ಬೆಂಗಳೂರು: ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಸಿನಿಮಾ (Pathaan Movie) ವಿಶ್ವಾದ್ಯಂತ ಜನವರಿ 25ರಂದು ತೆರೆ ಕಾಣುತ್ತಿದೆ. ಇದೀಗ ಪಠಾಣ್ ಸಿನಿಮಾ ಪ್ರಮೋಷನ್ ವಿಚಾರಕ್ಕಾಗಿ ಸಖತ್ ಚರ್ಚೆಯಲ್ಲಿದೆ. ಚಿತ್ರ ಬಿಡುಗಡೆಗೆ ಕೇವಲ ಐದು ದಿನಗಳು ಬಾಕಿ ಇದ್ದರೂ ಯಾವುದೇ ರೀತಿಯ ಪ್ರಚಾರ ಕಾರ್ಯಗಳು ನಡೆಯುತ್ತಿಲ್ಲ.
ಇದೀಗ ಯಾವುದೇ ರಿಯಾಲಿಟಿ ಷೋನಲ್ಲಿ ತಮಗೆ ಪ್ರಚಾರ ಬೇಡ ಎಂದು ಚಿತ್ರ ತಂಡ ಹೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ. ‘ಬಿಗ್ ಬಾಸ್ 16’ ಕಪಿಲ್ ಶರ್ಮಾ ಅವರು ‘ದಿ ಕಪಿಲ್ ಶರ್ಮಾ ಶೋ’ಗಳಲ್ಲಿ ಪ್ರಚಾರ ಮಾಡಲು ಶಾರುಖ್ ಹಾಗೂ ಚಿತ್ರತಂಡ ನಿರಾಕರಿಸಿರುವುದಾಗಿ ವರದಿಯಾಗಿದೆ. ಚಿತ್ರ ತಂಡವು ಪ್ರಮೋಷನ್ಗಾಗಿ ಖರ್ಚು ಮಾಡುವ 15- 20 ಕೋಟಿ ರೂ ಉಳಿಸಿದೆ ಎಂದು ಹೇಳಲಾಗುತ್ತಿದೆ.
ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ನಲ್ಲಿ ʻʻಚಿತ್ರವು ಹಾಡುಗಳು ಮತ್ತು ಟ್ರೈಲರ್ಗಳಿಂದ ತನ್ನನ್ನು ತಾನೇ ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ. ಪಠಾಣ್ಗೂ ಮುನ್ನ, ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಕೂಡ ಅದೇ ಹಾದಿಯಲ್ಲಿ ಸಾಗಿತ್ತು. ಆದ್ದರಿಂದ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಯಾವುದೇ ಮಾಧ್ಯಮ ಸಂದರ್ಶನಗಳನ್ನು ನೀಡಿಲ್ಲʼʼ ಎನ್ನಲಾಗಿದೆ. “ಈ ಮೊದಲು ದೃಶ್ಯಂ 2. ಈಗ ಪಠಾಣ್. ಬಿಡುಗಡೆಯ ಪೂರ್ವ ಪ್ರಚಾರದ ಸಮಯದಲ್ಲಿ ಮಾಧ್ಯಮಗಳಿಗೆ ಯಾವುದೇ ಸಂದರ್ಶನಗಳಿಲ್ಲ. ಬುದ್ಧಿವಂತ ದಿಕ್ಕಿನಲ್ಲಿ ಒಂದು ಹೆಜ್ಜೆ ” ಎಂದು ತರಣ್ ಅವರು ತಮ್ಮ ಹಿಂದಿನ ಟ್ವೀಟ್ನ ಸ್ಕ್ರೀನ್ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ | Pathaan Movie | ʻಪಠಾಣ್ʼ ಅಡ್ವಾನ್ಸ್ ಬುಕ್ಕಿಂಗ್ ಓಪನ್: 1.17 ಲಕ್ಷ ಟಿಕೆಟ್ ಸೋಲ್ಡ್ ಔಟ್!
1.17 ಲಕ್ಷ ಟಿಕೆಟ್ಗಳು ಸೋಲ್ಡ್ ಔಟ್
ಈಗಾಗಲೇ ಪ್ರೀ ಬುಕ್ಕಿಂಗ್ ಶುರುವಾಗಿದೆ. ದೇಶಾದ್ಯಂತ ಈಗಾಗಲೇ ಮಲ್ಟಿಪ್ಲೆಕ್ಸ್ಗಳಲ್ಲಿ 1.17 ಲಕ್ಷ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ʻʻಚಿತ್ರವು ಈಗಾಗಲೇ INOXನಲ್ಲಿ 51,000 ಟಿಕೆಟ್ಗಳು, ಪಿವಿಆರ್ನಲ್ಲಿ 38,000 ಟಿಕೆಟ್ಗಳು ಮತ್ತು ಸಿನೆಪೊಲಿಸ್ನಲ್ಲಿ 27,000 ಕ್ಕೂ ಹೆಚ್ಚು ಟಿಕೆಟ್ಗಳನ್ನು ಮಾರಾಟ ಆಗಿವೆ. ಅದು ಕೂಡ ಎಲ್ಲವೂ ಗುರುವಾರ ರಾತ್ರಿ 11 ಗಂಟೆಯ ಮುಂಚೆʼʼಎಂದು ಹೇಳಿಕೊಂಡಿದ್ದಾರೆ. 2 ಗಂಟೆ 26 ನಿಮಿಷದ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. 13 ಕಡೆಗಳಲ್ಲಿ ಸೆನ್ಸಾರ್ ಮಂಡಳಿ ಬದಲಾವಣೆಗೆ ಸೂಚಿಸಿತ್ತು.
ಯಶ್ ರಾಜ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಪಠಾಣ್ ಸಿನಿಮಾವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | Pathaan Movie | ಬಾಹುಬಲಿ-2 ರೆಕಾರ್ಡ್ ಬ್ರೇಕ್ ಮಾಡಲಿದೆಯಾ ʻಪಠಾಣ್ʼ? ಸಿನಿಮಾ ವ್ಯಾಪಾರ ವಿಶ್ಲೇಷಕರು ಹೇಳೋದೇನು?