Site icon Vistara News

Pathaan Movie : ಹನ್ನೆರಡೇ ದಿನಗಳಲ್ಲಿ 830 ಕೋಟಿ ರೂ. ದಾಟಿದ ಪಠಾಣ್‌ ಕಲೆಕ್ಷನ್‌

Pathaan Movie Beats SS Rajamouli's Baahubali 2, KGF 2

ಮುಂಬೈ: ಶಾರುಖ್‌ ಖಾನ್‌ (Shah Rukh Khan) ನಟನೆಯ ಪಠಾಣ್‌ ಸಿನಿಮಾ (Pathaan Movie) ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ ಹನ್ನೆರೆಡು ದಿನಗಳಲ್ಲಿ 830 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Pathaan Movie : ಪಠಾಣ್‌ ಸಿನಿಮಾ ನೋಡಿದ್ದಕ್ಕಾಗಿ 1 ಕೋಟಿ ರೂ. ಕೊಡಿ ಎಂದ ಅಭಿಮಾನಿ, ಶಾರುಖ್‌ ಉತ್ತರಿಸಿದ್ದು ಹೇಗೆ?
ಭಾರತದಲ್ಲಿಯೇ ಪಠಾಣ್‌ ಸಿನಿಮಾ 515 ಕೋಟಿ ರೂ. ಬಾಚಿಕೊಂಡಿದೆ. ಒಟ್ಟಾರೆಯಾಗಿ ವಿಶ್ವಾದ್ಯಂತ 832.20 ಕೋಟಿ ರೂ. ಸಿನಿಮಾಕ್ಕೆ ಸಿಕ್ಕಿದೆ. ಭಾರತದಲ್ಲಿ ಹಿಂದಿ ಭಾಷೆಯ ಸಿನಿಮಾಗೆ 414.5 ಕೋಟಿ ರೂ. ಸಿಕ್ಕಿರುವುದಾಗಿ ವರದಿಯಿದೆ. ವಿದೇಶಗಳಲ್ಲಿ ಪಠಾಣ್‌ ಸಿನಿಮಾಕ್ಕೆ 319 ಕೋಟಿ ರೂ. ಸಿಕ್ಕಿರುವುದಾಗಿ ಹೇಳಲಾಗಿದೆ. ಸಿನಿಮಾ ಇನ್ನು ಕೆಲ ದಿನಗಳಲ್ಲೇ 900 ಕೋಟಿ ರೂ. ದಾಖಲೆಯನ್ನು ದಾಟಲಿರುವುದಾಗಿ ವಿಶ್ಲೇಷಿಸುತ್ತಿದ್ದಾರೆ ಬಾಲಿವುಡ್‌ನ ವಿಶ್ಲೇಷಕರು.


ಯಶ್‌ ರಾಜ್‌ ಫಿಲಂ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ನಿರ್ದೇಶಕ ಸಿದ್ದಾರ್ಥ್‌ ಆನಂದ್‌ ನಿರ್ದೇಶಿಸಿದ್ದಾರೆ. ದೀಪಿಕಾ ಪಡುಕೋಣೆ, ಡಿಂಪಲ್‌ ಕಪಾಡಿಯಾ, ಅಶುತೋಷ ರಾನಾ, ಜಾನ್‌ ಅಬ್ರಾಹಂ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ನಾಲ್ಕು ವರ್ಷಗಳ ನಂತರ ಶಾರುಖ್‌ ಈ ಸಿನಿಮಾ ಮೂಲಕ ದೊಡ್ಡ ತೆರೆ ಮೇಲೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಸಿನಿಮಾ 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ದಾಖಲೆಯನ್ನು ನಿರ್ಮಿಸಿದೆ.

Exit mobile version