ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಹಾಗೂ ಪುತ್ರ ವಿನೀಶ್ ಜತೆಗಿನ ಫೋಟೊವನ್ನು ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದರ್ಶನ್ ಜತೆ ಇರುವ ಪೋಟೊಗಳನ್ನ ಫ್ಯಾಷನ್ ಡಿಸೈನರ್ ಎಂದೆನಿಸಿಕೊಂಡಿರುವ ಪವಿತ್ರಗೌಡ ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲ ದರ್ಶನ್ ಜತೆ ಇರುವ ಹಲವು ಫೋಟೊಗಳ ರೀಲ್ಸ್ ಹಂಚಿಕೊಂಡು ʻನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆʼಎಂದು ಪವಿತ್ರಾ ಗೌಡ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ತಮ್ಮ 10 ವರ್ಷಗಳ ರಿಲೇಶನ್‌ಶಿಪ್ ಸಂಭ್ರಮದ ಪೋಸ್ಟ್ ಮಾಡಿದ್ದ ಪವಿತ್ರಾ ವಿರುದ್ಧ ವಿಜಯಲಕ್ಷ್ಮಿ ಆಕ್ರೋಶ ಹೊರಹಾಕಿದ್ದಾರೆ. ಕಾನೂನು ಹೋರಾಟಕ್ಕಿಳಿಯುತ್ತೇನೆ ಎಂದು ಇದೀಗ ಸೋಷಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ.
ವಿಜಯಲಕ್ಷ್ಮಿ ಈ ಬಗ್ಗೆ ಪೋಸ್ಟ್ ಮಾಡಿ ʻʻಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆಗೆ ಸೆನ್ಸ್ ಮೊದಲು ಇರಬೇಕು. ಇದೀಗ ಆಕೆಯ ಕ್ಯಾರೆಕ್ಟರ್ ಹಾಗೂ ನೈತಿಕ ನಿಲುವಿನ ಬಗ್ಗೆ ತೋರಿಸುತ್ತಿದೆ. ವಿವಾಹಿತನೆಂದು ತಿಳಿದರೂ ಕೂಡ ತಮ್ಮ ವೈಯಕ್ತಿಕ ಅಗತ್ಯತೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ಎಲ್ಲ ಫೋಟಗಳು ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಅವರದ್ದು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸೋಷಿಯಲ್ ಮೀಡಿಯಾವನ್ನು ಬಖಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಅಂದರೆ ಸಂಜಯಸಿಂಗ್ , ಖುಷಿಗೌಡ, ಪವಿತ್ರ ಗೌಡ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Darshan Thoogudeepa: ಭಾರಿ ಮೊತ್ತಕ್ಕೆ ಕಾಟೇರ ಡಿಜಿಟಲ್, ಸ್ಯಾಟಲೈಟ್ ಮಾರಾಟ!
ಪವಿತ್ರಾ ಗೌಡ ಪೋಸ್ಟ್
ಕಾನೂನು ಹೋರಾಟಕ್ಕಿಳಿಯುತ್ತೇನೆ
ಇದೀಗ ವಿಜಯ ಲಕ್ಷ್ಮಿ ಅವರ ಆಕ್ರೋಶಕ್ಕೆ ಪವಿತ್ರ ಗೌಡ ಕಾರಣವಾಗಿದ್ದಾರೆ. ಒಬ್ಬರ ಗಂಡನ ಜತೆಗಿನ ಪೋಟೊ ಶೇರ್ ಮಾಡುವುದಕ್ಕೂ ಮುಂಚೆ ಯೋಚಿಸಿ ಎಂದು ವಿಜಯ ಲಕ್ಷ್ಮಿ ವಾರ್ನ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ಮದುವೆಯಾಗಿದ್ದಾರೆ ಎಂದು ಗೊತ್ತಿದ್ದರೂ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ?ಎಂದು ಪ್ರಶ್ನೆ ಇಟ್ಟಿದ್ದಾರೆ. ಇದೀಗ ವಿಜಯಲಕ್ಷ್ಮೀ ಹಾಗೂ ದರ್ಶನ್ ಅವರ ವೈಯಕ್ತಿಕ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಗುತ್ತಿದೆ.