Site icon Vistara News

Pathaan Movie : ಪಠಾಣ್‌ ಸಿನಿಮಾ ನೋಡಿದ್ದಕ್ಕಾಗಿ 1 ಕೋಟಿ ರೂ. ಕೊಡಿ ಎಂದ ಅಭಿಮಾನಿ, ಶಾರುಖ್‌ ಉತ್ತರಿಸಿದ್ದು ಹೇಗೆ?

ಮುಂಬೈ: ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ (Pathaan Movie) ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ 700 ಕೋಟಿ ರೂ.ಗೂ ಅಧಿಕ ಸಂಪಾದನೆಯನ್ನು ಮಾಡಿಕೊಂಡು ದಾಖಲೆಗಳನ್ನೂ ಬರೆಯಲಾರಂಭಿಸಿದೆ. ಟ್ವಿಟರ್‌ನಲ್ಲಿ ಪಠಾಣ್‌ ಚರ್ಚೆಯೇ ನಡೆಯುತ್ತಿದೆ. ಹೀಗಿರುವಾಗ ಮಧ್ಯೆ ಬಂದಿರುವ ಶಾರುಖ್‌ ಹಲವು ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡಿ ಸಂತಸ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: Pathaan Movie: ʻಪಠಾಣ್‌ʼ ಸಕ್ಸೆಸ್‌ ಬೆನ್ನಲ್ಲೇ ಇಬ್ಬರು ಸೂಪರ್‌ ಸ್ಟಾರ್ಸ್‌ ಬಾಲ್ಯದ ಫೋಟೊ ವೈರಲ್‌!
ಅಭಿಮಾನಿಯೊಬ್ಬರು, “ಶಾರುಖ್‌ ಸರ್‌, ನಾನು ಪಠಾಣ್‌ ಸಿನಿಮಾವನ್ನು ಐದು ಬಾರಿ ನೋಡಿದ್ದೇನೆ. ಸಿನಿಮಾ 700 ಕೋಟಿ ಗಳಿಸಿರುವಾಗ ಅದರಲ್ಲಿ ಒಂದು ಕೋಟಿ ರೂ. ನನಗೆ ಕೊಡಿ” ಎಂದು ಕೇಳಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್‌, “ಶೇರು ಮಾರುಕಟ್ಟೆಯಲ್ಲಿ ಹಾಕಿದರೂ ಇಷ್ಟೊಂದು ಹಣ ವಾಪಸು ಸಿಗುವುದಿಲ್ಲ. ಇನ್ನೂ ಹೆಚ್ಚು ಬಾರಿ ಸಿನಿಮಾ ನೋಡಿ. ಆಮೇಲೆ ಯೋಚಿಸೋಣ” ಎಂದು ನಗೆಚಟಾಕಿ ಹಾರಿಸಿದ್ದಾರೆ.


ಹಾಗೆಯೇ ಇನ್ನೊಬ್ಬ ಅಭಿಮಾನಿ, “ಸಿನಿಮಾ ಸಕ್ಸಸ್‌ ಆಗಿರುವುದಕ್ಕೆ ನಿಮಗೆ ಹೇಗೆನಿಸುತ್ತಿದೆ?” ಎಂದು ಕೇಳಿದ್ದಾರೆ. ಅದಕ್ಕೆ ಶಾರುಖ್‌ ತಾವಿನ್ನೂ ಸಿನಿಮಾದ ಯಶಸ್ಸನ್ನು ಅನುಭವಿಸುತ್ತಿರುವುದಾಗಿ ಉತ್ತರಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, “700 ಕೋಟಿ ರೂ. ಎಂದರೆ ಬೂಬೆಲ್ಸ್‌ನಲ್ಲಿ ಎಷ್ಟಾಗುತ್ತದೆ?” ಎಂದು ಕೇಳಿದ್ದಾರೆ. ಅದಕ್ಕೆ ಶಾರುಖ್‌, “ಭಾಯ್‌, ಜೋಕ್‌ ಅನ್ನು ಆನಂದಿಸಿ, ಲೆಕ್ಕಾಚಾರ ಮಾಡುವುದು ಬೇಡ. ನನ್ನ ಕರೆನ್ಸಿ ಕನ್ವರ್ಟರ್‌ ಕೆಲಸವನ್ನೇ ಮಾಡುತ್ತಿಲ್ಲ” ಎಂದಿದ್ದಾರೆ. “ನಾನು ಸಿನಿಮಾವನ್ನು ತುಂಬಾನೇ ಇಷ್ಟಪಟ್ಟೆ. ಆದರೆ ನಮ್ಮ ಸಿನಿಮಾ ಇಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂದುಕೊಂಡಿರಲಿಲ್ಲ” ಎಂದು ಶಾರುಖ್‌ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವಾಗ ಹೇಳಿದ್ದಾರೆ.


ಇದೇ ವೇಳೆ ಶಾರುಖ್‌, ಪಠಾಣ್‌ ಸಿನಿಮಾ ಚಿತ್ರೀಕರಣ ಸಮಯದ ಕೆಲವು ಅನುಭವಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. “ದೀಪಿಕಾ ಮತ್ತು ನಾನು ಪ್ರೊಫೆಶನಲ್‌ ಆಗಿ ಲಾಕರ್‌ ಅನ್ನು ತೆಗೆಯಲು ಆರಂಭಿಸಿಬಿಟ್ಟೆವು. ಬೇರೆಲ್ಲ ಕೆಲಸ ಕೈಬಿಟ್ಟು ಅವಿವೇಕಿಗಳ ರೀತಿಯಲ್ಲಿ ಅದನ್ನೇ ಮಾಡುತ್ತಿದ್ದೆವು. ಜಿಗಿಯುವಾಗ ಲಾಕ್‌ ಮತ್ತು ಕೀ ಅನ್ನೂ ಕಳೆದುಕೊಂಡಿದ್ದೆವು” ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

Exit mobile version