Site icon Vistara News

Pathaan Movie: ʻಪಠಾಣ್‌ʼನಲ್ಲಿ ಆಮಿರ್ ಖಾನ್‌ ಸಹೋದರಿ ನಿಖತ್ ಖಾನ್ ಹೆಗ್ಡೆ ನಿರ್ವಹಿಸಿದ ಪಾತ್ರವಾದರೂ ಏನು?

Pathaan Movie Aamir Khan's Sister Plays

ಬೆಂಗಳೂರು: ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಸಿನಿಮಾ (Pathaan Movie) ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡುತ್ತಿದೆ. ನಟಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಸೇರಿದಂತೆ ಪ್ರಮುಖ ತಾರೆಯರು ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಅತಿಥಿ ಪಾತ್ರವು ಅಭಿಮಾನಿಗಳ ಹೃದಯವನ್ನು ಗೆದ್ದರೆ, ಚಿತ್ರದಲ್ಲಿ ಮತ್ತೊಂದು ಆಸಕ್ತಿದಾಯಕ ಅತಿಥಿ ಪಾತ್ರವಿತ್ತು. ಇದು ಎಲ್ಲಾ ನೆಟಿಜನ್‌ಗಳನ್ನು ಮಾತನಾಡುವಂತೆ ಮಾಡಿದೆ. ಶಾರುಖ್ ತೆರೆ ಮೇಲೆ ತನ್ನ ಸಾಕು ತಾಯಿಯೊಂದಿಗೆ ಕಾಣಿಸಿಕೊಂಡ ದೃಶ್ಯದಲ್ಲಿ, ಆಮಿರ್ ಖಾನ್‌ ಅವರ ಅಕ್ಕ ನಿಖತ್ ಖಾನ್ ಹೆಗ್ಡೆ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು.

ನಿಖತ್ ಖಾನ್ ಹೆಗ್ಡೆ ಅಫ್ಘಾನಿ ಮಹಿಳೆಯಾಗಿ ,ಶಾರುಖ್‌ ಅವರ ಸಾಕು ತಾಯಿಯಾಗಿ ಕಾಣಿಸಿಕೊಂಡರು. ಚಿತ್ರದಲ್ಲಿ, ಅವರು ಪಠಾಣ್‌ನನ್ನು ತನ್ನ ಮಗ ಎಂದು ಕರೆಯುತ್ತಿದ್ದಂತೆ, ಭಾವನಾತ್ಮಕ ಸಂಭಾಷಣೆಯಲ್ಲಿ ಜನರ ಹೃದಯವನ್ನು ಗೆದ್ದಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ . ನಿಖತ್ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಒಂದೆರಡು ವೀಡಿಯೊ ಕ್ಲಿಪ್‌ಗಳನ್ನು ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಸ್ಟೋರಿಗಳಿಗೆ ʻತುಂಬ ಅದ್ಭುತ ಮಾಮ್” ಎಂದು ಬರೆದರೆ ಇನ್ನೊಬ್ಬರು ʻʻನಮ್ಮ ನಿಖತ್ʼ ಎಂದು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: Pathaan Movie: ಕೆಜಿಎಫ್‌ 2 ದಾಖಲೆ ಮುರಿದು ಭರ್ಜರಿ ಗಳಿಕೆ ಕಂಡ ʻಪಠಾಣ್’!

ನಿಖತ್ ಅವರು ಮಿಷನ್ ಮಂಗಲ್, ತನ್ಹಾಜಿ – ದಿ ಅನ್‌ಸಂಗ್ ವಾರಿಯರ್‌ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಲಗಾನ್, ಹಮ್ ಹೇ ರಹೀ ಪ್ಯಾರ್ ಕೆ, ಮತ್ತು ತುಮ್ ಮೇರೆ ಹೋ ಮುಂತಾದ ಅನೇಕ ಹಿಟ್ ಚಿತ್ರಗಳಿಗೆ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Pathaan Movie: ಸೆನ್ಸಾರ್ ಬೋರ್ಡ್ ಓಕೆ ಮಾಡಿದೆ, ಇನ್ನು ಪಠಾಣ್ ವಿರುದ್ಧ ಪ್ರತಿಭಟಿಸಿ ಅರ್ಥವಿಲ್ಲ! ಹೀಗೆ ಹೇಳಿದ್ದು ಯಾರು?

ಪಠಾಣ್ ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳೇ ಕೇಳಿ ಬರುತ್ತಿವೆ. ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ‘ಪಠಾಣ್’ ಚಿತ್ರಕ್ಕೆ 4.5 ರೇಟಿಂಗ್ (Pathaan Movie Collections) ನೀಡಿದ್ದಾರೆ. ಚಿತ್ರವನ್ನು ಬ್ಲಾಕ್ ಬಾಸ್ಟರ್ ಎಂದು ಕರೆದಿದ್ದಾರೆ. ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಹೊರತುಪಡಿಸಿ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version