Site icon Vistara News

Pathaan Movie : ಪಠಾಣ್ ಸಿನಿಮಾಕ್ಕಾಗಿ 1700 ಪುಟಗಳ ಪುಸ್ತಕ ರಚಿಸಿದ ಶಾರುಖ್ ಖಾನ್!

Pathaan Movie Beats SS Rajamouli's Baahubali 2, KGF 2

ಮುಂಬೈ: ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾ (Pathaan Movie) ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ವಿಶ್ವಾದ್ಯಂದ 988 ಕೋಟಿ ರೂ. ದೋಚಿಕೊಂಡಿರುವ ಸಿನಿಮಾ ಈ ವಾರದಲ್ಲಿ 1000 ಕೋಟಿ ಗಳಿಕೆ ದಾಖಲೆ ಬರೆಯುವ ಸಾಧ್ಯತೆಯಿದೆ. ಹಾಗೆಯೇ ಹಿಂದಿ ಭಾಷೆಯೊಂದರಲ್ಲೇ 500 ಕೋಟಿ ರೂ. ಗಳಿಕೆಯ ದಾಖಲೆಯೂ ಆಗಲಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ನಾಯಕ ನಟರಾಗಿರುವ ಶಾರುಖ್ ಸಿನಿಮಾಕ್ಕೋಸ್ಕರ ಭಾರೀ ಅಧ್ಯಯನ ನಡೆಸಿದ್ದು, ಬರೋಬ್ಬರಿ 1700 ಪುಟಗಳ ದಾಖಲೆಗಳುಳ್ಳ ಪುಸ್ತಕವನ್ನೇ ರಚಿಸಿದ್ದಾರೆ.

ಇದನ್ನೂ ಓದಿ: Pathaan Movie: ಪಠಾಣ್‌ಗೆ ಕೊನೆಗೂ ಜಯ; ʻಬೇಷರಮ್‌ ರಂಗ್‌ʼ ಹಾಡಿನ ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ
ಹೌದು. ಶಾರುಖ್ ಪಠಾಣ್ ಸಿನಿಮಾಕ್ಕಾಗಿ ಮಾಡಿರುವ ಕೆಲಸದ ಬಗ್ಗೆ ಚಿತ್ರದ ಚಿತ್ರಕಥೆಗಾರರಾಗಿರುವ ಶ್ರೀಧರ ರಾಘವನ್ ತಿಳಿಸಿದ್ದಾರೆ. “ನಾವು ಶಾರುಖ್ ಸರ್ ಮನೆಗೆ ಹೋಗಿ ಸಿನಿಮಾ ಬಗ್ಗೆ ಚರ್ಚಿಸಲಾರಂಭಿಸಿದಾಗ ಅವರು ಬಹಳ ಆಸಕ್ತಿಯಿಂದ ನಮಗೆ ಸಲಹೆಗಳನ್ನು ನೀಡಲಾರಂಭಿಸಿದರು. ಶೇ.20 ಚಿತ್ರಕಥೆ ನಮ್ಮದಾದರೆ ಇನ್ನುಳಿದ ಶೇ.80 ಅವರೇ ಅಭಿವೃದ್ಧಿಪಡಿಸಿರುವುದು. ಅವರ ಪಾತ್ರದಲ್ಲಂತೂ ಸಾಕಷ್ಟು ಪರಿಣಾಮಕಾರಿ ಲಕ್ಷಣಗಳನ್ನು ಅವರು ಸೇರ್ಪಡೆ ಮಾಡಿಸಿದರು” ಎಂದು ಶ್ರೀಧರ್ ಹೇಳಿದ್ದಾರೆ.

“ಪಠಾಣ್ ಮಾತು, ಅವನ ಹಾಸ್ಯದ ಕಲ್ಪನೆ ಶಾರುಖ್ ಸರ್ ನೀಡಿರುವುದು. ಹಾಗೆಯೇ ಸಿನಿಮಾದಲ್ಲಿ ಪಠಾಣ್ ತನ್ನ ಮಿಷನ್ ವಿಫಲವಾದ ನಂತರ ಆಸ್ಪತ್ರೆಯಲ್ಲಿರುವ ದೃಶ್ಯಗಳು ಕೂಡ ಶಾರುಖ್ ಸರ್ ಅಭಿವೃದ್ಧಿಪಡಿಸಿರುವುದೇ” ಎಂದು ಶ್ರೀಧರ್ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Shah Rukh Khan : ಪಠಾಣ್ ಸಿನಿಮಾದಲ್ಲಿ ಮಗ ಅಬ್ರಾಮ್ ಮಾಡಿದ ಕೆಲಸವನ್ನು ಬಿಚ್ಚಿಟ್ಟ ಶಾರುಖ್
“ಸಾಮಾನ್ಯವಾಗಿ ನಾವೆಲ್ಲರೂ ಶಾರುಖ್ ಎಂದರೆ ಲವರ್ ಬಾಯ್ ಎಂದು ಪರಿಗಣಿಸಿಬಿಡುತ್ತೇವೆ. ಆದರೆ ಅವರು ಈ ಸಿನಿಮಾಕ್ಕಾಗಿ ಹಲವಾರು ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡಿದ್ದಾರೆ. ಆ್ಯಕ್ಷನ್ ಸಿನಿಮಾಗಳಿಗೆ ಸಂಬಂಧಿಸಿದ ವಿಶ್ಲೇಷಣೆಯನ್ನು ದಾಖಲೆ ರೂಪಕ್ಕೆ ತಂದಿದ್ದಾರೆ. 1700 ಪುಟಗಳ ದಾಖಲೆಗಳ ಪುಸ್ತಕವನ್ನೇ ನಿರ್ಮಿಸಿದ್ದಾರೆ. ಸೂಪರ್‌ಸ್ಟಾರ್ ಆಗಿರುವ ಅವರು 50-100 ಗಂಟೆಗಳ ಸಮಯವನ್ನು ಸ್ಕ್ರಿಪ್ಟ್ ಚರ್ಚಿಸುವುದಕ್ಕೇ ನೀಡಿದರು. ಅವರ ಕೆಲಸ ನಿಜಕ್ಕೂ ಅನೇಕರಿಗೆ ಸ್ಫೂರ್ತಿ” ಎಂದು ಅವರು ತಿಳಿಸಿದ್ದಾರೆ.

Exit mobile version