Site icon Vistara News

Pathaan Film | ಹೊಸ ಪೋಸ್ಟರ್‌ನೊಂದಿಗೆ ಪಠಾಣ್‌ ಟ್ರೈಲರ್‌ ಬಿಡುಗಡೆ ದಿನಾಂಕ ಘೋಷಿಸಿದ ನಟ ಶಾರುಖ್‌ ಖಾನ್!

Pathaan Film

ಬೆಂಗಳೂರು : ಶಾರುಖ್‌ ಖಾನ್‌-ದೀಪಿಕಾ ಪಡುಕೋಣೆ ಜೋಡಿಯ ಪಠಾಣ್‌ ಸಿನಿಮಾ (Pathaan Film) ಟ್ರೈಲರ್‌ ಜನವರಿ 10ರಂದು ಬಿಡುಗಡೆಗೊಳ್ಳುತ್ತಿದೆ. ಚಿತ್ರತಂಡ ಅಧಿಕೃತ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡಿದೆ. ಜನವರಿ 10 ಬೆಳಗ್ಗೆ 11 ಗಂಟೆಗೆ ಪಠಾಣ್‌ ಟ್ರೈಲರ್ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಜನವರಿ 25, ಗಣರಾಜ್ಯೋತ್ಸವದ ದಿನದ ಮುನ್ನಾದಿನವೇ ಪಠಾಣ್ ಸಿನಿಮಾ ರಾಷ್ಟ್ರಾದ್ಯಂತ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ‘ಬೇಷರಮ್​ ರಂಗ್​ (ನಾಚಿಕೆ ಇಲ್ಲದ ಬಣ್ಣ)’ ಎಂಬ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿ, ಮಾದಕವಾಗಿ ನೃತ್ಯ ಮಾಡಿದ್ದೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಶಾರುಖ್​-ದೀಪಿಕಾ ಅಭಿಮಾನಿಗಳು ಪಠಾಣ್​ ಸಿನಿಮಾಕ್ಕಾಗಿ ಕಾಯುತ್ತಿದ್ದರೆ, ಇನ್ನೊಂದು ವರ್ಗದ ಜನರು ಪಠಾಣ್​ ಬಹಿಷ್ಕರಿಸಬೇಕು. ಈ ಚಿತ್ರ ಬಿಡುಗಡೆ ಮಾಡಬಾರದು ಎಂದೂ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ | Pathaan Film | ಪಠಾಣ್‌ ಟ್ರೈಲರ್ ಜತೆಗೆ ಅನಾವರಣಗೊಳ್ಳಲಿದೆ YRF ಸ್ಪೈ ಯೂನಿವರ್ಸ್ ಲೋಗೊ

ವಿವಾದ ಮಿತಿಮೀರಿದ ಬೆನ್ನಲ್ಲೇ ಪಠಾಣ್​ ಚಿತ್ರದಲ್ಲಿರುವ ವಿವಾದಿತ ದೃಶ್ಯಗಳು, ಹಾಡಿನಲ್ಲಿ ಬದಲಾವಣೆ ಮಾಡಬೇಕು ಎಂದು ಕೇಂದ್ರ ಚಲನಚಿತ್ರ ಸೆನ್ಸಾರ್ ಬೋರ್ಡ್​ (CBFC) ಸೂಚನೆಯನ್ನೂ ನೀಡಿದೆ. ಚಲನಚಿತ್ರ ತಂಡದವರು ಪಠಾಣ್​​ ಸಿನಿಮಾವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಯಶ್​ ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ | Pathaan Film | ದೀಪಿಕಾ ಪಡುಕೋಣೆ ಸೈಡ್‌ ಪೋಸ್‌ ದೃಶ್ಯಕ್ಕೆ ಬಿತ್ತಾ ಕತ್ತರಿ? ಕೇಸರಿ ಬಿಕಿನಿ ಕಥೆ ಏನು?

Exit mobile version