Site icon Vistara News

Pathaan Film | ʼಪಠಾಣ್‌ʼಗೆಂದು ಶಾರುಖ್‌ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಅಕ್ಷಯ್‌ಗಿಂತ ಇಷ್ಟೊಂದು ಕಡಿಮೆನಾ!

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ʼಪಠಾಣ್‌ʼ (Pathaan Film) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಾಲ್ಕು ವರ್ಷಗಳ ನಂತರ ನಟ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳೆಲ್ಲರೂ ಕಾತರದಿಂದ ಕಾಯಲಾರಂಭಿಸಿದ್ದಾರೆ. ಅಂದ ಹಾಗೆ ಈ ಸಿನಿಮಾಕ್ಕಾಗಿ ನಟ ಪಡೆದಿರುವ ಸಂಭಾವನೆಯ ಮಾಹಿತಿ ಇದೀಗ ಹೊರಬಿದ್ದಿದೆ. ಬೇರೆ ನಟರಿಗೆ ಹೋಲಿಸಿದರೆ ಶಾರುಖ್‌ ಅತ್ಯಂತ ಕಡಿಮೆ ಸಂಭಾವನೆ ಪಡೆದಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: Pathaan Film | ಮೊಣಕಾಲು ನೋವಿದ್ದರೂ ಸೂಪರ್ ಆಗಿ ಡ್ಯಾನ್ಸ್ ಮಾಡಿದ ಶಾರುಖ್‌: ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್!

ಶಾರುಖ್‌ ʼಪಠಾಣ್‌ʼ ಸಿನಿಮಾಕ್ಕಾಗಿ 35-40 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರಂತೆ. ಅದರ ಜತೆಗೆ ಸಿನಿಮಾಕ್ಕೆ ಬರುವ ಲಾಭದಲ್ಲೂ ಪಾಲು ಪಡೆಯಲಿದ್ದಾರೆ. ಆದರೂ ಶಾರುಖ್‌ ಅವರು ಈ ಹಿಂದಿನ ಸಿನಿಮಾಗಳಿಗೆ ಪಡೆದಿರುವ ಸಂಭಾವನೆಗಿಂತ ಈ ಸಿನಿಮಾದಲ್ಲಿ ಪಡೆದಿರುವ ಸಂಭಾವನೆ ಕಡಿಮೆಯಂತೆ.


ಅಕ್ಷಯ್‌ ಕುಮಾರ್‌ ಅವರು ಕಳೆದ ವರ್ಷ ʼಕಟ್ಪುಟ್ಲಿʼ ಸಿನಿಮಾದಲ್ಲಿ ನಟಿಸುವುದಕ್ಕೆ ಸಿನಿಮಾದ ನಿರ್ಮಾಪಕರಿಂದ ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಸ್ವೀಕರಿಸಿದ್ದರು ಎನ್ನುವ ವರದಿಯಿದೆ. ಅವರಿಗೆ ಹೋಲಿಸಿದರೆ ಈಗ ಶಾರುಖ್‌ ಅಕ್ಷಯ್‌ ಅವರ ಮೂರನೇ ಒಂದರಷ್ಟು ಸಂಭಾವನೆ ಪಡೆದಂತಾಗಿದೆ. ಈ ಬಗ್ಗೆ ಇಬ್ಬರೂ ನಟರ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.‌

ಇದನ್ನೂ ಓದಿ: Pathaan Film: ಕೇಸರಿ ತ್ಯಾಗದ ಸಂಕೇತ, ಬುದ್ಧ-ಬಸವಣ್ಣರೂ ಈ ಬಣ್ಣ ಧರಿಸಿದ್ದರು; ಪಠಾಣ್‌ ಸಿನಿಮಾ ಬಿಕಿನಿಗೆ ಅಹಿಂಸಾ ಚೇತನ್‌ ಬೆಂಬಲ

ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ʼಪಠಾಣ್‌ʼ ಸಿನಿಮಾದಲ್ಲಿ ಶಾರುಖ್‌ಗೆ ಜತೆಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ಆದಿತ್ಯ ಚೋಪ್ರಾ ಮತ್ತು ಅಲೆಕ್ಸಾಂಡರ್‌ ದೋಸ್ತಲ್‌ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಜ.25ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಫಸ್ಟ್‌ ಡೇ ಫಸ್ಟ್‌ ಶೋಗಾಗಿ ಮುಂಗಡ ಬುಕ್ಕಿಂಗ್‌ ಆರಂಭವಾಗಿದೆ. ಸಿನಿಮಾ ಮೊದಲನೇ ದಿನವೇ 35-40 ಕೋಟಿ ರೂ. ಸಂಪಾದಿಸಲಿದೆ ಎಂದು ಅಂದಾಜಿಸಲಾಗಿದೆ.

Exit mobile version