Site icon Vistara News

Pavitra Naresh: ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಕಹಾನಿ ಶುರುವಾಗಿದ್ದು ಹೇಗೆ? ’ಮತ್ತೆ ಮದುವೆ’ ಟ್ರೈಲರ್‌ ಔಟ್‌!

Pavitra Naresh Matthe Maduve Trailer Out

ಬೆಂಗಳೂರು: ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ (Pavitra Naresh) ನಟಿಸಿರುವ ʻಮತ್ತೆ ಮದುವೆʼ ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದೆ. ತಮ್ಮ ನಿಜ ಜೀವನದ ಘಟನೆಯನ್ನು ಈ ಜೋಡಿ ಸಿನಿಮಾ ಮಾಡಿರುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ʻಮತ್ತೆ ಮದುವೆʼ ಮೊದಲ ನೋಟ ಸಂಚಲನ ಸೃಷ್ಟಿಸಿದೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ಆ ಪ್ರೀತಿಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯೇ ವಿಲನ್ ಆಗಿ ನಿಂತಿರುವುದು. ಈ ಮೂವರ ಜಗಳ ಹಾದಿ ಬೀದಿ ರಂಪವಾಗಿದ್ದು. ಮೈಸೂರು ಹೋಟೆಲ್ ನಲ್ಲಿ ನಡೆದ ಹೈಡ್ರಾಮಾ ಕಹಾನಿ. ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬೀಳುವುದು. ಜನ ಹೀಯಾಳಿಸುವುದು. ಹೀಗೆ ನಾನಾ ವಿಷಯಗಳನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್‌ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತಾ ವಿಜಯಕುಮಾರ್, ಅನನ್ಯಾ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಇದನ್ನೂ ಓದಿ: Naresh Pavitra: ನರೇಶ್-ಪವಿತ್ರಾ ಲೋಕೇಶ್ ʻಮತ್ತೆ ಮದುವೆʼ ರಿಲೀಸ್‌ ಡೇಟ್‌ ಫಿಕ್ಸ್‌!

ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರುತ್ತಿದೆ. ಮೇ 26ಕ್ಕೆ ಬೆಳ್ಳಿಪರದೆಗೆ ಎಂಟ್ರಿ ಕೊಡಲಿದೆ.

Exit mobile version