ಬೆಂಗಳೂರು: ಪಾರ್ವತಮ್ಮ ರಾಜ್ಕುಮಾರ್ (Parvathamma Rajkumar) ಅವರ ತಮ್ಮ ಶ್ರೀನಿವಾಸ್ ಪುತ್ರನಾದ ಸೂರಜ್ (ಧ್ರುವನ್) (Kannada Actor Suraj) ಅವರು ಗಂಭೀರ ಅಪಘಾತಕ್ಕೆ ಒಳಗಾಗಿದ್ದಾರೆ. ಅಪಘಾತದಲ್ಲಿ ಯುವ ನಟ ಸೂರಜ್ ಬಲಕಾಲನ್ನೇ ಕಳೆದು ಕೊಂಡಿದ್ದಾರೆ. ಶನಿವಾರ (ಜೂನ್ 24) ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Suraj Accident) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದ್ದು ಸೂರಜ್ ಬಲಗಾಲಿನ ಮೇಲೆ ಟಿಪ್ಪರ್ ಹರಿದಿದೆ. ಸೂರಜ್ ಬಲಗಾಲಿಗೆ ಗಂಭೀರ ಗಾಯ ಆಗಿದ್ದ ಕಾರಣ ವೈದ್ಯರು ಮಂಡಿವರೆಗೂ ಬಲಗಾಲನ್ನು ಕತ್ತರಿಸಿ ತೆಗೆದಿದ್ದಾರೆ.
ಇದನ್ನೂ ಓದಿ: Road Accident: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಕೊಪ್ಪಳದ ಇಬ್ಬರ ಸಾವು
ನಟನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ʻಭಗವಾನ್ ಶ್ರೀಕೃಷ್ಣ ಪರಮಾತ್ಮ’ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಅವರು ಅನೌನ್ಸ್ ಮಾಡಿದ್ದರು. ಸದ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸೂರಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೂರಜ್ ನೋಡಲು ಈಗಾಗಲೇ ಶಿವರಾಜ್ ಕುಮಾರ್, ನಿರ್ಮಾಪಕ ಚಿನ್ನೆಗೌಡ ಅವರು ಮೈಸೂರಿಗೆ ತೆರಳಿದ್ದಾರೆ.