ಉಡುಗೆ ಧರಿಸಿದ್ದಾರೆ ಎಂದು ಹಲವರು ಸುದ್ದಿ ಹಬ್ಬಿಸಿದ್ದರು. ಇದೀಗ ಅವರು ಫಿಟ್‌ ಆದ ಡ್ರೆಸ್‌ ತೊಟ್ಟು ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಪರಿಣಿತಿ ಚೋಪ್ರಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಏನಿದೆ?

ಪರಿಣಿತಿ ಚೋಪ್ರಾ ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊವೊಂದನ್ನು ಪೋಸ್ಟ್‌ ಮಾಡುವ ಮೂಲಕ ಊಹಾಪೋಹ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಬಳಿ ಬಣ್ಣದ ಬಿಗಿಯಾದ ಬ್ಲೇಜರ್ ಉಡುಪನ್ನು ಧರಿಸಿ ಪೋಸ್‌ ನೀಡಿದ್ದಾರೆ. ಜತೆಗೆ ಕಪ್ಪು ಬಣ್ಣದ ಸಡಿಲವಾದ ‘ಕಫ್ತಾನ್ ಡ್ರೆಸ್‌’ ಧರಿಸಿದ್ದ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಗರ್ಭಿಣಿ ಎಂದು ಊಹಿಸಿ ಬರೆದಿದ್ದ ವರದಿಗಳನ್ನೂ ಉಲ್ಲೇಖಿಸಿದ್ದಾರೆ. ವಿಡಿಯೊದ ಕೊನೆಗೆ ಈ ಸುದ್ದಿ ನಿಜವಲ್ಲ ಎನ್ನುವಂತೆ ತಲೆ ಅಲುಗಿಸಿದ್ದಾರೆ. ಹೀಗೆ ಈ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸಂಶಯಕ್ಕೆ ಕಾರಣವಾಗಿದ್ದು ಉಡುಪು

ಮಾರ್ಚ್‌ 28ರಂದು ಪರಿಣಿತಿ ಸಡಿಲ ಉಡುಗೆಯಲ್ಲಿ ಕಾಣಿಸಿಕೊಂಡ ಬಳಿಕ ಹರಡಿದ್ದ ಪ್ರೆಗ್ನೆಂಟ್‌ ಎನ್ನುವ ಊಹಾಪೋಹಕ್ಕೆ ಅವರು ಇನ್ನೊಂದು ರೀತಿಯಲ್ಲಿಯೂ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ, ʼʼಕಫ್ತಾನ್‌ ಡ್ರೆಸ್ = ಪ್ರೆಗ್ನೆನ್ಸಿ, ಓವರ್‌ ಸೈಟ್‌ ಷರ್ಟ್‌ = ಪ್ರೆಗ್ನೆನ್ಸಿ, ಕುರ್ತಾ = ಪ್ರೆಗ್ನೆನ್ಸಿʼʼ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ನಟಿಯರು ತೊಡುವ ಬಟ್ಟೆಯ ಆಧಾರದಲ್ಲಿ ಅವರನ್ನು ಗರ್ಭಿಣಿ ಎಂದು ಕರೆಯುವ ಕೆಲವರ ಮನೋಸ್ಥಿತಿಯನ್ನು ವ್ಯಂಗ್ಯವಾಡಿದ್ದಾರೆ.

ಆಪ್ತರು ಹೇಳಿದ್ದೇನು?

ಕೆಲವು ವಾರಗಳ ಹಿಂದೆ ಹಲವು ಮಾಧ್ಯಮಗಳು ಪರಿಣಿತಿ ಗರ್ಭಿಣಿಯಾಗಿರಬಹುದು ಎಂದು ಊಹಿಸಿ ವರದಿ ಮಾಡಿದ್ದವು. ಆದರೆ ಅವರ ಆಪ್ತರು ಈ ಸುದ್ದಿಯನ್ನು ನಿರಾಕಸಿದ್ದರು. “ಗರ್ಭಧಾರಣೆಯ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಈ ಸಮಯದಲ್ಲಿ ಅವರು ಹಲವಾರು ನಗರಗಳ ನಡುವೆ ಓಡುತ್ತಿದ್ದಾರೆ. ಒಬ್ಬರ ಉಡುಗೆಯ ಆಯ್ಕೆಯು ಇಂತಹ ಊಹಾಪೋಹಗಳಿಗೆ ಕಾರಣವಾಗಬಹುದು ಮತ್ತು ವೈಯಕ್ತಿಕ ಜೀವನದಲ್ಲಿ ನುಸುಳಬಹುದು ಎಂಬುದು ತಿಳಿದು ಅಚ್ಚರಿಯಾಗುತ್ತದೆʼʼ ಎಂದು ಹೇಳಿದ್ದರು.

ಇದನ್ನೂ ಓದಿ: Parineeti Chopra: ಮದುವೆಯಾದ 7 ತಿಂಗಳಿಗೆ ಗರ್ಭಿಣಿಯಾದ್ರಾ ಪರಿಣಿತಿ ಚೋಪ್ರಾ?

ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪರಿಣಿತಿ ಚೋಪ್ರಾ ಉದಯ್ ಪುರದ ಲೀಲಾ ಪ್ಯಾಲೇಸ್ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರಿಸಿದ್ದರು. ಪರಿಣಿತಿ ಅವರು ʼಚಮ್ಕೀಲಾʼ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರ ಪರಿಚಯವಾಗಿ ಬಳಿಕ ಇಬ್ಬರು ಪರಸ್ಪರ ಪ್ರೀತಿಸತೊಡಗಿದ್ದರು ಎಂದು ಮೂಲಗಳು ತಿಳಿಸಿವೆ. ʼಚಮ್ಕೀಲಾʼ ಚಿತ್ರ ಏಪ್ರಿಲ್‌ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ. ಇಮ್ತಿಯಾಸ್‌ ಅಲಿ ನಿರ್ದೇಶನದ ಈ ಸಿನಿಮಾ ಪಂಜಾಬಿ ಗಾಯಕ ಅಮರ್‌ ಸಿಂಗ್‌ ಚಮ್ಕೀಲಾ ಮತ್ತು ಅವರ ಪತ್ನಿ ಅಮರ್ಜೋತ್‌ ಜೀವನವನ್ನು ಆಧರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version