Site icon Vistara News

Pathaan Film | ಪಠಾಣ್‌ ಟ್ರೈಲರ್ ಜತೆಗೆ ಅನಾವರಣಗೊಳ್ಳಲಿದೆ YRF ಸ್ಪೈ ಯೂನಿವರ್ಸ್ ಲೋಗೊ

Pathaan Film

ಬೆಂಗಳೂರು : ಶಾರುಖ್ ಖಾನ್ ಅಭಿನಯದ ʻಪಠಾಣ್ʼ ಸಿನಿಮಾ (Pathaan Film) ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಚಿತ್ರದ ಟ್ರೈಲರ್‌ ಜನವರಿ 10ರಂದು ಬಿಡುಗಡೆಯಾಗುತ್ತಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಪಠಾಣ್‌ನ ಟ್ರೈಲರ್ ಜತೆಗೆ YRF (ಯಶ್‌ ರಾಜ್‌ ಫಿಲ್ಮ್ಸ್‌) ತನ್ನ ಸ್ಪೈ ಯೂನಿವರ್ಸ್ ಲೋಗೊವನ್ನು ಅನಾವರಣಗೊಳಿಸಲಿದೆ. ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಸ್ಪೈ ಯೂನಿವರ್ಸ್‌ನಲ್ಲಿರುವ ಇತರ ಚಿತ್ರಗಳೆಂದರೆ ‘ಟೈಗರ್’ ಮತ್ತು ‘ ʻವಾರ್ʼ ಸಿರೀಸ್‌ ಫ್ರಾಂಚೈಸಿಗಳು. ಈಗ ಪಠಾಣ್ ಟ್ರೈಲರ್‌ನಲ್ಲಿ, YRF ತಮ್ಮ ಹೊಸ ಸ್ಪೈ ಯೂನಿವರ್ಸ್ ಲೋಗೊವನ್ನು ಅನಾವರಣಗೊಳಿಸಲಿದೆ.

ಆದಿತ್ಯ ಚೋಪ್ರಾ ಅವರು ವೈಆರ್‌ಎಫ್‌ನ ಸ್ಪೈ ಯೂನಿವರ್ಸ್ ಅನ್ನು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಫ್ರ್ಯಾಂಚೈಸ್ ಮಾಡಲು ಹಲವು ವರ್ಷಗಳಿಂದ ಪ್ರಾಯೋಗಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಟೈಗರ್ ಶ್ರಾಫ್, ವಾಣಿ ಕಪೂರ್, ಮುಂತಾದ ಭಾರತೀಯ ಚಿತ್ರರಂಗದ ಅತ್ಯುತ್ತಮ ತಾರೆಯರನ್ನು ಹೊಂದಿದೆ.

ಇದನ್ನೂ ಓದಿ | Pathaan Film | ವಿವಾದಿತ ಪಠಾಣ್​ ಸಿನಿಮಾ ಟ್ರೇಲರ್​ ಬಿಡುಗಡೆ ದಿನಾಂಕ ಪ್ರಕಟ; ಚಿತ್ರ ರಿಲೀಸ್ ಯಾವಾಗ?

ಈ ಹೊಸ ಲೋಗೊ ಪಠಾಣ್‌ನ ಟ್ರೈಲರ್‌ನಲ್ಲಿ ಇರುತ್ತದೆ ಮತ್ತು ನಂತರ ʻಟೈಗರ್ʼ ಮತ್ತು ʻವಾರ್ʼ ಸಿರೀಸ್‌ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಬೇರೆ ಯಾವುದೇ ಫ್ರ್ಯಾಂಚೈಸ್ ಅನ್ನು ಈ ರೀತಿಯ ಪ್ರಮಾಣದಲ್ಲಿ ಅಳವಡಿಸಲಾಗಿಲ್ಲ, ಅಥವಾ ಅವರು ಜಾಗತಿಕವಾಗಿ ಬಾಕ್ಸ್ ಆಫೀಸ್ ಮತ್ತು ಪ್ರೇಕ್ಷಕರ ಮೇಲೆ ಅಂತಹ ಪ್ರಭಾವವನ್ನು ಬೀರಿಲ್ಲ. ಈ ಸ್ಪೈ ಯೂನಿವರ್ಸ್‌ನೊಂದಿಗೆ, YRF ಸ್ಟುಡಿಯೊವಾಗಿ ಈಗ ʻಧೂಮ್ ಸೀರಿಸ್‌ʼ ಸೇರಿದಂತೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಎರಡು ದೊಡ್ಡ ಫ್ರಾಂಚೈಸಿಗಳನ್ನು ಹೊಂದಿದೆ.

ಹೊಂಬಾಳೆ ಸಂಸ್ಥೆಗಿಂತ ಮೊದಲೇ ಬಾಲಿವುಡ್‌ನಲ್ಲಿ ಯೂನಿವರ್ಸ್
ಹಾಲಿವುಡ್ ಶೈಲಿಯಲ್ಲಿ ಯೂನನಿವರ್ಸ್ ಕ್ರಿಯೇಟ್ ಮಾಡಲು ಯಶ್ ರಾಜ್ ಬ್ಯಾನರ್ ರೆಡಿಯಾಗಿದ್ದಾರೆ. ಹೊಂಬಾಳೆ ಸಂಸ್ಥೆ ,ಕೆಜಿಎಫ್, ಸಲಾರ್, ಎನ್ ಟಿಆರ್ 31 ಯೂನಿವರ್ಸ್ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಕೆಜಿಎಫ್ ನಿರ್ಮಾಪಕರಿಗಿಂತ‌ ಮೊದಲೇ ಯಶ್‌ ರಾಜ್‌ ಫಿಲ್ಮ್ಸ್‌ ಬ್ಯಾನರ್ ಯೂನಿವರ್ಸ್ ಘೋಷಣೆ ಮಾಡಿದೆ.

ಇದನ್ನೂ ಓದಿ | Pathaan Film | ಪಠಾಣ್​ ಸಿನಿಮಾ ಪೋಸ್ಟರ್​ ಹಾಕಿದ್ದ ಮಾಲ್​ ಮೇಲೆ ಬಜರಂಗ ದಳ ದಾಳಿ; ಜೈ ಶ್ರೀರಾಮ್​ ಎನ್ನುತ್ತ ದಾಂಗುಡಿ ಇಟ್ಟ ಕಾರ್ಯಕರ್ತರು

Exit mobile version