Site icon Vistara News

Pathaan Film | ಮೊಣಕಾಲು ನೋವಿದ್ದರೂ ಸೂಪರ್ ಆಗಿ ಡ್ಯಾನ್ಸ್ ಮಾಡಿದ ಶಾರುಖ್‌: ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್!

Pathaan Film

ಬೆಂಗಳೂರು : ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್ ʻಪಠಾಣ್ʼ (Pathaan Film) ಹಾಡಿನ ʻಜೂಮ್ ಜೋ ಪಠಾನ್‌ʼನ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗಿನ ಒಡನಾಟವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಬಾಸ್ಕೊ ಮಾರ್ಟಿಸ್ ಮಾತನಾಡಿ, “ನಮ್ಮ ಮೊದಲ ಹಾಡು ಸ್ವದೇಸ್‌ ಸಿನಿಮಾದ ʻಯೇ ತಾರಾ ವೋ ತಾರಾʼ ಆಗಿತ್ತು. ಅದಾದ ನಂತರ ಜೂಮ್ ಜೋ ಪಠಾಣ್ ಒಂದು ಹುಕ್ ಸ್ಟೆಪ್‌ ಮಾಡಬೇಕಿತ್ತು. ಹಾಡು ಎಲ್ಲ ವಯಸ್ಸಿನವರಲ್ಲಿ ಜನಪ್ರಿಯವಾಗಿದೆ. ನಾವು ರಯೀಸ್‌ ಮತ್ತು ಜೀರೋ ಸಿನಿಮಾಗಳಲ್ಲಿ ಶಾರುಖ್‌ ಜತೆ ಕೆಲಸ ಮಾಡಿದ್ದೆ. ಆದರೆ ಪಠಾಣ್‌ನಲ್ಲಿ ನಾವು ಬಹಳ ಸಮಯದ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದ್ದೇವೆʼʼ ಎಂದಿದ್ದಾರೆ.

ʻಜೂಮ್ ಜೋ ಪಠಾಣ್‌ನಲ್ಲಿ ಬಾಸ್ಕೋ ಅವರ ನೃತ್ಯ ಸಂಯೋಜನೆಯು ಸಮಕಾಲೀನ ಮತ್ತು ವರ್ಣರಂಜಿತವಾಗಿದೆ ಎಂದು ಪ್ರಶಂಸಿಸಲಾಗಿದೆ. ಸಂದರ್ಶನವೊಂದರಲ್ಲಿ ಪಠಾಣ್‌ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಸೆಟ್‌ನಲ್ಲಿ ಶಾರುಖ್‌ ತುಂಬ ಬದ್ಧತೆ ಹಾಗೂ ಜವಾಬ್ದಾರಿಯುತವಾಗಿದ್ದರು!

ʻʻಸ್ಪೇನ್‌ನಲ್ಲಿ, ಕೇವಲ 2-3 ದಿನಗಳ ಕಾಲ ರಿಹರ್ಸಲ್‌ಗಾಗಿ ಇದ್ದೆವು. ಶೂಟಿಂಗ್‌ ಮುಗಿದ ನಂತರವೂ ಶಾರುಖ್‌ ಅವರು ರಾತ್ರಿ 1.30ರವರೆಗೆ ಅಭ್ಯಾಸ ನಡೆಸುತ್ತಿದ್ದರು. ಬಾಡಿ ಶಾಟ್‌ ತೆಗೆಯುವಾಗ ತುಂಬಾ ನಾಚಿಕೆಪಡುತ್ತಾರೆ. ಅದಕ್ಕೆ ಸರಿಯಾದ ಹಾಡು ಸಿಕ್ಕಿದ್ದು, ನಮ್ಮ ಅದೃಷ್ಟ. ಆದ್ದರಿಂದ, ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ಪಠಾಣ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಪಂಚದಾದ್ಯಂತ ರೀಲ್ಸ್‌ಗಳನ್ನು ಮಾಡಲಾಗುತ್ತಿದೆ. ಜನರ ಪ್ರತಿಕ್ರಿಯೆ ನೋಡಿ ಸಂತಸವಾಗುತ್ತಿದೆ.

