Site icon Vistara News

Pathaan Controversy | ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟ ಕಂಗನಾ ರಣಾವತ್: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ!

Pathaan Controversy (kangana)

ಬೆಂಗಳೂರು : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ʻಪಠಾಣ್‌ʼ ಚಿತ್ರದ ‘ಬೇಷರಮ್‌ ರಂಗ್’ (Pathaan Controversy) ಹಾಡು ಬಿಡುಗಡೆಯಾದಾಗಿನಿಂದ, ಕೇಸರಿ ವಿವಾದ ತಾರಕಕ್ಕೇರಿದೆ. ಸಿನಿಮಾದ ‘ಬೇಷರಮ್‌ ರಂಗ್‌’ ಹಾಡು ಹಿಂದುಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇರೆಗೆ ಹಾಡಿನ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕಂಗನಾ ರಣಾವತ್ ಕೂಡ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಿಯಾಲಿಟಿ ಶೋವೊಂದರ ಪೋಸ್ಟರ್‌ನಲ್ಲಿ ಕಂಗನಾ ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟಿದ್ದಾರೆ ಎಂಬ ವಿಚಾರಕ್ಕೆ ನೆಟ್ಟಿಗರು ನಟಿಯ ವಿರುದ್ಧ ಗರಂ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ʻಲಾಕಪ್’ ಎಂಬ ರಿಯಾಲಿಟಿ ಶೋವೊಂದರಲ್ಲಿ ಕಂಗನಾ ರಣಾವತ್ ನಿರೂಪಣೆ ಜವಾಬ್ದಾರಿ ಹೊತ್ತಿದ್ದರು. ಈ ಶೋನಲ್ಲಿನ ಪೋಸ್ಟರ್‌ನಲ್ಲಿ ಕಂಗನಾ ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟಿದ್ದಾರೆ. ಈ ವಿಚಾರವಾಗಿ ನಟಿ ಟ್ರೋಲ್ ಆಗುತ್ತಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟಿ ಕಂಗನಾ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Pathaan Controversy | ಹಿಂದುಗಳ ನಂಬಿಕೆಗಳನ್ನು ಬಾಲಿವುಡ್‌ ಹಾಳು ಮಾಡುತ್ತಿದೆ: ಪ್ರಮೋದ್‌ ಮುತಾಲಿಕ್‌

ಕೇಸರಿ ಕಂಟಕ!
ಈಗಾಗಲೇ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿಯವರ ಹಳೇ ವಿಡಿಯೊವೊಂದು ವೈರಲ್ ಆಗಿದೆ. ಸ್ಮೃತಿ ಇರಾನಿ ರಾಜಕೀಯ ಪ್ರವೇಶಕ್ಕೂ ಮೊದಲು ಮಾಡೆಲಿಂಗ್​, ಸಿನಿಮಾ ಕ್ಷೇತ್ರದಲ್ಲಿದ್ದವರು. ಅವರು ಈ ಹಿಂದೆ ಮಾಡೆಲಿಂಗ್​ ಮಾಡುತ್ತಿದ್ದ ಸಂದರ್ಭದಲ್ಲಿ ಅಂದರೆ 1998ರ ಸಮಯದಲ್ಲಿ ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ಬಣ್ಣದ ತುಂಡುಡುಗೆ ಧರಿಸಿ, ಮಾದಕವಾಗಿ ಕ್ಯಾಟ್​ ವಾಕ್​ ಮಾಡಿದ ವಿಡಿಯೊ ಇದಾಗಿದೆ. ಈ ವಿಡಿಯೊ ಶೇರ್ ಮಾಡಿದ ತೃಣಮೂಲ ಕಾಂಗ್ರೆಸ್​ ನಾಯಕ, ವಕ್ತಾರ ರಿಜು ದತ್ತಾ ‘ನನಗೂ ಕೇಸರಿ ಬಣ್ಣವನ್ನೇ ಬಳಿಯಿರಿ’ ಎಂದು ವ್ಯಂಗ್ಯವಾಗಿ ಕ್ಯಾಪ್ಷನ್​ ಬರೆದಿದ್ದಾರೆ. ಆಗ ಸ್ಮೃತಿ ಇರಾನಿ ಕೇಸರಿ ತುಂಡುಡುಗೆ ಹಾಕಿ, ಕ್ಯಾಟ್​ ವಾಕ್​ ಮಾಡಿದ್ದು ವಿವಾದ ಆಗಿಲ್ಲ ಯಾಕೆ? ಎಂಬುದು ಅವರ ಪ್ರಶ್ನೆ. ಹೀಗೆ ದೇಶಾದ್ಯಂತ ಪಠಾಣ್​-ಕೇಸರಿ ಬಣ್ಣದ ಬಿಕಿನಿ ವಿವಾದ ಭುಗಿಲೆದ್ದಿದೆ.

ಇದನ್ನೂ ಓದಿ | Pathaan Film | ʻʻಬುದ್ಧ ಮತ್ತು ಬಸವನವರ ಕೇಸರಿ ಬಣ್ಣವನ್ನು ಹಿಂದುತ್ವವು ತನ್ನದಾಗಿಸಿಕೊಂಡಿದೆʼʼ: ನಟ ಚೇತನ್‌

Exit mobile version