ಬೆಂಗಳೂರು : ಶಾರುಖ್ ಖಾನ್ -ದೀಪಿಕಾ ಪಡುಕೋಣೆ ನಟನೆಯ ಚಿತ್ರ “ಪಠಾಣ್” (Pathaan Controversy) ಕೇಸರಿ ಬಿಕಿನಿ ವಿವಾದ ತಾರಕಕ್ಕೇರುತ್ತಲೇ ಇದೆ. “ಬೇಷರಮ್ ರಂಗ್” ಹಾಡು ಪ್ರಸಾರವಾದಾಗಿನಿಂದ ಮಂತ್ರಿಗಳಿಂದ ಹಿಡಿದು ವೀಕ್ಷಕರು ಮತ್ತು ಈಗ ಮುಸ್ಲಿಂ ಮಂಡಳಿಯವರು ಹಾಡಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಬಗ್ಗೆ ಮೊದಲು ಧ್ವನಿ ಎತ್ತಿದ್ದಾರೆ. ಮುಂಬೈ ನಂತರ, ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿದೆ.
ಸಿನಿಮಾ ನಿಷೇಧಕ್ಕೆ ಮುಸ್ಲಿಂ ಮಂಡಳಿ ಆಗ್ರಹ
ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಆಕ್ಷೇಪ ವ್ಯಕ್ತಪಡಿಸಿ “ಪಠಾಣ್” ಬಿಡುಗಡೆಯನ್ನು ನಿಷೇಧಿಸುವಂತೆ ಕರೆ ನೀಡಿದ ನಂತರ, ಮಧ್ಯಪ್ರದೇಶದ ಉಲೇಮಾ ಮಂಡಳಿಯು ಇದೀಗ ಅದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಮಂಡಳಿಯು, ಚಲನಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಅನುಮತಿಸಬಾರದು ಎಂದು ಒತ್ತಾಯಿಸಿದೆ. ಮಂಡಳಿಯ ಮುಖ್ಯಸ್ಥರು ʻಪಠಾಣ’ ಅತ್ಯಂತ ಗೌರವಾನ್ವಿತ ಸಮುದಾಯ ಮತ್ತು ಚಲನಚಿತ್ರವು ಇಸ್ಲಾಂ ಧರ್ಮವನ್ನು ಅಗೌರವಿಸುತ್ತದೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಉಲೇಮಾ ಮಂಡಳಿಯ ಅಧ್ಯಕ್ಷ ಸೈಯದ್ ಅನಸ್ ಅಲಿ ಅವರು ʻಪಠಾಣ್’ ಹೆಸರು ಬಳಕೆಗೆ ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ | Pathaan Controversy | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!
ಬಿಹಾರ ಮತ್ತು ಮುಂಬೈನಲ್ಲಿ ಹೊಸದಾಗಿ ದೂರು ದಾಖಲು
ಮುಂಬೈ ನಂತರ, ಇದೀಗ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿದೆ. ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಮುಂಬರುವ ಚಿತ್ರ ‘ಪಠಾಣ್’ ಹಾಡಿನಲ್ಲಿ ಹಿಂದುಗಳ “ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿರುವ” ಬಗ್ಗೆ ಎಫ್‌ಐಆರ್ ಅನ್ನು ಕೋರಿ ದೂರು ಸಲ್ಲಿಸಲಾಗಿದೆ. ಜನವರಿ 3 ರಂದು ವಿಚಾರಣೆ ನಡೆಸಲಿದೆ.
ಸಂಸದ ಸಭಾಧ್ಯಕ್ಷರು, ಸಚಿವರು ಸಿನಿಮಾ ನಿಷೇಧಕ್ಕೆ ಆಗ್ರಹ
ಮಧ್ಯಪ್ರದೇಶದ ವಿಧಾನಸಭೆ ಸ್ಪೀಕರ್ ಗಿರೀಶ್ ಗೌತಮ್ ಅವರು “ಪಠಾಣ್” ಸಿನಿಮಾವನ್ನು ಟೀಕಿಸಿದ್ದಾರೆ. ಹಾಗೇ ಶಾರುಖ್ ಖಾನ್ ಅವರು ಅವರ ಮಗಳೊಂದಿಗೆ ಚಲನಚಿತ್ರವನ್ನು ವೀಕ್ಷಿಸಬಹುದೇ? ಶಾರುಖ್ ಅವರು ಕೇವಲ ಒಂದು ಧರ್ಮವನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಂಸದ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಈ ಬಗ್ಗೆ ʻʻಶಾರುಖ್ ಖಾನ್ ಅವರು ಈ ವಿವಾದದ ಬಗ್ಗೆ ಅರ್ಥಮಾಡಿಕೊಳ್ಳಬೇಕು. ಸಂಸ್ಕೃತಿಗೆ ಧಕ್ಕೆಯಾಗಬಾರದಂತೆ ನಡೆದುಕೊಳ್ಳಬೇಕು. ಈ ಮಧ್ಯೆ, ಮಧ್ಯಪ್ರದೇಶದಲ್ಲಿ ಸಾಧುಗಳು ಮತ್ತು ಸಂತರು ʻಪಠಾಣ್ʼ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಋಷಿಮುನಿಗಳು ಕೂಡ “ಪಠಾಣ್” ವಿರುದ್ಧ ಪ್ರತಿಭಟನೆಯ ಅಖಾಡಕ್ಕೆ ಧುಮುಕಿದ್ದಾರೆ. ಚಿತ್ರದ ಬಿಡುಗಡೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆʼʼಎಂದು ಹೇಳಿಕೆ ನೀಡಿದ್ದಾರೆ.
ಏನಿದು ವಿವಾದ?
ಪಠಾಣ್ ಸಿನಿಮಾದ ʻಬೇಷರಮ್ ರಂಗ್’ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಎಂತಲೇ ಮಾಡಿದ ಹುನ್ನಾರ ಎಂದು ಹಿಂದುಪರ ಸಂಘಟನೆಗಳು ಆರೋಪಿಸುತ್ತಿವೆ. ‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಎಂತಲೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್ ಅಭಿಯಾನ: ʻಪಠಾಣ್ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?