Site icon Vistara News

Pathaan Film | ವಿವಾದಿತ ಪಠಾಣ್​ ಸಿನಿಮಾ ಟ್ರೇಲರ್​ ಬಿಡುಗಡೆ ದಿನಾಂಕ ಪ್ರಕಟ; ಚಿತ್ರ ರಿಲೀಸ್ ಯಾವಾಗ?

Pathaan trailer to be out Next Week

ಮುಂಬಯಿ: ವಿವಾದದ ಬಿರುಗಾಳಿಯನ್ನೇ ಎಬ್ಬಿಸಿ, ಹಿಂದುಗಳಲ್ಲಿ ಆಕ್ರೋಶ ಹುಟ್ಟುಹಾಕಿರುವ ‘ಶಾರುಖ್​ಖಾನ್​ ಮತ್ತು ದೀಪಿಕಾ ಪಡುಕೋಣೆ’ ಅಭಿನಯದ ಬಾಲಿವುಡ್​ ಚಿತ್ರ ಪಠಾಣ್​ ಟ್ರೇಲರ್​ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜನವರಿ 25, ಗಣರಾಜ್ಯೋತ್ಸವದ ದಿನದ ಮುನ್ನಾದಿನವೇ ಪಠಾಣ್ ಸಿನಿಮಾ ರಾಷ್ಟ್ರಾದ್ಯಂತ ಥಿಯೇಟರ್​ಗಳಲ್ಲಿ ಬಿಡುಗಡೆಯಾಗಲಿದ್ದು, ಇದರ ಟ್ರೇಲರ್​ ಜನವರಿ 10ಕ್ಕೆ ರಿಲೀಸ್ ಆಗಲಿದೆ ಎಂದು ವರದಿಯಾಗಿದೆ.

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ‘ಬೇಷರಮ್​ ರಂಗ್​ (ನಾಚಿಕೆ ಇಲ್ಲದ ಬಣ್ಣ)’ ಎಂಬ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿ, ಮಾದಕವಾಗಿ ನೃತ್ಯ ಮಾಡಿದ್ದೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಶಾರುಖ್​-ದೀಪಿಕಾ ಅಭಿಮಾನಿಗಳು ಪಠಾಣ್​ ಸಿನಿಮಾಕ್ಕಾಗಿ ಕಾಯುತ್ತಿದ್ದರೆ, ಇನ್ನೊಂದು ವರ್ಗದ ಜನರು ಪಠಾಣ್​ ಬಹಿಷ್ಕರಿಸಬೇಕು. ಈ ಚಿತ್ರ ಬಿಡುಗಡೆ ಮಾಡಬಾರದು ಎಂದೂ ಆಗ್ರಹಿಸುತ್ತಿದ್ದಾರೆ. ವಿವಾದ ಮಿತಿಮೀರಿದ ಬೆನ್ನಲ್ಲೇ ಪಠಾಣ್​ ಚಿತ್ರದಲ್ಲಿರುವ ವಿವಾದಿತ ದೃಶ್ಯಗಳು, ಹಾಡಿನಲ್ಲಿ ಬದಲಾವಣೆ ಮಾಡಬೇಕು ಎಂದು ಕೇಂದ್ರ ಚಲನಚಿತ್ರ ಸೆನ್ಸಾರ್ ಬೋರ್ಡ್​ (CBFC) ಸೂಚನೆಯನ್ನೂ ನೀಡಿದೆ. ಚಲನಚಿತ್ರ ತಂಡದವರು ಪಠಾಣ್​​ ಸಿನಿಮಾವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಯಶ್​ ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​-ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಒಟ್ಟಾಗಿ ನಟಿಸುತ್ತಿರುವ ಸಿನಿಮಾವೂ ಹೌದು. ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ. ಹಾಗೇ, ಡಿಸೆಂಬರ್​ 12ರಂದು ‘ಬೇಷರಮ್​ ರಂಗ್​’ ಹಾಡು ಬಿಡುಗಡೆಯಾದ ಬೆನ್ನಲ್ಲೇ ವಿವಾದವೂ ಭುಗಿಲೆದ್ದಿತ್ತು. ಅದರಲ್ಲಿ ಕೇಸರಿ ಬಣ್ಣದ ತುಂಡುಡುಗೆ ಧರಿಸಿ ದೀಪಿಕಾ ಪಡುಕೋಣೆ ಕುಣಿದಿದ್ದು ಮತ್ತು ಹಾಡಿನ ಸಾಹಿತ್ಯ ಕ್ರೋಧಕ್ಕೆ ಕಾರಣವಾಗಿತ್ತು. ಕೇಸರಿ ಬಣ್ಣ ಹಿಂದುಗಳೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುವ ಬಣ್ಣ. ಆ ಬಣ್ಣಕ್ಕೆ ಬೇಕೆಂದೇ ಅಪಮಾನ ಮಾಡಲಾಗುತ್ತಿದೆ ಎಂಬುದೇ ಅನೇಕಾನೇಕರ ಆರೋಪ. ಈ ಮಧ್ಯೆ ಮತ್ತೆ ಟೀಸರ್​ ಬಿಡುಗಡೆಯಾಗುತ್ತಿರುವುದು ಕುತೂಹಲ ಮೂಡಿಸುತ್ತಿದೆ.

ಇದನ್ನೂ ಓದಿ: Pathaan Film | ಉತ್ತರ ಪ್ರದೇಶದ ಮಕ್ಕಳ ಕಲ್ಯಾಣ ಸಮಿತಿ ʻಪಠಾಣ್‌ʼ ಕುರಿತು ಡಿಜಿಪಿಗೆ ಪತ್ರ ಬರೆದಿದ್ದೇನು?

Exit mobile version