ಬೆಂಗಳೂರು : ಶಾರುಖ್‌ಖಾನ್-ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್ʼ ಸಿನಿಮಾ (Pathaan Controversy) ಬಾಯ್ಕಾಟ್ ಮಾಡಬೇಕೆಂಬ ಅಭಿಯಾನ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಪಠಾಣ್ ʻಬೇಷರಮ್ ರಂಗ್ʼ ಹಾಡು, ಹಿಂದುಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ದೂರಲಾಗುತ್ತಿದೆ. ಈ ಬಗ್ಗೆ ನಟ ಪ್ರಕಾಶ್ ಬೆಳವಾಡಿ ಮಾಧ್ಯಮದವರೊಂದಿಗೆ ಮಾತನಾಡಿ ʻನಾನು ಆ ಸಿನಿಮಾವನ್ನುʼ ನೋಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಈ ಕುರಿತು ನಟ ಪ್ರಕಾಶ್ ಬೆಳವಾಡಿ ಮಾತನಾಡಿ, ‘ಸಿನಿಮಾ ರಂಗದಲ್ಲಿ ಬಿಗುವಿನ ವಾತಾವರಣವಿದೆ. ಸಿನಿಮಾವನ್ನು ಬಾಯ್ಕಾಟ್ ಮಾಡಬೇಕಾ ಅಥವಾ ಬೇಡವಾ ಎನ್ನುವುದರ ಕುರಿತು ಚರ್ಚೆಯಾಗುತ್ತಿದೆ. ಚರ್ಚೆ ಆಗುತ್ತಿರುವ ವಿಷಯ ಎಷ್ಟು ಸಭ್ಯ ಎಂದು ಯೋಚಿಸಬೇಕಿದೆ. ಮಾತನಾಡುವುದಕ್ಕೆ ತುಂಬಾ ವಿಷಯ ಇದೆ. ಆದರೆ, ಪರಿಸ್ಥಿತಿ ಕೆಟ್ಟದಾಗಿದೆ. ಚರ್ಚೆ, ವಿವಾದ ಏನೇ ಇರಲಿ, ನಾನು ಆ ಸಿನಿಮಾವನ್ನು ನೋಡುತ್ತೇನೆ’ ಎಂದು ಹೇಳಿದ್ದಾರೆ. ಅಂದಹಾಗೆ ಪ್ರಕಾಶ್ ಬೆಳವಾಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್ ಅಭಿಯಾನ: ʻಪಠಾಣ್ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?
ʻಪಠಾಣ್ʼ ಸಿನಿಮಾದ ನಂತರ ಶಾರುಖ್ ಖಾನ್ ʻಡಂಕಿʼ ಸಿನಿಮಾ ತೆರೆಗೆ ಬರಲಿದೆ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ.
ಇದನ್ನೂ ಓದಿ | Pathaan Controversy | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!