ಇದನ್ನೂ ಓದಿ | Pathaan Film | ಪಠಾಣ್ ಬಿಡುಗಡೆಗೆ ಕೆಲವೇ ದಿನ ಬಾಕಿ ಇದ್ದರೂ ಯಾವುದೇ ಸಂದರ್ಶನ ನೀಡದ ಶಾರುಖ್, ದೀಪಿಕಾ! ಇದು ಮಾರ್ಕೆಟಿಂಗ್ ತಂತ್ರನಾ?

ಸ್ವದೇಸ್‌ನ ʻʻಯೇ ತಾರಾ ವೋ ತಾರಾʼʼ ಕಠಿಣ ಶಾಟ್‌ ಆಗಿತ್ತು
ಶಾರುಖ್‌ ಅವರೊಂದಿಗೆ ಹೆಚ್ಚಿನ ಹಾಡುಗಳಿಗೆ ನೃತ್ಯ ಸಂಯೋಜನೆ ಸಾಧ್ಯವಾಗಿರಲಿಲ್ಲ. ಅವರಿಗಾಗಿಯೇ ಸಂಯೋಜಿಸಲು ನನಗೆ ಹಾಡುಗಳು ಸಿಗುತ್ತಿರಲಿಲ್ಲ ಅಥವಾ ಕೆಲವೊಮ್ಮೆ ಸೆಟ್‌ನಲ್ಲಿ ಸಂಯೋಜನೆ ಮಾಡಿದ್ದು ಉಂಟು. ಸುಮಾರು ಸಾರಿ, ಮತ್ತೊಂದು ಹಾಡಿನ ಡ್ಯಾನ್ಸ್ ಮೂವ್‌ಗಳನ್ನು ಶಾರುಖ್ ಅವರ ಹಾಡಿಗೆ ಚಿತ್ರೀಕರಿಸಿದ್ದು ಇದೆ. 2004ರಲ್ಲಿ ಸ್ವದೇಸ್‌ ಸಿನಿಮಾದ ʻಯೇ ತಾರಾ ವೋʼ ತಾರಾ ಹಾಡಿನ ಮೂಲಕ ಕಥೆ ಹೇಳಬೇಕಿತ್ತು. ಆಗ ಆ ಹಾಡಿನ ಚಿತ್ರೀಕರಣಕ್ಕೆ 7-8 ದಿನಗಳನ್ನು ತೆಗೆದುಕೊಂಡಿತು. ಹಾಡು ಒಂದು ಸಣ್ಣ ಕಥೆಯಾಗಿತ್ತು. ಅಲ್ಲಿಂದ ಶಾರುಖ್‌ ಜತೆಗಿನ ಪ್ರಯಾಣ ಪ್ರಾರಂಭಗೊಂಡಿತು. ಆಶು (ಅಶುತೋಷ್ ಗೋವಾರಿಕರ್) ಮತ್ತು ಶಾರುಖ್ ಸರ್ ಅವರಿಂದ ಅಂತಹ ಮಾರ್ಗದರ್ಶನ ಪಡೆಯಲು ನೃತ್ಯ ನಿರ್ದೇಶಕರಾದ ನಮಗೆ ಇದರಿಂದ ನಿಜವಾಗಿಯೂ ಸಹಾಯವಾಗಿದೆ.

