ಬೆಂಗಳೂರು: ಪರಿಣಿತಿ ಚೋಪ್ರಾ (Parineeti Chopra) ಮತ್ತು ರಾಘವ್ ಚಡ್ಡಾ ಇಂದು (ಸೆ.24) ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಮದುವೆಗೆ ಮುಂಚಿತವಾಗಿ, ಜೋಡಿ ಪಂಜಾಬಿ ಶೈಲಿಯಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಈ ವೇಳೆ ಪರಿಣಿತಿ ಚೋಪ್ರಾ ಅವರ ಮೆಹೆಂದಿನೋಡುಗರ ಗಮನ ಸೆಳೆದಿದೆ. ಹೊಸ ರೀತಿಯ ಮೆಹಂದಿ ವಿನ್ಯಾಸದೊಂದಿಗೆ ಪರಿಣಿತಿ ಚೋಪ್ರಾ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.
ಆಲಿಯಾ ಭಟ್ ಮತ್ತು ಕಿಯಾರಾ ಆಡ್ವಾಣಿ ಕೂಡ ಸಿಂಪಲ್ ಆಗಿ ಮೆಹಂದಿಯನ್ನು ಹಾಕಿಕೊಂಡು ಮದುವೆ ಸಂದರ್ಭದಲ್ಲಿ ಸಖತ್ ಚರ್ಚೆಯಲ್ಲಿದ್ದರು. ಇದೇ ಸಾಲಿಗೆ ಪರಿಣಿತಿ ಚೋಪ್ರಾ ಕೂಡ ಸೇರಿದ್ದಾರೆ. ಸರಳ ವಿನ್ಯಾಸದ ಮೆಹಂದಿಯನ್ನು ಪರಿಣಿತಿ ಆಯ್ಕೆ ಮಾಡಿಕೊಂಡಿದ್ದಾರೆ.
ಹಲವಾರು ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ರಾಜಕಾರಣಿಗಳು ಮದುವೆ ಸಮಾರಂಭಕ್ಕೆ ಭಾಗವಹಿಸಲು ಈಗಾಗಲೇ ಉದಯಪುರಕ್ಕೆ ಆಗಮಿಸಿದ್ದಾರೆ. ಪರಿಣಿತಿ ಚೋಪ್ರಾ ಅವರ ಸೋದರ ಸಂಬಂಧಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಇನ್ನೂ ಅಮೆರಿಕಾದಲ್ಲಿಯೇ ಇದ್ದಾರೆ ಎನ್ನಲಾಗುತ್ತಿದೆ. ಪ್ರಿಯಾಂಕಾ ಚೋಪ್ರಾ , ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಜತೆಗೆ ಅವರಿನ್ನೂ ಭಾರತವನ್ನು ತಲುಪಿಲ್ಲ. ಅವರು ಮದುವೆಗೆ ಬರುವುದಿಲ್ಲ ಎಂದು ಈಗಾಗಲೇ ಹಲವೆಡೆ ವರದಿಯಾಗಿದೆ. ಪ್ರಿಯಾಂಕಾ ಚೋಪ್ರಾ ಈಗಾಗಲೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಣಿತಿ ಅವರಿಗೆ ಶುಭ ಹಾರೈಸಿದ್ದಾರೆ. ಹೀಗಾಗಿ ಮದುವೆಗೆ ಬರುವುದಿಲ್ಲ ಎಂಬ ಸುಳಿವನ್ನೂ ಈಗಾಗಲೇ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Parineeti Chopra: ಮದುವೆಯಲ್ಲಿ ಫೋನ್, ಕ್ಯಾಮೆರಾಗಳಿಗೆ ಟೇಪ್, 100 ಭದ್ರತಾ ಸಿಬ್ಬಂದಿ!
ಮದುವೆಯಲ್ಲಿ ಫೋನ್, ಕ್ಯಾಮೆರಾಗಳಿಗೆ ಟೇಪ್, 100 ಭದ್ರತಾ ಸಿಬ್ಬಂದಿ
ವಿವಾಹದಲ್ಲಿ 100 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಮದುವೆಯಲ್ಲೂ ಕಟ್ಟುನಿಟ್ಟಿನ ಭದ್ರತಾ ನಿಯಮಗಳಿವೆ. ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ. ಮದುವೆ ಸಮಾರಂಭದಲ್ಲಿ ಯಾವುದೇ ವಿಡಿಯೊ-ಫೋಟೋಗ್ರಾಫ್ ತೆಗೆದುಕೊಳ್ಳುವಂತಿಲ್ಲ. ಈ ನೀಲಿ ಟೇಪ್‌ನ ವಿಶೇಷತೆ ಏನೆಂದರೆ, ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಅಳವಡಿಸಿದ ನಂತರ ಯಾರಾದರೂ ಅದನ್ನು ತೆಗೆದರೆ, ಟೇಪ್‌ನಲ್ಲಿ ಬಾಣದ ಚಿಹ್ನೆ ಗೋಚರಿಸುತ್ತದೆ. ಸೆಕ್ಯೂರಿಟಿ ಅವರು ಪರಿಶೀಲಿಸಿದಾಗ ಕ್ಯಾಮೆರಾ ಬಳಸಲು ಟೇಪ್ ತೆಗೆದಿರುವುದು ಗೊತ್ತಾಗಿ ಬಿಡುತ್ತದೆ. ಈ ನಿರ್ಬಂಧವು ವಿಶೇಷವಾಗಿ ಹೋಟೆಲ್ ಸಿಬ್ಬಂದಿಗೆ, ಬಾಣಸಿಗರಿಗೆ ಅನ್ವಯಿಸುತ್ತದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ.
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷ ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.
ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ʼಚಮ್ಕೀಲಾʼ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.