Site icon Vistara News

Pathaan Movie : 600 ಕೋಟಿ ರೂ. ಗಳಿಕೆಯತ್ತ ‘ಪಠಾಣ್’ ಸಿನಿಮಾ, ಬಾಕ್ಸ್‌ಆಫೀಸ್ ದಾಖಲೆ!

Pathaan Press Meet

#image_title

ಮುಂಬೈ: ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ (Pathaan Movie) ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ನಾಲ್ಕು ವರ್ಷದ ನಂತರ ನೆಚ್ಚಿನ ನಟನನ್ನು ಹಿರಿತೆರೆ ಮೇಲೆ ನೋಡಿರುವ ಸಂಭ್ರಮದಲ್ಲಿದ್ದಾರೆ. ವಿಶೇಷವೆಂದರೆ ಸಂಪಾದನೆ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿರುವ ಈ ಸಿನಿಮಾ ವಿಶ್ವಾದ್ಯಂತ ಈಗಾಗಲೇ 591 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಶೀಘ್ರವೇ ಅದು 600 ಕೋಟಿ ರೂ. ದಾಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Pathaan Press Meet: ಪಠಾಣ್‌ ಪಾರ್ಟ್‌ 2 ಖಚಿತ? ಶಾರುಖ್‌ ಖಾನ್‌ ಮಹತ್ವದ ಘೋಷಣೆ

ಪಠಾಣ್‌ ಸಿನಿಮಾ ದೇಶದಲ್ಲಿ ಬಿಡುಗಡೆಯಾದ ದಿನವೇ 57 ಕೋಟಿ ರೂ. ಗಳಿಸಿದೆ. ಗುರುವಾರದಂದು 70.50 ಕೋಟಿ ರೂ., ಶುಕ್ರವಾರ 39 ಕೋಟಿ ರೂ., ಶನಿವಾರ 53 ಕೋಟಿ ರೂ., ಭಾನುವಾರ 60.75 ಕೋಟಿ ರೂ., ಸೋಮವಾರ 26.50 ಕೋಟಿ ರೂ. ಗಳಿಸಿದೆ. ಸಿನಿಮಾ ಒಂಬತ್ತೇ ದಿನಗಳಲ್ಲಿ ಭಾರತದಲ್ಲಿಯೇ 300 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ. ಹಿಂದಿ ಸಿನಿಮಾಗಳು ಹಾಗೂ ಹಿಂದಿಗೆ ಡಬ್‌ ಆದ ಸಿನಿಮಾಗಳ ಮಟ್ಟಿಗೆ ಅತಿ ವೇಗವಾಗಿ 300 ಕೋಟಿ ಬಾಚಿಕೊಂಡ ಸಿನಿಮಾ ಪಟ್ಟಿಗೆ ಇದು ಸೇರಿಕೊಂಡಿದೆ. ಈ ವಿಚಾರದಲ್ಲಿ ಕೆ.ಜಿ.ಎಫ್‌ ಮತ್ತು ಬಾಹುಬಲಿ 2ರ ದಾಖಲೆಯನ್ನೂ ಮುರಿದುಹಾಕಿದೆ.


ಈ ಸಿನಿಮಾ ದೇಶದಲ್ಲಿಯೇ 400 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡುವ ಸಾಧ್ಯತೆ ಇದೆ ಎಂದು ಬಾಲಿವುಡ್‌ ಸಿನಿಮಾಗಳ ವಿಶ್ಲೇಷಕರು ಹೇಳುತ್ತಿದ್ದಾರೆ. ಒಂದು ವೇಳೆ ಹಾಗೆ ಆದರೆ ಬಾಲಿವುಡ್‌ನಲ್ಲಿ ಈ ಮಟ್ಟಿನ ಹಣ ಸಂಪಾದನೆ ಮಾಡಿದ ಮೊದಲ ಸಿನಿಮಾ ಪಠಾಣ್‌ ಆಗಲಿದೆ.


ಸಿನಿಮಾದ ಯಶಸ್ವಿನ ಬೆನ್ನಲ್ಲೇ ಶಾರುಖ್‌ ಖಾನ್‌ ತಮ್ಮ ಮನ್ನತ್‌ ಮನೆಯ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಕೈ ಬೀಸಿ, ಧನ್ಯವಾದ ತಿಳಿಸಿದ್ದರು. ಅದರ ನಂತರ ಸಿನಿಮಾ ತಂಡ ಮುಂಬೈನಲ್ಲಿ ಸಿನಿಮಾ ಯಶಸ್ಸಿನ ಕಾರ್ಯಕ್ರಮವನ್ನೂ ಮಾಡಿದೆ. ಶಾರುಖ್‌, ದೀಪಿಕಾ ಪಡುಕೋಣೆ, ಜಾನ್‌ ಅಬ್ರಾಹಂ ಹಾಗೂ ನಿರ್ದೇಶಕರಾದ ಸಿದ್ದಾರ್ಥ್‌ ಆನಂದ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂತಸ ಹಂಚಿಕೊಂಡಿದ್ದರು.

Exit mobile version