ಪಠಾಣ್ ಹಾಡುಗಳು ತುಂಬಾ ಸ್ಟೈಲಿಶ್!
ನಿರ್ದೇಶಕರು ನೃತ್ಯ ಸಂಯೋಜನೆಯನ್ನು ಅನುಮೋದಿಸಿದ ನಂತರ, ನಾವು ಅವುಗಳನ್ನು ನಟನಿಗೆ ತೋರಿಸುತ್ತೇವೆ. ನಂತರ ನಾವು ಅದನ್ನು ಸಹಾಯಕರು ಮತ್ತು ನೃತ್ಯಗಾರರಿಗೆ ತೋರಿಸುತ್ತೇವೆ. ಅಲ್ಲಿಂದ ನಿಜವಾದ ಕೆಲಸ ಶುರುವಾಗುತ್ತದೆ. ಇಡೀ ಹಾಡಿನ ಶೈಲಿಯನ್ನು ನೋಡಿದಾಗ, ಈ ಹಾಡು ತುಂಬಾ ಸ್ಟೈಲಿಶ್ ಆಗಿ ಬಂದಿದೆ. ನಾವು ಮೊದಲು ದೀಪಿಕಾ ಜತೆ ಲವ್ ಆಜ್ ಕಲ್‌ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಆ ಚಿತ್ರದ ಚೋರ್ ಬಜಾರಿ ಹಾಡಿಗೆ ನಮ್ಮ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದೇವೆ. ಹಾಡಿನ ಚಿತ್ರೀಕರಣದ ವೇಳೆ, ಶಾರುಖ್‌ ಹಾಗೂ ದೀಪಿಕಾ ಇಬ್ಬರೂ ಚೆನ್ನಾಗಿ ಅಭ್ಯಾಸ ಮಾಡಿದ್ದರಿಂದ, ಹೆಚ್ಚು ರೀಟೇಕ್ ಆಗಲಿಲ್ಲ. ಅವರಿಬ್ಬರ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ವಿಶೇಷವಾಗಿ, ಶಾರುಖ್ ಅವರು ಬಹಳ ಸಮಯದ ನಂತರ ನೃತ್ಯ ಮಾಡುವುದನ್ನು ನಾನು ನೋಡುತ್ತಿದ್ದೇನೆ. ಇದು ನನಗೆ ತುಂಬಾ ವಿಶೇಷ ಅನಿಸಿತು.

‘ಶಾರುಖ್ ನಮ್ಮನ್ನು ಸಂತೋಷಪಡಿಸಲು ಎಲ್ಲವನ್ನೂ ಮಾಡಿದರು’!
ಶಾರುಖ್‌ ಅವರು ನೋವಿನಲ್ಲಿದ್ದರೂ ಗೊತ್ತಾಗದಂತೆ ಇರುತ್ತಾರೆ. ತಾವು ಏನು ಮಾಡಬೇಕೆಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ತಮಗನಿಸಿದ್ದನ್ನೇ ಮಾಡುತ್ತಾರೆ. ಅವರಿಗೆ ಮೊಣಕಾಲು ನೋವಿನ ಸಮಸ್ಯೆಯಿದೆ. ಆದರೆ ಹಾಡನ್ನು ಗಮನಿಸಿದರೆ, ಎಲ್ಲವೂ ಎಲ್ಲವೂ ಕಾಲಿನ ಚಲನೆಗಳೇ ಆಗಿವೆ. ಹಾಗಾಗಿ, ಈ ಹಾಡಿಗೆ ಡ್ಯಾನ್ಸ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಚಿತ್ರೀಕರಣವನ್ನು ಮಾಡುವಾಗ, ನೋವಿನ ಬಗ್ಗೆ ಚಿಂತಿಸಬೇಡಿ ಎಂದು ಅವರು ಹೇಳಿದ್ದರು. ನೋವಿದ್ದರೂ ಕಾಂಪ್ರಮೈಸ್‌ ಮಾಡಿಕೊಳ್ಳದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಿದ್ಧಾರ್ಥ್ ಆನಂದ್ ಹಾಗೂ ನನಗೆ ಸಂತೋಷವನ್ನುಂಟು ಮಾಡುವಂತೆ ಶಾರುಖ್ ಅವರು ನೃತ್ಯ ಮಾಡಿದ್ದಾರೆʼʼಎಂದರು

ಜನವರಿ 25ಕ್ಕೆ ಪಠಾಣ್‌ ಸಿನಿಮಾ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಯಶ್​ ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ | Pathaan Film | ದುಬೈನ ಬುರ್ಜ್ ಖಲೀಫಾದಲ್ಲಿ ʻಪಠಾಣ್‌ʼ ಟ್ರೈಲರ್‌ ಅನಾವರಣ!

Exit mobile version