Site icon Vistara News

Pathaan Movie | 36 ಗಂಟೆಗಳಲ್ಲಿ ಬುಕ್‌ ಮೈ ಶೋನಲ್ಲಿ 4 ಲಕ್ಷ ಟಿಕೆಟ್‌ ಸೋಲ್ಡ್‌ ಔಟ್‌: ಪಠಾಣ್‌ಗೆ ಅದ್ಭುತ ಪ್ರತಿಕ್ರಿಯೆ!

Pathaan Movie crosses Rs 20 crore

ಬೆಂಗಳೂರು : ಶಾರುಖ್‌ ಅಭಿನಯದ ʻಪಠಾಣ್‌ʼ ಸಿನಿಮಾ (Pathaan Movie) ದೇಶಾದ್ಯಂತ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ. ಇತ್ತೀಚೆಗೆ, ಸಿಒಒ ಸಿನಿಮಾಸ್, ಬುಕ್‌ ಮೈಶೋ ಆಶಿಶ್ ಸಕ್ಸೇನಾ ಪಠಾಣ್ ಬಿಡುಗಡೆಗೆ ಕೆಲವು ದಿನಗಳ ಮೊದಲು ಹೇಗೆ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಆಶಿಶ್ ಈ ಬಗ್ಗೆ ಮಾತನಾಡಿ, “ಸುದೀರ್ಘ 4 ವರ್ಷಗಳ ನಂತರ, ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಪಠಾಣ್‌ ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಸಿನಿಮಾ ಈಗಾಗಲೇ ಬುಕ್‌ಮೈಶೋನಲ್ಲಿ ಮುಂಗಡ ಮಾರಾಟದಲ್ಲಿ 4 ಲಕ್ಷ ಟಿಕೆಟ್‌ಗಳನ್ನು ದಾಟಿದೆ. 36 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್‌ಗಳು ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಆಗಿವೆ. ಪಠಾಣ್‌ಗೆ ಮುಂಗಡ ಮಾರಾಟ ಹಂತ ಹಂತವಾಗಿ ಪ್ರಾರಂಭವಾಗಿದೆ. ಇದುವರೆಗೆ ಬುಕ್‌ಮೈಶೋನಲ್ಲಿ 2000 ಸ್ಕ್ರೀನ್‌ಗಳು ಲಭ್ಯವಿದ್ದು, ಚಿತ್ರದ ಹಿಂದಿ ಭಾಷೆಯ ಆವೃತ್ತಿಯು ಚಾರ್ಟ್‌ಗಳಲ್ಲಿ ಮುಂಚೂಣಿಯಲ್ಲಿದೆ. ಇದರ ಬೆನ್ನಲ್ಲೇ ತೆಲುಗು ಕೂಡ” ಎಂದಿದ್ದಾರೆ.

ದಕ್ಷಿಣ ಭಾರತದಲ್ಲಿ ಪಠಾಣ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಆಶಿಶ್ ಸಕ್ಸೇನಾ ಹೇಳಿದ್ದಾರೆ. “ಹೈದರಾಬಾದ್, ಕೋಲ್ಕತ್ತಾ, ದೆಹಲಿ-ಎನ್‌ಸಿಆರ್, ಮುಂಬೈ, ಬೆಂಗಳೂರು, ಭುವನೇಶ್ವರ, ಪುಣೆ, ಲಕ್ನೋ ಮತ್ತು ಚೆನ್ನೈ ಟಿಕೆಟ್ ಮಾರಾಟದಲ್ಲಿ ಪ್ರಮುಖವಾಗಿ ಭಾರತದಾದ್ಯಂತ ಪ್ರತಿಕ್ರಿಯೆ ಅದ್ಭುತವಾಗಿದೆ. ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರು ಇದುವರೆಗಿನ ಒಟ್ಟಾರೆ ಮುಂಗಡ ಮಾರಾಟದಲ್ಲಿ 26% ಕೊಡುಗೆ ನೀಡುವುದರೊಂದಿಗೆ ದಕ್ಷಿಣ ಭಾರತವು ವಿಶೇಷವಾಗಿ ಪ್ರಭಾವಶಾಲಿಯಾಗಿದೆ ” ಎಂದು ಅವರು ಹೇಳಿದರು.

ಇದನ್ನೂ ಓದಿ | Pathaan Movie | ʻಪಠಾಣ್‌ʼ ಅಡ್ವಾನ್ಸ್‌ ಬುಕ್ಕಿಂಗ್‌ ಓಪನ್‌: 1.17 ಲಕ್ಷ ಟಿಕೆಟ್‌ ಸೋಲ್ಡ್‌ ಔಟ್‌!

ನಾಲ್ಕು ವರ್ಷಗಳ ನಂತರ ಶಾರುಖ್‌ ಮತ್ತೆ ತೆರೆ ಮೇಲೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್‌ ಅಭಿಮಾನಿಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಶ್‌ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ | Pathaan Movie | ರಿಯಾಲಿಟಿ ಶೋನಲ್ಲಿ ಪ್ರಚಾರ ಬೇಡ ಅಂದ್ರಾ ಶಾರುಖ್‌ ಖಾನ್? ಇದು ʻಪಠಾಣ್‌ʼ ಹೊಸ ತಂತ್ರ!

Exit mobile version