ಬೆಂಗಳೂರು: ಎರಡನೇ ವಾರ ಪಠಾಣ್ ಬಾಕ್ಸ್ (Pathaan Movie) ಆಫೀಸ್ ಕಲೆಕ್ಷನ್‌ನಲ್ಲಿ ಕೆಜಿಎಫ್-2 ಹಿಂದಿ ಆವೃತ್ತಿಯ ಲೈಫ್ ಟೈಮ್ ಗಳಿಕೆಯನ್ನು ಹಿಂದಿಕ್ಕಲಿದೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ವರದಿ ಮಾಡಿದ್ದಾರೆ. 13ನೇ ದಿನದಂದು, ಪಠಾಣ್ 8.25 ಕೋಟಿ ರೂ. ಗಳಿಕೆ ಕಂಡಿದೆ. ಪಠಾಣ್ ನಿರ್ಮಾಪಕರಾದ ಯಶ್ ರಾಜ್ ಫಿಲ್ಮ್ಸ್ ಟಿಕೆಟ್ ದರವನ್ನು ಕಡಿಮೆ ಮಾಡಿರುವುದರಿಂದ ಸೋಮವಾರದ ಆದಾಯದಲ್ಲಿ ಕುಸಿತವಾಗಿದೆ ಎಂದು ಆದರ್ಶ್ ವರದಿ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಪಠಾಣ್, ಜನವರಿ 25 ರಂದು 100ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡಿತು ಮತ್ತು ಅಂದಿನಿಂದ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಶುಕ್ರವಾರ 13.50 ಕೋಟಿ ರೂ. ಶನಿವಾರ 22.50 ಕೋಟಿ ರೂ, ಭಾನುವಾರ 27.50 ಕೋಟಿ ರೂ, ಸೋಮವಾರ 8.25 ಕೋಟಿ ರೂ ಒಟ್ಟು 422.75 ಕೋಟಿ ರೂ. ಗಳಿಕೆ ಕಂಡಿದೆʼʼಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Pathaan Movie: ʻಪಠಾಣ್ʼ ಸಕ್ಸೆಸ್ ಬೆನ್ನಲ್ಲೇ ಇಬ್ಬರು ಸೂಪರ್ ಸ್ಟಾರ್ಸ್ ಬಾಲ್ಯದ ಫೋಟೊ ವೈರಲ್!
ಕೆಜಿಎಫ್ ಹಿಂದಿ ಆವೃತ್ತಿ ಲೈಫ್ ಟೈಮ್ ಕಲೆಕ್ಷನ್, 500 ಕೋಟಿಗಿಂತ ಸ್ವಲ್ಪ ಹೆಚ್ಚು ಸಂಗ್ರಹಿಸಿದೆ. ಪಠಾಣ್‌ನ ತೆಲುಗು ಮತ್ತು ತಮಿಳು ಆವೃತ್ತಿಗಳು ಸೋಮವಾರ 30 ಲಕ್ಷ ರೂ. ಗಳಿಸಿವೆ, ಇದುವರೆಗಿನ ಡಬ್‌ಗಳ ಒಟ್ಟು ಕಲೆಕ್ಷನ್ 15.70 ಕೋಟಿರೂ. ತಲುಪಿದೆ. ಚಿತ್ರದ ಹಿಂದಿ, ತಮಿಳು ಮತ್ತು ತೆಲುಗು ಆವೃತ್ತಿಗಳ ಒಟ್ಟು ಟಿಕೆಟ್ ಮಾರಾಟವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 438.45 ಕೋಟಿಗೆ ಸೇರುತ್ತದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ರಾ ಏಜೆಂಟ್ ಆಗಿ ನಟಿಸಿದ್ದಾರೆ.