ಬೆಂಗಳೂರು : ಶಾರುಖ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ (Pathaan Film) ಕೇಸರಿ ವಿವಾದ ಬೆನ್ನಲ್ಲೇ ಇದೀಗ ವಿದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಜರ್ಮನಿಯಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದೆ.
ಸಿನಿಮಾ ಬಿಡುಗಡೆಗೆ 27 ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಜರ್ಮನಿಯಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಜರ್ಮಿನಿಯಲ್ಲಿ ಶಾರುಖ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲಿ ಮಲ್ಟಿಪ್ಲೆಕ್ಸ್ ಚೈನ್ ಸಿನಿಮ್ಯಾಕ್ಸ್ ಇರುವ ಬಹುತೇಕ ನಗರಗಳಲ್ಲಿ ಅಡ್ವಾನ್ಸ್ ಬುಕಿಂಗ್ ಆಗಿದೆ. ಹಲವು ಕಡೆಗಳಲ್ಲಿ ಸಿನಿಮಾದ ಬಹುತೇಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಈ ಹಿಂದೆ ತೆರೆಕಂಡ ‘ದಿಲ್‌ವಾಲೆ’ ಸಿನಿಮಾ ಕೂಡ ಭಾರತದ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಆದರೆ, ವಿದೇಶಗಳಲ್ಲಿ ಈ ಸಿನಿಮಾ ಸೂಪರ್ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ | Pathan Controversy | ಪುತ್ರಿ ಜತೆ ಶಾರುಖ್ ಪಠಾಣ್ ಸಿನಿಮಾ ವೀಕ್ಷಿಸಲಿ, ನಟನಿಗೆ ಸವಾಲೆಸೆದ ಮಧ್ಯಪ್ರದೇಶ ಸ್ಪೀಕರ್
ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ ಮತ್ತು ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ | Pathaan Film | ʻಪಠಾಣ್ʼ ಸಿನಿಮಾದ ಹಾಡುಗಳಲ್ಲಿ ಬದಲಾವಣೆಗೆ ಸೆನ್ಸಾರ್ ಮಂಡಳಿ ಆದೇಶ