Site icon Vistara News

Pathaan Film | ದುಬೈನ ಬುರ್ಜ್ ಖಲೀಫಾದಲ್ಲಿ ʻಪಠಾಣ್‌ʼ ಟ್ರೈಲರ್‌ ಅನಾವರಣ!

Pathaan Film

ಬೆಂಗಳೂರು : ಜನವರಿ 10 ಮಂಗಳವಾರ ಬೆಳಗ್ಗೆ 11 ಗಂಟೆಗೆ ʻಪಠಾಣ್‌ʼ (Pathaan Film ) ಟ್ರೈಲರ್ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಶನಿವಾರ ಜನವರಿ 14ರಂದು ದುಬೈನ ಬುರ್ಜ್ ಖಲೀಫಾದಲ್ಲಿ ʻಪಠಾಣ್‌ʼ ಟ್ರೈಲರ್‌ ಪ್ರದರ್ಶಿಸಲಾಗಿದೆ. ಟ್ರೈಲರ್‌ ಪ್ಲೇ ಆಗುತ್ತಿರುವಾಗ ಶಾರುಖ್ ಖಾನ್ ಹಾಗೂ ಅವರ ಸ್ನೇಹಿತರು ʻಜೂಮ್‌ ಜೋ ಪಠಾಣ್‌ʼ ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ.

ಬುರ್ಜ್ ಖಲೀಫಾದಲ್ಲಿ ಪಠಾಣ್ ಟ್ರೈಲರ್ ಅನಾವರಣಗೊಳ್ಳುತ್ತಿದ್ದಂತೆ ಪಠಾಣ್‌ ಸಿಗ್ನೇಚರ್ ಸ್ಟೆಪ್ಸ್‌ ಅನ್ನು ಶಾರುಖ್‌ ಮಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಈ ವೇಳೆ ಭಾಗಿಯಾಗಿದ್ದರು.

ಇದನ್ನೂ ಓದಿ | Pathaan Film | ʻಜೂಮ್ ಜೋ ಪಠಾಣ್‌ʼ ರಿ ಕ್ರಿಯೇಟ್‌ ಮಾಡಿದ ಇಂಡೋನೇಷ್ಯಾ ಡ್ಯಾನ್ಸ್‌ ಗ್ರೂಪ್‌: ವಿಡಿಯೊ ವೈರಲ್‌!

ಜನವರಿ 25, ಗಣರಾಜ್ಯೋತ್ಸವದ ದಿನದ ಮುನ್ನಾದಿನವೇ ಪಠಾಣ್ ಸಿನಿಮಾ ರಾಷ್ಟ್ರಾದ್ಯಂತ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ‘ಬೇಷರಮ್​ ರಂಗ್​ (ನಾಚಿಕೆ ಇಲ್ಲದ ಬಣ್ಣ)’ ಎಂಬ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿ, ಮಾದಕವಾಗಿ ನೃತ್ಯ ಮಾಡಿದ್ದೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಶಾರುಖ್​-ದೀಪಿಕಾ ಅಭಿಮಾನಿಗಳು ಪಠಾಣ್​ ಸಿನಿಮಾಕ್ಕಾಗಿ ಕಾಯುತ್ತಿದ್ದರೆ, ಇನ್ನೊಂದು ವರ್ಗದ ಜನರು ಪಠಾಣ್​ ಬಹಿಷ್ಕರಿಸಬೇಕು. ಈ ಚಿತ್ರ ಬಿಡುಗಡೆ ಮಾಡಬಾರದು ಎಂದೂ ಆಗ್ರಹಿಸುತ್ತಿದ್ದಾರೆ.

ಯಶ್​ ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ | Actor Prabhas | ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಪ್ರಭಾಸ್‌: ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಪಠಾಣ್‌ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌

Exit mobile version