Site icon Vistara News

Pavitra Lokesh | ನರೇಶ್‌-ಪವಿತ್ರಾ ಮದುವೆ ನಡೆಯಲು ಬಿಡುವುದಿಲ್ಲ: ರಮ್ಯಾ ರಘುಪತಿ

Pavitra Lokesh

ಬೆಂಗಳೂರು : ತೆಲುಗು ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ (Pavitra Lokesh ) ಹೊಸ ವರ್ಷಕ್ಕೆ ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ನರೇಶ್‌ ಮೂರನೇ ಪತ್ನಿ ರಮ್ಯಾ ಅವರು ನರೇಶ್ ಅವರನ್ನು ಪವಿತ್ರಾ ಲೋಕೇಶ್ ಮದುವೆಯಾಗಲು ಬಿಡುವುದಿಲ್ಲ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ ʻʻನನಗೆ ನರೇಶ್‌ ವಿಚ್ಛೇದನ ನೀಡಿಲ್ಲ. ತಮ್ಮ ರಾಜಕೀಯ ಆಕಾಂಕ್ಷೆ ಪೂರೈಸಿಕೊಳ್ಳಲು ನರೇಶ್ ನನ್ನನ್ನು ಮದುವೆಯಾಗಿದ್ದಾನೆ. ಆಗಲೇ ನರೇಶ್‌ರ ತಾಯಿ ವಿಜಯ ನಿರ್ಮಲಾ ನರೇಶ್‌ಗೆ ಎಚ್ಚರಿಕೆ ಕೊಟ್ಟಿದ್ದರು. ರಮ್ಯಾ ರಘುಪತಿಗೆ ಹಿಂಸೆ ಕೊಡುವುದು ಮಾಡಿದರೆ ಆಸ್ತಿಯಲ್ಲಿ ಒಂದು ಪೈಸೆಯೂ ಕೊಡುವುದಿಲ್ಲವೆಂದು. ಅದೇ ಕಾರಣಕ್ಕೆ ತಾಯಿ ತೀರಿ ಹೋಗುವವರೆಗೆ ಸುಮ್ಮನಿದ್ದು, ಬಳಿಕ ಪವಿತ್ರಾ ಜತೆ ಸಂಬಂಧ ಬೆಳೆಸಿದ್ದಾನೆʼʼ ಎಂದಿದ್ದಾರೆ.

ಇದನ್ನೂ ಓದಿ | Pavitra Lokesh | ಪೊಲೀಸ್ ಠಾಣೆ ಮೆಟ್ಟಿಲೇರಿದ ಪವಿತ್ರಾ ಲೋಕೇಶ್‌: ದೂರಿನಲ್ಲೇನಿದೆ?

ʻʻಲಿಪ್‌ ಲಾಕ್‌ ವಿಡಿಯೊ ನೋಡಿ ನನಗೇನೂ ಆಶ್ಚರ್ಯ ಎಂದೆನಿಲ್ಲ. ನಮ್ಮ ಮನೆಯ ಮುಸುರೆ ತೊಳೆಯವಳ ಜತೆ ನಡೆದೆಕೊಂಡ ರೀತಿ ನರೇಶ್‌ ಅವರದ್ದು ಸರಿಯಿರಲಿಲ್ಲ. ಆಗ ಫೋನ್‌ ಕಾಲ್‌ ರೆಕಾರ್ಡಿಂಗ್‌ ಕೇಳಿ ಆಶ್ಚರ್ಯ ಆಗಿತ್ತು. ಈಗ ಈ ವಿಡಿಯೊ ಹೊರಬಿದ್ದಿದೆ. ನರೇಶ್‌, ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಾನು ಅದನ್ನು ಪ್ರಶ್ನಿಸಿ ಪ್ರತಿದೂರು ದಾಖಲಿಸಿದ್ದೇನೆ. ಡಿವೋರ್ಸ್ ವಿಚಾರ ಇನ್ನು ದೂರದ ಮಾತು” ಎಂದು ರಮ್ಯಾ ರಘುಪತಿ ಹೇಳಿದ್ದಾರೆ.

ನರೇಶ್‌ ಈಗಾಗಲೇ ಮೂರು ಮದುವೆಯಾಗಿದ್ದು, ಪವಿತ್ರಾ ಲೋಕೇಶ್‌ ಜತೆ ನಾಲ್ಕನೇ ಮದುವೆಯಾಗುತ್ತಿದ್ದಾರೆ. ನಟಿ ಪವಿತ್ರಾ ಲೋಕೇಶ್‌ ಕೂಡ ಎರಡು ಮದುವೆಯಾಗಿದ್ದು, ಇದು ಮೂರನೇ ವಿವಾಹ ಎನ್ನಲಾಗುತ್ತಿದೆ.

ಲಿಪ್‌ ಕಿಸ್‌ ವಿಡಿಯೊ ಹಂಚಿಕೊಂಡ ನರೇಶ್‌-ಪವಿತ್ರಾ ಲೋಕೇಶ್‌
ಟ್ವೀಟ್‌ ಮೂಲಕ ನರೇಶ್‌ ಅವರು ʻʻಶೀಘ್ರದಲ್ಲೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಪವಿತ್ರಾ ಲೋಕೇಶ್‌ ಅವರಿಗೆ ಲಿಪ್‌ ಕಿಸ್‌ ಕೊಟ್ಟಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಈ ಹಿಂದೆ ಆರೋಪಿಸಿದ್ದರು. ಇಬ್ಬರೂ ಮೈಸೂರಿನ ಹೋಟೆಲ್‌ವೊಂದರಲ್ಲಿ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ | Pavitra Lokesh | ಶೀಘ್ರವೇ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್‌ಗೆ ಲಿಪ್‌ಕಿಸ್‌ ಕೊಟ್ಟ ನರೇಶ್‌: ವಿಡಿಯೊ ಇಲ್ಲಿದೆ!

Exit mobile version