Site icon Vistara News

Pathaan Movie : ಒಂಬತ್ತೇ ದಿನಗಳಲ್ಲಿ 700 ಕೋಟಿ ರೂ. ಬಾಚಿಕೊಂಡ ಪಠಾಣ್‌

ಮುಂಬೈ: ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ (Pathaan Movie) ಹಲವಾರು ದಾಖಲೆಗಳನ್ನು ಬರೆಯುತ್ತ ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣಲಾರಂಭಿಸಿದೆ. ಸಿನಿಮಾ ಗುರುವಾರದ ಅಂತ್ಯಕ್ಕೆ ವಿಶ್ವಾದ್ಯಂತ 700 ಕೋಟಿ ರೂ.ಗೂ ಅಧಿಕ ಹಣ ಗಳಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Shahrukh Khan: ಪಠಾಣ್‌ನಿಂದ ಜವಾನ್‌, ಡಂಕಿ ಸಿನಿಮಾಗಳಿಗೆ ಲಾಭವಾಗುತ್ತಾ? ಶಾರುಖ್‌ ಬಗ್ಗೆ ಭವಿಷ್ಯ ನುಡಿದ ತಜ್ಞರು!
ಸಿನಿಮಾ ವಿಶ್ಲೇಷಕರಾಗಿರುವ ರಮೇಶ್‌ ಬಾಲಾ ಅವರು ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. “ಪಠಾಣ್‌ ಗಳಿಕೆ 700 ಕೋಟಿ ರೂ. ದಾಟಿದೆ” ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಹಿಂದಿ ಭಾಷೆಯಲ್ಲಿಯೇ ಈ ಸಿನಿಮಾ 350 ಕೋಟಿ ರೂ.ನಷ್ಟು ಸಂಪಾದನೆ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಪಠಾಣ್‌ ಗಳಿಕೆಯು ದಂಗಲ್‌ ಸಿನಿಮಾದ ಗಳಿಕೆಯನ್ನೂ ದಾಟಲಿದೆ ಎಂದು ವಿಶ್ಲೇಷಿಸಲಾಗಿದೆ. ದಂಗಲ್‌ ಸಿನಿಮಾ ಹಿಂದಿ ಭಾಷೆಯಲ್ಲಿ 387.87 ಕೋಟಿ ರೂ. ಗಳಿಸಿತ್ತು.


ಪಠಾಣ್‌ ಸಿನಿಮಾವು ವೈಆರ್‌ಎಫ್‌ನ ನಾಲ್ಕನೇ ಪತ್ತೇದಾರಿ ಸಿನಿಮಾವಾಗಿದೆ. ʼಏಕ್‌ ತಾ ಟೈಗರ್‌ʼ, ʼಟೈಗರ್‌ ಜಿಂದಾ ಹೈʼ ಮತ್ತು ʼವಾರ್‌ʼ ಸಿನಿಮಾದ ನಂತರ ಈ ಸಿನಿಮಾ ಬಿಡುಗಡೆಯಾಗಿದೆ. ಈ ಎಲ್ಲ ಸಿನಿಮಾಗಳು ಗಳಿಸಿರುವುದಕ್ಕಿಂತ ಹೆಚ್ಚು ಹಣವನ್ನು ಪಠಾಣ್‌ ಬಾಚಿಕೊಂಡಿದೆ. ಸಿನಿಮಾದಲ್ಲಿ ಟೈಗರ್‌ ಆಗಿ ಸಲ್ಮಾನ್‌ ಖಾನ್‌ ಕೂಡ ಕಾಣಿಸಿಕೊಂಡಿದ್ದಾರೆ. “ಸಿನಿಮಾದಲ್ಲಿ ಹೃತಿಕ್‌ ಅಥವಾ ಬೇರೆ ಯಾವುದೇ ನಟನನ್ನಾದರೂ ನಾವು ಕರೆತರಬಹುದಿತ್ತು. ಆದರೆ ಸಲ್ಮಾನ್‌ ಮತ್ತು ಶಾರುಖ್‌ ಒಟ್ಟಿಗೆ ಫೈಟ್‌ ಮಾಡಿ ಹಲವು ವರ್ಷಗಳೇ ಕಳೆದಿವೆ. 1996ರಲ್ಲಿ ಕಾಣಿಸಿಕೊಂಡ ನಂತರ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಸಲ್ಮಾನ್‌ರನ್ನೇ ಸಿನಿಮಾದಲ್ಲಿ ಎಳೆತಂದೆವು” ಎಂದಿದ್ದಾರೆ ನಿರ್ದೇಶಕ ಸಿದ್ದಾರ್ಥ್‌.

Exit mobile version