Site icon Vistara News

Pathaan Movie: ವಿಶ್ವಾದ್ಯಂತ 400 ಕೋಟಿ ರೂ. ಕ್ಲಬ್‌ ಸೇರಿದ ʻಪಠಾಣ್‌ʼ

Pathaan Movie enter Rs 400-crore club worldwide

ಬೆಂಗಳೂರು : ನಾಲ್ಕು ವರ್ಷಗಳ ಬ್ರೇಕ್‌ ಪಡೆದ ನಂತರ ʻಪಠಾಣ್‌ʼ (Pathaan Movie) ಮೂಲಕ ಶಾರುಖ್‌ ಖಾನ್‌ ತೆರೆಯಲ್ಲಿ ಮಿಂಚಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಸಿನಿಮಾ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಇದೀಗ ಪಠಾಣ್‌ ವಿಶ್ವಾದ್ಯಂತ 400 ಕೋಟಿ ರೂ.ಗಳ ಗಡಿ ದಾಟಿದೆ. ಭಾರತದಲ್ಲಿ 200 ಕೋಟಿ ರೂ. ಕಲೆಕ್ಷನ್‌ ಮಾಡುವುದರ ಮೂಲಕ ದಾಖಲೆ ಕಂಡಿದೆ.

ಪಠಾಣ್‌ ವಿಶ್ವಾದ್ಯಂತ ಜನವರಿ 25ರಂದು ಬಿಡುಗಡೆಯಾಗಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಜನವರಿ 28 ರಂದು, ಪಠಾಣ್ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿ ʻʻಪಠಾಣ್‌ 4 ದಿನಗಳಲ್ಲಿ 400 ಕೋಟಿ ರೂ. ಗಳನ್ನು ದಾಟಿದೆ ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pathaan Movie: ಮೂರು ದಿನಗಳಲ್ಲಿ ಬಾಹುಬಲಿ-2, ಕೆಜಿಎಫ್‌-2 ದಾಖಲೆ ಮುರಿದ ಪಠಾಣ್‌!

ಜನವರಿ 27ರ ಶುಕ್ರವಾರದವರೆಗೆ, ಪಠಾಣ್ ಭಾರತದಲ್ಲಿ 166 ಕೋಟಿ ರೂ. ಗಳಿಸಿದೆ ಮತ್ತು ವಿಶ್ವಾದ್ಯಂತ 316 ಕೋಟಿ ರೂ. ಗಳಿಸಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ವಿದೇಶದಲ್ಲಿ 49 ಕೋಟಿ ರೂ. ಗಿಂತ ಹೆಚ್ಚು ಹಣವನ್ನು ಗಳಿಸುವ ನಿರೀಕ್ಷೆಯಿದೆ. ಪಠಾಣ್ ಭಾರತದಲ್ಲಿ ಅಪೇಕ್ಷಿತ 200-ಕೋಟಿ ರೂ. ಗಡಿ ದಾಟವುದರಲ್ಲಿ ಯಶಸ್ವಿಯಾಗಿದೆ. ಜನವರಿ 29, ಭಾನುವಾರದಂದು ಮತ್ತಷ್ಟು ಗಳಿಕೆ ಕಾಣುವ ನಿರೀಕ್ಷೆಯಿದೆ. ಪಠಾಣ್ ಬಿಡುಗಡೆಯಾದ ನಂತರ ಇದು ಮೂರನೇ ಬಾರಿಗೆ ಒಂದೇ ದಿನದಲ್ಲಿ ಚಿತ್ರವು 50 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ಇದನ್ನೂ ಓದಿ: Pathaan Movie: ಮೂರು ದಿನಗಳಲ್ಲಿ ಭಾರತದಲ್ಲಿ 150 ಕೋಟಿ ರೂ. ಕ್ಲಬ್‌ ಸೇರಿದ ʻಪಠಾಣ್‌ʼ

ಬಾಹುಬಲಿ-2, ಕೆಜಿಎಫ್‌-2 ದಾಖಲೆ ಮುರಿದ ಪಠಾಣ್‌!

ಪಿಂಕ್‌ವಿಲ್ಲಾ ವರದಿ ಪ್ರಕಾರ, ಚಿತ್ರ ಜನವರಿ 27 ಶುಕ್ರವಾರದಂದು 35 ಕೋಟಿ ರೂ. ಗೂ ಅಧಿಕ ಗಳಿಕೆ ಕಂಡಿದೆ ಎಂದು ಹೇಳಿದೆ. ಈ ಹಿಂದೆ ಬಾಹುಬಲಿ- 2, 127 ಕೋಟಿ ರೂ. ಗಳಿಕೆ ಕಂಡರೆ, ಕನ್ನಡದ ಕೆಜಿಎಫ್- 2, 140 ಕೋಟಿ ಗಳಿಸಿತ್ತು. ವಾರಾಂತ್ಯದ ದಾಖಲೆಗಳನ್ನು ಇದೀಗ ಪಠಾಣ್‌ ಮೀರಿಸಿದೆ ಎಂದು ವರದಿಯಾಗಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಅಭಿನಯದ ಈ ಚಿತ್ರವು ಮೊದಲ ದಿನವೇ 55 ಕೋಟಿ ರೂ. ಕಲೆಕ್ಷನ್‌ ಮಾಡಿ ಕೆಜಿಎಫ್‌-2 ದಾಖಲೆಯನ್ನು ಮುರಿದಿತ್ತು.

Exit mobile version