Site icon Vistara News

Pathan Movie : ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆಯ ಗಡಿ ದಾಟಿ ದಾಖಲೆ ಬರೆದ ಪಠಾಣ್​

Pathan

ಮುಂಬಯಿ: ಶಾರುಖ್​ ಖಾನ್ (Sharukh Khan)​ ನಟನೆಯ ಬಾಲಿವುಡ್​ ಸಿನಿಮಾ ಪಠಾಣ್​ (Pathan Movie) ಚಲನಚಿತ್ರ ಬಿಡುಗಡೆಯಾದ ದಿನವೇ ಜಾಗತಿಕ ಬಾಕ್ಸ್​ಆಫೀಸ್​ನಲ್ಲಿ (Box Office) 100 ಕೋಟಿ ರೂಪಾಯಿಗೂ ಅಧಿಕ ಗಳಿಸುವ ಮೂಲಕ ಭಾರತೀಯ ಸಿನಿಮಾ (Indian Cinema) ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಮೂಲಗಳ ಪ್ರಕಾರ ಭಾರತದಲ್ಲಿ ಒಟ್ಟಾರೆ 54 ಕೋಟಿ ರೂಪಾಯಿ ಗಳಿಕೆ ಕಂಡಿದ್ದರೆ, ವಿದೇಶಗಳಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಿದೆ ಎನ್ನಲಾಗಿದೆ. ಒಟ್ಟಾರೆಯಾಗಿ 100ರಿಂದ 110 ಕೋಟಿ ರೂಪಾಯಿ ತನಕ ಪಡೆದಿರಬಹುದು ಎಂದು ಹೇಳಲಾಗಿದೆ.

ಕೆಜಿಎಫ್​ ಚಾಪ್ಟರ್​-2 ಸಿನಿಮಾದ ಹಿಂದಿ ಅವತರಣಿಕೆ ಮೊದಲ ದಿನ 52 ಕೋಟಿ ರೂಪಾಯಿ ಬಾಚಿತ್ತು. ಹೃತಿಕ್ ರೋಷನ್​ (hritik Roshan)​ ಅಭಿನಯದ ವಾರ್​ 50 ಕೋಟಿ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿತ್ತು. ಇದೀಗ ಶಾರುಖ್​ ಹಾಗೂ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿರುವ ಪಠಾಣ್​ ಆ ಎಲ್ಲ ದಾಖಲೆಗಳನ್ನೂ ಚಿಂದಿ ಮಾಡಿದೆ. ಅಲ್ಲದೆ, ವಾರಂತ್ಯಕ್ಕೆ ಗಳಿಕೆ ವಿಚಾರದಲ್ಲಿ ಇನ್ನೂ ಹಲವಾರು ದಾಖಲೆಗಳನ್ನು ಮುರಿಯಬಹುದು ಎನ್ನಲಾಗಿದೆ.

ಸಿದ್ಧಾರ್ಥ್​ ಆನಂದ್​ ನಿರ್ದೇಶನದ ಈ ಸಿನಿಮಾದಲ್ಲಿ ದೀಪಿಕಾ ಮತ್ತು ಶಾರುಖ್​ ಜತೆ ಜಾನ್​ ಅಬ್ರಾಹಮ್ ಕೂಡ ಇದ್ದಾರೆ. ಗಣರಾಜ್ಯೋತ್ಸವದ ಹಿನ್ನೆಲೆ ಬುಧವಾರ (ಜನವರಿ 25ರಂದು) ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ : Pathaan Movie: ʻಪಠಾಣ್‌ʼ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಎಷ್ಟು?

ಪಠಾಣ್​ ಸಿನಿಮಾ ಬಿಡುಗಡೆ ಮೊದಲು ವಿವಾದಕ್ಕೆ ಕಾರಣವಾಗಿತ್ತು. ಚಿತ್ರದ ಬೇಷರಮ್​ ರಂಗ್​ ಹಾಡಿನಲ್ಲಿ ಹಿಂದುಗಳಿಗೆ ಅವಮಾನ ಮಾಡಲಾಗಿದ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಹೀಗಾಗಿ ಸಿನಿಮಾ ಬಿಡುಗಡೆಯಾದ ದಿನದಿಂದ ಬಾಕ್ಸ್​ಆಫೀಸ್​ ಕಲೆಕ್ಷನ್​ ಬಗ್ಗೆ ಕೌತುಕ ಸೃಷ್ಟಿಯಾಗಿತ್ತು

Exit mobile version