Site icon Vistara News

Pavitra Lokesh: ರಮ್ಯಾ ರಘುಪತಿಯಿಂದ ಬಿಡುಗಡೆ ಕೊಡಿ ಎಂದು ಕೋರ್ಟ್‌ ಮೆಟ್ಟಿಲೇರಿದ ನರೇಶ್‌

Pavitra Lokesh Naresh Issue

ಬೆಂಗಳೂರು: ಟಾಲಿವುಡ್ ನಟ ವಿಕೆ ನರೇಶ್ ಅವರು ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ತಮ್ಮಿಂದ 10 ಕೋಟಿ ರೂ. ಪಡೆಯಲು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮಿಂದ ವಿಚ್ಛೇದನವನ್ನು ಪಡೆಯಲು ರಮ್ಯಾ ಅವರು 10 ಕೋಟಿ ರೂ. ಬೇಡಿಕೆ ಇಡುತ್ತಿದ್ದಾರೆ. ಅವರಿಂದ ಬಿಡುಗಡೆ ಕೊಡಿ ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇದೀಗ ನರೇಶ್‌ ಪವಿತ್ರಾ ಲೋಕೇಶ್‌ (Pavitra Lokesh) ಜತೆ ನಾಲ್ಕನೇ ಮದುವೆಯಾಗುತ್ತಿದ್ದಾರೆ.

ರಮ್ಯಾ ರಘಪತಿ ಅವರು ವಿವಿಧ ಮಾಧ್ಯಮಗಳಲ್ಲಿ ನರೇಶ್ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ. ʻʻನರೇಶ್‌ ಅವರಿಗೆ ಹಲವು ಮಹಿಳೆಯರೊಂದಿಗೆ ಅಫೇರ್‌ ಇದೆ. ಈ ವಿಚಾರ ನನಗೆ ತಿಳಿಯುತ್ತಿದ್ದಂತೆ ನನ್ನ ಪಾದಗಳನ್ನು ಮುಟ್ಟಿ ಕ್ಷಮೆ ಕೇಳುತ್ತಿದ್ದರು. ನನ್ನ ಅತ್ತೆ, ದಿವಂಗತ ವಿಜಯ ನಿರ್ಮಲಾ ಅವರಿಗೂ ಈ ವಿಚಾರ ಗೊತ್ತಿತ್ತು. ತಮ್ಮ ರಾಜಕೀಯ ಆಕಾಂಕ್ಷೆ ಪೂರೈಸಿಕೊಳ್ಳಲು ನರೇಶ್ ನನ್ನನ್ನು ಮದುವೆಯಾಗಿದ್ದಾನೆʼʼ ಎಂದಿದ್ದಾರೆ. ಹಾಗೂ ʻʻನಾನು ಅವರಿಗೆ ವಿಚ್ಛೇದನ ನೀಡುವುದಿಲ್ಲ. ನನ್ನ ಮಗುವಿಗೆ ಉತ್ತಮ ಭವಿಷ್ಯ ಬೇಕು ಮತ್ತು ವಿಚ್ಛೇದನವು ನೀಡುವುದು ನನಗೆ ಇಷ್ಟವಿಲ್ಲʼʼಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ:Pavitra Lokesh | ನರೇಶ್‌-ಪವಿತ್ರಾ ಮದುವೆ ನಡೆಯಲು ಬಿಡುವುದಿಲ್ಲ: ರಮ್ಯಾ ರಘುಪತಿ

ಇದರ ಬೆನ್ನಲ್ಲೇ ನರೇಶ್‌ ಏಕಾಏಕಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ʻʻತಮ್ಮ ಹೆಂಡತಿ ವಿಪರೀತ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಕೊಲ್ಲಲು ಹಲವರು ನನ್ನ ಮನೆ ಸುತ್ತ ತಿರುಗುತ್ತಾರೆ. ರಮ್ಯಾರಿಂದಾಗಿ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ. ಕೂಡಲೇ ನನಗೆ ಬಿಡುಗಡೆ ಕೊಡಿʼʼ ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ರಮ್ಯಾ ಮತ್ತು ನರೇಶ್ ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ನರೇಶ್ ವಿಚ್ಛೇದನ ಕೊಡಲು ಒಪ್ಪಿದರೂ, ರಮ್ಯಾ ನಿರಾಕರಿಸುತ್ತಿ‍ದ್ದಾರೆ. ನರೇಶ್‌ ಈಗಾಗಲೇ ಮೂರು ಮದುವೆಯಾಗಿದ್ದು, ಪವಿತ್ರಾ ಲೋಕೇಶ್‌ ಜತೆ ನಾಲ್ಕನೇ ಮದುವೆಯಾಗುತ್ತಿದ್ದಾರೆ. ನಟಿ ಪವಿತ್ರಾ ಲೋಕೇಶ್‌ ಕೂಡ ಎರಡು ಮದುವೆಯಾಗಿದ್ದು, ಇದು ಮೂರನೇ ವಿವಾಹ ಎನ್ನಲಾಗುತ್ತಿದೆ.

ಇದನ್ನೂ ಓದಿ: Pavitra Lokesh | ಪೊಲೀಸ್ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್‌: ದೂರಿನಲ್ಲೇನಿದೆ?

Exit mobile version