Site icon Vistara News

Pathaan Film: ಒಟಿಟಿಯಲ್ಲೂ ತೆರೆಕಾಣಲು ಸಜ್ಜಾಗಿದೆ ಪಠಾಣ್​​; ಅಮೇಜಾನ್​ ಪ್ರೈಮ್​​ನಲ್ಲಿ ಈ ದಿನಾಂಕದಂದು ಬಿಡುಗಡೆ

Pathaan Released in OTT On March 22

#image_title

ಬೇಷರಮ್​ ರಂಗ್​ (ನಾಚಿಕೆ ಇಲ್ಲದ ಬಣ್ಣ) ಎಂಬ ಹಾಡಿನಿಂದಾಗಿ ಹಿಂದು ಸಂಘಟನೆಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿ, ಆ ವಿವಾದದ ಮಧ್ಯೆಯೇ ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಪಠಾಣ್​ (Pathaan Film)ಈಗಾಗಲೇ ಬಾಹುಬಲಿ ಸಿನಿಮಾದ ಕಲೆಕ್ಷನ್​​ನ್ನೂ ಹಿಂದಿಕ್ಕಿ ಮುಂದೆ ಓಡಿದೆ. ಅತ್ಯಂತ ಹೆಚ್ಚಿನ ಗಳಿಕೆ ಕಂಡ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಇನ್ನೂ ಕೆಲವು ಥಿಯೇಟರ್​​ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ, ಒಟಿಟಿಗೂ ಕಾಲಿಡುತ್ತಿದೆ. ಶಾರುಖ್​ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಅಭಿನಯದ ಈ ಬ್ಲಾಕ್​ಬಸ್ಟರ್​ ಸಿನಿಮಾ ಮಾರ್ಚ್​ 22ರಿಂದ ಅಮೇಜಾನ್​ ಪ್ರೈಮ್​ನಲ್ಲಿ ಪ್ರದರ್ಶನ ಕಾಣಲಿದೆ. ಅಮೇಜಾನ್​ ಪ್ರೈಮ್​​ನಲ್ಲಿ ನಾಳೆ (ಮಾ.22)ಯಿಂದ ನೀವು ಪಠಾಣ್​ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳನ್ನು ನೋಡಬಹುದು.

ಬೇಷರಮ್​ ರಂಗ್​ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ತುಂಡುಡುಗೆ ಧರಿಸಿ ನೃತ್ಯ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಪಠಾಣ್ ಬಿಡುಗಡೆಗೇ ಅವಕಾಶ ಕೊಡುವುದಿಲ್ಲ ಎಂದು ಹಲವು ಹಿಂದು ಸಂಘಟನೆಗಳು ಕಿಡಿಕಾರಿದ್ದವು. ಅದೆಲ್ಲದರ ಮಧ್ಯೆ ಜ.25ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಇದೀಗ 50 ದಿನಗಳನ್ನು ಪೂರೈಸಿದೆ. ಇಲ್ಲಿಯವರೆಗೆ ಪಠಾಣ್​ ಕಲೆಕ್ಷನ್​ 1 ಸಾವಿರ ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗಿದೆ. ಯಶ್​ ಚೋಪ್ರಾ ಅವರ ಯಶ್​ ರಾಜ್​ ಫಿಲ್ಮ್ಸ್​ ಪ್ರೊಡಕ್ಷನ್​ ಹೌಸ್ ಪ್ರಕಾರ ಪಠಾಣ್​ ಗಳಿಕೆ 1048.30 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಭಾರತದಲ್ಲಿ ಕಲೆಕ್ಷನ್​ 656.20 ಕೋಟಿ ರೂ.ಆಗಿದೆ. ಹಾಗೇ, ವಿದೇಶಗಳಲ್ಲಿ ಗಳಿಕೆ 392.10 ಕೋಟಿ ರೂ.

ಪಠಾಣ್​ ದೇಶಭಕ್ತಿ ಸಾರುವ ಸಿನಿಮಾ ಎಂದು ಶಾರುಖ್​ಖಾನ್​ ಹೇಳಿದ್ದರು. ಇದರಲ್ಲಿ ಶಾರುಖ್​ ಖಾನ್​ RAW (Research and Analysis Wing)ನ ಏಜೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕುವ ಕಥೆ ಇದರಲ್ಲಿದ್ದು, ಜಾನ್​ ಅಬ್ರಾಹಂ ಅವರು ಭಯೋತ್ಪಾದಕನ ಮುಖಂಡನ ಪಾತ್ರ ವಹಿಸಿದ್ದಾರೆ. ಪಠಾಣ್​ ಬಿಡುಗಡೆಯಾಗುತ್ತಿದ್ದಂತೆ ಅತ್ಯಂತ ಯಶಸ್ವಿಯಾಗಿ ಓಡುತ್ತಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದರು. ಅದರಲ್ಲು ಶಾರುಖ್​ ಖಾನ್​ಗಂತೂ ಅದೆಷ್ಟೋ ವರ್ಷಗಳ ನಂತರದ ಯಶಸ್ಸು ಇದು. ಟ್ವೀಟ್ ಮಾಡಿದ್ದ ಅವರು, ಕಠಿಣ ಪರಿಶ್ರಮ, ನಿಷ್ಠೆ ಮತ್ತು ನಂಬಿಕೆಗೆ ಸಿಕ್ಕ ಜಯ ಎಂದಿದ್ದರು.

Exit mobile version