Site icon Vistara News

Pathaan Film | ದೀಪಿಕಾ ಪಡುಕೋಣೆ ಸೈಡ್‌ ಪೋಸ್‌ ದೃಶ್ಯಕ್ಕೆ ಬಿತ್ತಾ ಕತ್ತರಿ? ಕೇಸರಿ ಬಿಕಿನಿ ಕಥೆ ಏನು?

Pathaan Film

ಬೆಂಗಳೂರು: ಶಾರುಖ್‌ ಖಾನ್‌-ದೀಪಿಕಾ ಪಡುಕೋಣೆ ನಟಿಸಿರುವ ‘ಪಠಾಣ್‌’ ಸಿನಿಮಾ (Pathaan Film) ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ಗೆ ಸೆನ್ಸಾರ್‌ಶಿಪ್‌ಗಾಗಿ ಕಳುಹಿಸಲಾಗಿದೆ. ಸೆನ್ಸಾರ್ ಮಂಡಳಿ, ಚಿತ್ರವನ್ನು ಪರಿಶೀಲಿಸಿದ ನಂತರ, ಹಾಡುಗಳನ್ನು ಒಳಗೊಂಡಂತೆ ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಚಿತ್ರತಂಡಕ್ಕೆ ಆದೇಶ ನೀಡಿತ್ತು. ಇದೀಗ ʻಬೇಷರಮ್‌ ರಂಗ್‌ʼನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಸ್ವಿಮ್‌ ಸೂಟ್‌ನಲ್ಲಿ ಸೈಡ್ ಪೋಸ್ ನೀಡಿರುವ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿದೆ.

ಮೊದಲ ಹಾಡು ಬೇಷರಮ್‌ ರಂಗ್ ಬಿಡುಗಡೆಯಾದ ನಂತರ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಹಲವಾರು ರಾಜಕಾರಣಿಗಳು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮತ್ತು ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಸೇರಿದಂತೆ, ದೀಪಿಕಾ ಪಡುಕೋಣೆ ಅವರ “ಕೇಸರಿ” ಬಿಕಿನಿ ಮತ್ತು SRK ಅವರ “ಹಸಿರು” ಶರ್ಟ್ ಅನ್ನು ಹಾಡಿನಲ್ಲಿ ಸರಿಪಡಿಸಲು ಆಗ್ರಹಿಸಿದ್ದರು. ಬಾಲಿವುಡ್ ಹಂಗಾಮಾದ ವರದಿಯ ಪ್ರಕಾರ, ದೀಪಿಕಾ ಅವರ “ಸೈಡ್ ಪೋಸ್ (ಭಾಗಶಃ ನಗ್ನತೆ), ಹಾಡಿನ ಕ್ಲೋಸ್ ಅಪ್ ಶಾಟ್ ದೃಶ್ಯಗಳನ್ನು ತೆಗೆದುಹಾಕಿ ಸೂಕ್ತವಾದ ಶಾಟ್‌ಗಳೊಂದಿಗೆ ಬದಲಾಯಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಬೇಷರಮ್‌ ರಂಗ್‌ ಹಾಡಿನ ಕೇಸರಿ ಬಿಕನಿ ದೃಶ್ಯಗಳು ತೆಗೆದಿದ್ದಾರೋ ಇಲ್ಲವೋ ಎಂಬದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ | Pathaan Film | ವಿವಾದಿತ ಪಠಾಣ್​ ಸಿನಿಮಾ ಟ್ರೇಲರ್​ ಬಿಡುಗಡೆ ದಿನಾಂಕ ಪ್ರಕಟ; ಚಿತ್ರ ರಿಲೀಸ್ ಯಾವಾಗ?

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾನ್’ ಚಿತ್ರಕ್ಕೆ ಹಲವಾರು ಬದಲಾವಣೆಗಳನ್ನು ಜಾರಿಗೆ ತರಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಈ ಹಿಂದೆ ಸಲಹೆ ನೀಡಿತ್ತು. ಮಾಧ್ಯಮಗಳಿಗೆ ಕಳುಹಿಸಲಾದ ಅಧಿಕೃತ ಹೇಳಿಕೆಯಲ್ಲಿ, ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ, “ಸಿಬಿಎಫ್‌ಸಿ ಮಾರ್ಗಸೂಚಿಗಳ ಪ್ರಕಾರ ಪಠಾಣ್ ಚಿತ್ರದಲ್ಲಿ ಬದಲಾವಣೆಗಳನ್ನು ಅಳವಡಿಸಲು ಮತ್ತು ಥಿಯೇಟರ್‌ ಬಿಡುಗಡೆಗೆ ಮೊದಲು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸಮಿತಿಯು ತಯಾರಕರಿಗೆ ಮಾರ್ಗದರ್ಶನ ನೀಡಿದೆ. ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಪ್ರೇಕ್ಷಕರ ಸಂವೇದನೆಯ ನಡುವೆ ಸರಿಯಾದ ಸಮತೋಲನವನ್ನು ಕಂಡುಹಿಡಿಯಲು CBFC ಯಾವಾಗಲೂ ಬದ್ಧವಾಗಿದೆʼʼಎಂದು ಹೇಳಿದ್ದರು.

ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್‌ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾನ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ ಮತ್ತು ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ | Pathaan Film | ಪಠಾಣ್​ ಸಿನಿಮಾ ಪೋಸ್ಟರ್​ ಹಾಕಿದ್ದ ಮಾಲ್​ ಮೇಲೆ ಬಜರಂಗ ದಳ ದಾಳಿ; ಜೈ ಶ್ರೀರಾಮ್​ ಎನ್ನುತ್ತ ದಾಂಗುಡಿ ಇಟ್ಟ ಕಾರ್ಯಕರ್ತರು

Exit mobile version