Site icon Vistara News

Shah Rukh Khan: 2024ಕ್ಕೆ ಹ್ಯಾಟ್ರಿಕ್‌ ಸಿನಿಮಾ ಕೊಡ್ತಾರಂತೆ ಶಾರುಖ್‌!

Shah Rukh Khan denies any role to release of Navy Veterans from Qatar

ಬೆಂಗಳೂರು: 2023ರಲ್ಲಿ ಶಾರುಖ್‌ ಖಾನ್‌ (Shah Rukh Khan) ಅವರು ಮೂರು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಪಠಾಣ್, ಜವಾನ್ ಮತ್ತು ಡಂಕಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿವೆ. ಶಾರುಖ್ ಖಾನ್‌ಗೆ 2023 ಬಿಡುವಿಲ್ಲದ ವರ್ಷವಾಗಿತ್ತು. ಇದೀಗ 2024ರಲ್ಲಿ ಶಾರುಖ್‌ ಯಾವೆಲ್ಲ ಸಿನಿಮಾಗಳನ್ನು ಮಾಡುತ್ತಾರೆ ಎಂಬುದೇ ಅವರ ಫ್ಯಾನ್ಸ್‌ನಲ್ಲಿ ಕುತೂಹಲ. ಸದ್ಯಕ್ಕೆ ನಟ ನಟ ಲಂಡನ್‌ನಲ್ಲಿ ಇದ್ದು, ಸಿನಿಮಾದಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೇ ತಿಂಗಳಿನಲ್ಲಿ ಶಾರುಖ್‌ ಮೂರು ಸಿನಿಮಾಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಶಾರುಖ್‌ ಫ್ಯಾನ್ಸ್‌ ನಟನ ಹೊಸ ಸಿನಿಮಾ ಅಪ್‌ಡೇಟ್‌ಗಾಗಿ ಕಾದಿದ್ದಾರೆ. ಶಾರುಖ್‌ ಕೈಯಲ್ಲಿ ಕೆಲವು ಸ್ಕ್ರಿಪ್ಟ್‌ಗಳಿವೆ. ಸದ್ಯ ಲಂಡನ್‌ನಲ್ಲಿದ್ದಾರೆ. ಸ್ವಲ್ಪ ಬ್ರೇಕ್‌ ಪಡೆದುಕೊಂಡ ಬಳಿಕ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಯೋಚನೆ ಮಾಡಲಿದ್ದಾರೆ. ಇದೇ ತಿಂಗಳಿನಲ್ಲಿ ಶಾರುಖ್‌ ಮೂರು ಸಿನಿಮಾಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಡೋದು ಗ್ಯಾರಂಟಿʼʼಎಂದು ವರದಿಯಾಗಿದೆ.

ಇದನ್ನೂ ಓದಿ: Shah Rukh Khan: ಮುಖ ಮುಚ್ಚಿಕೊಂಡು ಕ್ಲಿನಿಕ್‌ನಲ್ಲಿ ಕಾಣಿಸಿಕೊಂಡ ಶಾರುಖ್‌!

ಶಾರುಖ್‌ ಅವರ ಇತ್ತೀಚಿನ ಸಂದರ್ಶನವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ʼಡಂಕಿʼ ಪ್ರಚಾರ ಕಾರ್ಯದ ಸಮಯದಲ್ಲಿ ಶಾರುಖ್‌ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿದ್ದರು. ಇನ್ನು ಮುಂದೆ ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ʻʻಮಾರ್ಚ್​ ಮತ್ತು ಏಪ್ರಿಲ್​ ತಿಂಗಳಲ್ಲಿ ನನ್ನ ಮುಂದಿನ ಸಿನಿಮಾದ ಶೂಟಿಂಗ್​ ಶುರು ಆಗಲಿದೆ. ವಯಸ್ಸಿಗೆ ಸರಿ ಎನಿಸುವಂತಹ ಪಾತ್ರವನ್ನು ಮಾಡುತ್ತೇನೆ. ಆದರೆ ಹೀರೊ ನಾನು ಆಗಿರುತ್ತೇನೆ’ ಎಂದು ಅವರು ಹೇಳಿದ್ದರು. ʻʻಜವಾನ್ ತುಂಬಾ ಕಮರ್ಷಿಯಲ್ ಆಗಿತ್ತು. ಡಂಕಿ ತುಂಬ ನೈಜವಾಗಿ ಮೂಡಿಬಂದ ಸಿನಿಮಾʼʼ ಎಂದಿದ್ದರು.

Exit mobile version