Site icon Vistara News

Pathaan Movie: ಕೆಜಿಎಫ್‌ 2 ದಾಖಲೆ ಮುರಿದು ಭರ್ಜರಿ ಗಳಿಕೆ ಕಂಡ ʻಪಠಾಣ್’!

Pathaan Movie Breaks record Of KGF-2

ಬೆಂಗಳೂರು : ಶಾರುಖ್‌ ಅಭಿನಯದ ಪಠಾಣ್‌ ಸಿನಿಮಾ (Pathaan Movie) ಟ್ರೇಡ್‌ ವಿಶ್ಲೇಷಕರ ಪ್ರಕಾರ ಮೊದಲ ದಿನವೇ 55 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ದೇಶಾದ್ಯಂತ ಈ ಚಿತ್ರದ ಸದ್ದು ಜೋರಾಗಿದೆ. ಶಾರುಖ್ ಖಾನ್ ಕೆರಿಯರ್‌ನಲ್ಲಿ ಮತ್ತೆ ದೊಡ್ಡ ಗೆಲುವು ಪಡೆದಿದ್ದಾರೆ. ಯಶ್ ನಟನೆಯʻ`ಕೆಜಿಎಫ್ 2′ (Kgf 2) ಚಿತ್ರದ ಹಿಂದಿ ವರ್ಷನ್ ಮೊದಲ ದಿನ ಮಾಡಿದ್ದ ದಾಖಲೆಯನ್ನು ಈಗ ʻಪಠಾಣ್’ ಸಿನಿಮಾ ಮುರಿದಿದೆ. 

ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ 2 ಸಿನಿಮಾ ಹಿಂದಿ ವರ್ಷನ್‌ನಲ್ಲಿ ಮೊದಲ ದಿನ 53.95 ಕೋಟಿ ರೂ. ಗಳಿಕೆ ಕಂಡಿತ್ತು. ʻಪಠಾಣ್’ (Pathaan) ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ಗಣರಾಜ್ಯೋತ್ಸವ ದಿನ (ಜ.26) ರಜೆ ದಿನ ಕಾರಣ ಸಿನಿಮಾಗೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ನೋಡಲು ಫ್ಯಾನ್ಸ್ ಚಿತ್ರಮಂದಿರದತ್ತ ಮುಗಿಬಿದ್ದಿದ್ದಾರೆ. ಹಾಗಾಗಿ ಸಿನಿಮಾ 100 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆಯಲಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: Pathaan Movie: ಸೆನ್ಸಾರ್ ಬೋರ್ಡ್ ಓಕೆ ಮಾಡಿದೆ, ಇನ್ನು ಪಠಾಣ್ ವಿರುದ್ಧ ಪ್ರತಿಭಟಿಸಿ ಅರ್ಥವಿಲ್ಲ! ಹೀಗೆ ಹೇಳಿದ್ದು ಯಾರು?

ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್, ʻʻಪಠಾಣ್ ಭಾರತದಲ್ಲಿ 25 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಪಿವಿಆರ್‌, 11.40 ಕೋಟಿ ರೂ. INOX 8.75 ಕೋಟಿ ರೂ. ಸಿನಿಪೊಲಿಸ್ 4.90 ಕೋಟಿ ರೂ. ಒಟ್ಟು 25.05 ಕೋಟಿ ರೂ. ಗಳಿಕೆ ಕಂಡಿದೆ. ವಾರ್‌ ಸಿನಿಮಾ 19.67 ಕೋಟಿ ರೂ., ಥಗ್ಸ್ ಆಫ್‌ ಹಿಂದುಸ್ತಾನ್‌ 18 ಕೋಟಿ ರೂ. ಮತ್ತು ಕೆಜಿಎಫ್‌ 22.15 ಕೋಟಿ ರೂ. ಗಳಿಕೆ ಕಂಡಿತ್ತು. ಈ ಮೂರು ಸಿನಿಮಾಗಳಿಗಿಂತ ಹೆಚ್ಚು ಪಠಾಣ್‌ ಸಿನಿಮಾ ಕಲೆಕ್ಷನ್‌ ಮಾಡಿದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Pathaan Movie: ʻಪಠಾಣ್‌ʼ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಎಷ್ಟು?

ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಹೊರತುಪಡಿಸಿ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version