ಬೆಂಗಳೂರು: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಪರಿಣಿತಿ ಚೋಪ್ರಾ (Parineeti Chopra) ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥ ಸಮಾರಂಭದ ಮೊದಲ ಚಿತ್ರವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸಮಾರಂಭದಲ್ಲಿ ಪ್ರಿಯಾಂಕಾ ಬಿಳಿ ಸೀರೆ ಉಟ್ಟು ಬರಲಿದ್ದಾರಂತೆ. ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಿಯಾಂಕಾ ಉಡುಪಿನ ಕ್ಲೋಸ್ ಅಪ್ ಶಾಟ್ ಹಂಚಿಕೊಂಡಿದ್ದಾರೆ.
ಮೊನ್ನೆಯಷ್ಟೇ ಪ್ರಿಯಾಂಕಾ ದೆಹಲಿಗೆ ಬಂದಿಳಿದರು. ಪ್ರಿಯಾಂಕಾ ಅವರು ಬೇಸ್ಬಾಲ್ ಕ್ಯಾಪ್ ಮತ್ತು ಸನ್ಗ್ಲಾಸ್ನೊಂದಿಗೆ ಕಾಫಿ ಬ್ರೌನ್ ಉಡುಪನ್ನು ಧರಿಸಿದ್ದರು. ನಿಕ್ ಜೋನಾಸ್ ಮತ್ತು ಮಗಳು ಮಾಲತಿ ಮೇರಿ ಅವರೊಂದಿಗೆ ಕಾಣಿಸಿಕೊಂಡಿಲ್ಲ. ಪರಿಣಿತಿ ಮತ್ತು ರಾಘವ್ ಕನ್ನಾಟ್ ಪ್ಲೇಸ್ನಲ್ಲಿರುವ ಕಪುರ್ತಲಾ ಹೌಸ್ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಿಶ್ಚಿತಾರ್ಥವು ಸಂಜೆ 5 ಗಂಟೆಗೆ ಪ್ರಾರಂಭವಾಗಿದೆ. ರಾತ್ರಿ 8 ಗಂಟೆಗೆ ಉಂಗುರಗಳನ್ನು ಬದಲಾಯಿಸಿಕೊಳ್ಳಲಿದೆ ಜೋಡಿ ಎಂದುಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸಮಾರಂಭದಲ್ಲಿ ಪರಿಣಿತಿ ಮತ್ತು ರಾಘವ್ ಅವರ ಕುಟುಂಬಗಳು ಮತ್ತು ಅವರ ಆಪ್ತರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಪದೇಪದೆ ಒಟ್ಟಿಗೆ ಕಾಣಿಸಿಕೊಂಡಿದ್ದೇ ಹೀಗೊಂದು ಸುದ್ದಿ ಹುಟ್ಟಲು ಕಾರಣ. ಕಳೆದ ಚೋಪ್ರಾ ಮತ್ತು ಚಡ್ಡಾ ಕಳೆದ ತಿಂಗಳು ಎರಡ್ಮೂರು ಬಾರಿ ಒಟ್ಟೊಟ್ಟಿಗೆ ರೆಸ್ಟೋರೆಂಟ್ಗೆ ಹೋಗಿದ್ದರು. ಅವರು ಒಂದೇ ಕಾರಿನಲ್ಲಿ ಹೋಗಿ ಹೋಟೆಲ್ ಮುಂದೆ ಇಳಿಯುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Parineeti Chopra : ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ನಿಶ್ಚಿತಾರ್ಥಕ್ಕೆ ದೆಹಲಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ?
ನಿಶ್ಚಿತಾರ್ಥ ಬಗ್ಗೆ ಮಾಧ್ಯಮವೊಂದು ʻʻದೆಹಲಿಯಲ್ಲಿ ನಿಶ್ಚಿತಾರ್ಥ ನಡೆದ ದಿನ ಅತಿಥಿಗಳಿಗೆ ಊಟವನ್ನು ಏರ್ಪಡಿಸಲಾಗುತ್ತಿದೆ. ಪರಿಣಿತಿ ಮತ್ತು ರಾಘವ್ ಅವರ ರೋಕಾ ಪದ್ಧತಿ ಮುಗಿದಿದೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಇವರಿಬ್ಬರು ಮದುವೆಯಾಗುವ ಸಾಧ್ಯತೆಯಿದೆʼʼ ಎಂದು ಮೂಲಗಳು ತಿಳಿಸಿದೆ.
ಪರಿಣಿತಿ ಮತ್ತು ರಾಘವ್ ಚಡ್ಡಾ ಇವರಿಬ್ಬರಿಗೂ 34 ವರ್ಷ. ಪರಿಣಿತಿ ಬಾಲಿವುಡ್ ನಟಿ, ರಾಘವ್ ಚಡ್ಡಾ ರಾಜಕೀಯದಲ್ಲಿ ಚಾಪು ಮೂಡಿಸಿದವರು. ಇತ್ತೀಚೆಗೆ ಪರಿಣಿತಿ ಚೋಪ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಎಡಗೈ ಉಂಗುರದ ಬೆರಳಿಗೆ ಬೆಳ್ಳಿಯ ಬ್ಯಾಂಡ್ ಇತ್ತು.