Site icon Vistara News

Pathaan Movie : ಬಿಡುಗಡೆಗೂ ಮೊದಲೇ 58 ಕೋಟಿ ರೂ. ಬಾಚಿಕೊಂಡ ʼಪಠಾಣ್‌ʼ; 100 ದೇಶಗಳಲ್ಲಿ ಸಿನಿಮಾ ಬಿಡುಗಡೆ

ಮುಂಬೈ: ಶಾರುಖ್‌ ಖಾನ್‌ ನಟನೆಯ ʼಪಠಾಣ್‌ʼ ಸಿನಿಮಾ (Pathaan Movie) ಬುಧವಾರ ತೆರೆ ಕಾಣಲಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಭಾರೀ ಪ್ರಮಾಣದಲ್ಲಿ ಸಿನಿಮಾ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ ಆಗಿದೆ. ಮುಂಗಡ ಬುಕ್ಕಿಂಗ್‌ನಿಂದಲೇ ಸಿನಿಮಾ ಈಗಾಗಲೇ 58 ಕೋಟಿ ರೂ. ಬಾಚಿಕೊಂಡಿದೆ ಎನ್ನುತ್ತಿವೆ ವರದಿಗಳು.

ಇದನ್ನೂ ಓದಿ: Pathaan Movie : ʼಪಠಾಣ್‌ʼ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಮಾಡಲ್ಲ ಎಂದ ಗುಜರಾತ್ ಬಜರಂಗದಳ, ವಿಶ್ವ ಹಿಂದೂ ಪರಿಷತ್‌

ವರದಿ ಪ್ರಕಾರ ಪಠಾಣ್‌ ಮೊದಲ ದಿನದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ ಬರೋಬ್ಬರಿ 27.14 ಕೋಟಿ ರೂ.ಗಳಿಷ್ಟಿದೆ. ಹಾಗೆಯೇ ಎರಡನೇ ದಿನದ 15.71 ಕೋಟಿ ರೂ. ಮೌಲ್ಯದ ಟಿಕೆಟ್‌, ಮೂರನೇ ದಿನದ 15.81 ಕೋಟಿ ರೂ. ಮೌಲ್ಯದ ಟಿಕೆಟ್‌ ಬುಕ್ಕಿಂಗ್‌ ಆಗಿದೆ. ಹಿಂದಿ ಭಾಷೆಯೊಂದರಲ್ಲೇ ಮೊದಲನೇ ದಿನದ 4 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಬುಕ್ಕಿಂಗ್‌ ಆಗಿವೆ.

ಈ ಹಿಂದೆ ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶಾರ್ಫ್‌ ಅವರ ʼವಾರ್‌ʼ ಸಿನಿಮಾ ಬಿಡುಗಡೆಗೂ ಮೊದಲೇ 4.1೦ ಲಕ್ಷ ಟಿಕೆಟ್‌ ಮಾರಾಟವಾಗಿತ್ತು. ಆಮಿರ್‌ ಖಾನ್‌ ಮತ್ತು ಕತ್ರಿನಾ ನಟನೆಯ ʼಟಗ್ಸ್‌ ಆಫ್‌ ಹಿಂದೂಸ್ಥಾನ್‌ʼ ಸಿನಿಮಾದ 3.46 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಈ ಎರಡೂ ಸಿನಿಮಾಗಳ ದಾಖಲೆಯನ್ನು ಪಠಾಣ್‌ ಮುರಿದು ಮುನ್ನುಗ್ಗುತ್ತಿದೆ. ಇನ್ನು ಹಿಂದಿಯಲ್ಲಿ ಡಬ್‌ ಆಗಿದ್ದ ಕನ್ನಡದ ಕೆಜಿಎಫ್‌ 2 ಸಿನಿಮಾಕ್ಕೆ ಮೊದಲನೇ ದಿನ 5.15 ಲಕ್ಷ ಟಿಕೆಟ್‌ ಮಾರಾಟವಾಗಿತ್ತು. ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾದ ಹಿಂದಿ ಡಬ್‌ಗೆ 6.50 ಲಕ್ಷ ಟಿಕೆಟ್‌ ಮಾರಾಟವಾಗಿತ್ತು.

ಇದನ್ನೂ ಓದಿ: Pathaan Movie : ಬಿಡುಗಡೆಗೂ ಮೊದಲೇ ಶಾರುಖ್ ಖಾನ್ ನಟನೆಯ ʼಪಠಾಣ್‌ʼ ಸಿನಿಮಾ ಆನ್‌ಲೈನ್‌‌ನಲ್ಲಿ ಲೀಕ್‌ ಆಯಿತಾ?

ಇನ್ನೂ ವಿಶೇಷವೆಂದರೆ ಈ ಸಿನಿಮಾ ಒಟ್ಟು 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ತೆರೆ ಕಾಣಲಿದೆ. ಈವರೆಗೆ ಯಾವುದೇ ಭಾರತೀಯ ಸಿನಿಮಾ ಇಷ್ಟೊಂದು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಈಗ ಪಠಾಣ್‌ ಸಿನಿಮಾ ಇಂತದ್ದೊಂದು ಹೊಸ ದಾಖಲೆಯನ್ನು ಬರೆಯುತ್ತಿದೆ.

Exit mobile version