Site icon Vistara News

Pathaan Movie: ವಿಶ್ವಾದ್ಯಂತ 542 ಕೋಟಿ ರೂ. ಬಾಚಿದ ಪಠಾಣ್‌

Pathaan Movie crosses Rs 20 crore

ಬೆಂಗಳೂರು: ಶಾರುಖ್ ಖಾನ್ ಅವರ ಪಠಾಣ್‌ ಸಿನಿಮಾ (Pathaan Movie) ವಿಶ್ವಾದ್ಯಂತ 542 ಕೋಟಿ ರೂ. ಗಳಿಕೆ ಕಂಡಿದೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸ್ವದೇಶದಲ್ಲಿ 335 ಕೋಟಿ ರೂ. ಮತ್ತು ವಿದೇಶದಲ್ಲಿ 207 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

“ಪಠಾಣ್ 500 ಕೋಟಿ ರೂ. ಗಡಿ ದಾಟಿದೆ: 5 ದಿನಗಳಲ್ಲಿ ₹ 542 ಕೋಟಿ ವಿಶ್ವಾದ್ಯಂತ ಗಳಿಕೆ.” ಎಂದು ಆದರ್ಶ್ ಅವರು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಭಾರತದಲ್ಲಿ, ಚಿತ್ರವು ಐದು ದಿನಗಳಲ್ಲಿ ₹ 271 ಕೋಟಿ ಗಳಿಸಿದೆ ಮತ್ತು ತಮಿಳು ಮತ್ತು ತೆಲುಗು ಡಬ್‌ಗಳು ₹ 9.75 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಇದನ್ನೂ ಓದಿ: Pathaan Movie: ಮುಂಬೈ ಐಕಾನಿಕ್ ಗೈಟಿ ಗ್ಯಾಲಕ್ಸಿ ಥಿಯೇಟರ್‌ಗೆ ಭೇಟಿ ಕೊಟ್ಟ ದೀಪಿಕಾ ಪಡುಕೋಣೆ: ವಿಡಿಯೊ ಇಲ್ಲಿದೆ

“ಪಠಾಣ್‌ ಹಿಂದಿ ಚಲನಚಿತ್ರಗಳ ವ್ಯಾಪಾರವನ್ನು ರೀಬೂಟ್ ಮಾಡುತ್ತದೆ ಮತ್ತು ಪುನರುಜ್ಜೀವನಗೊಳಿಸುತ್ತದೆ. ಅದರ 5-ದಿನಗಳ ವಾರಾಂತ್ಯದಲ್ಲಿ ಊಹಿಸಲಾಗದ ಮತ್ತು ಯೋಚಿಸಲಾಗದ ಸಂಖ್ಯೆಯಲ್ಲಿ ಕಲೆಕ್ಷನ್‌ ಮಾಡುತ್ತಿದೆ. ಬುಧವಾರ 55 ಕೋಟಿ ರೂ., ಗುರುವಾರ 68 ಕೋಟಿ ರೂ., ಶುಕ್ರವಾರ 38 ಕೋಟಿ ರೂ, ಶನಿವಾರ 51.5 ಕೋಟಿ ರೂ, ಒಟ್ಟು. ₹ 271 ಕೋಟಿ ರೂ. ಗಳಿಕೆ ಕಂಡಿದೆ.” ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ,

“ಪಠಾಣ್‌, ತಮಿಳು – ತೆಲುಗು: ಬುಧವಾರ 2 ಕೋಟಿ ರೂ, ಗುರುವಾರ 2.5 ಕೋಟಿ ರೂ, ಶುಕ್ರವಾರ 1.25 ಕೋಟಿ ರೂ, ಶನಿ 1.75 ಕೋಟಿ, ಭಾನುವಾರ 2.25 ಕೋಟಿ ರೂ. ಒಟ್ಟು: ₹ 9.75 ಕೋಟಿ.” ಕಲೆಕ್ಷನ್‌ ಮಾಡಿದೆ. ಪಠಾಣ್ ಈಗಾಗಲೇ ಹಿಂದಿಯಲ್ಲಿ ಅತಿ ವೇಗವಾಗಿ 250 ಕೋಟಿ ಗಳಿಸಿದ ಚಿತ್ರವಾಗಿದ್ದು, ಕೆಜಿಎಫ್ 2, ಬಾಹುಬಲಿ, ದಂಗಲ್, ಸಂಜು ಮತ್ತು ಟೈಗರ್ ಜಿಂದಾ ಹೈ ಅನ್ನು ಹಿಂದಿಕ್ಕಿದೆ.

ಇದನ್ನೂ ಓದಿ: Pathaan Movie: ʻಪಠಾಣ್‌ʼ ಸಕ್ಸೆಸ್‌ ಬೆನ್ನಲ್ಲೇ ಮನೆಯ ಗ್ಯಾಲರಿಗೆ ಬಂದು  ಅಭಿಮಾನಿಗಳತ್ತ ಕೈ ಬೀಸಿದ ಶಾರುಖ್‌!

ಜನವರಿ 25 ರಂದು ಬಿಡುಗಡೆಯಾಗುವ ಮೊದಲು, ಪಠಾಣ್ ಮುಂಗಡ ಬುಕಿಂಗ್‌ನಲ್ಲಿ 5.5 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು. 100 ದೇಶಗಳಲ್ಲಿ 8,000 ಸ್ಕ್ರೀನ್‌ಗಳಲ್ಲಿ ತೆರೆಕಂಡಿತು.

Exit mobile version