ಬೆಂಗಳೂರು: ಟಾಲಿವುಡ್ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ (Pavitra Naresh) ಅಭಿನಯದ ʻಮತ್ತೆ ಮದುವೆʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 26ಕ್ಕೆ ʻಮಳ್ಳಿ ಪೆಳ್ಳಿʼ ಎಂಬ ಟೈಟಲ್‌ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಾಣುತ್ತಿದೆ . ಕನ್ನಡದಲ್ಲಿ ‘ಮತ್ತೆ ಮದುವೆ’ ಟೈಟಲ್ ಇಟ್ಟು ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಇದೀಗ ಸಿನಿಮಾದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಹೈದರಾಬಾದ್‌ನಲ್ಲಿ ‘ಮಳ್ಳಿ ಪೆಳ್ಳಿ’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಈ ವೇಳೆ ಮತ್ತೆ ಪವಿತ್ರಾ ಲೋಕೇಶ್ ಬಗ್ಗೆ ಮುಕ್ತವಾಗಿ ನರೇಶ್ ಮಾತನಾಡಿ ಭಾವುಕರಾಗಿದ್ದರು.
ಮಳ್ಳಿ ಪೆಳ್ಳಿ ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಇದೀಗ ಆ ಬ್ಯಾನರ್‌ಗೆ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮಳ್ಳಿ ಪೆಳ್ಳಿ’ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡುತ್ತಿದ್ದಾರೆ.
ನರೇಶ್ ತಮ್ಮ ಜೀವನವನ್ನು ಮೆಲುಕು ಹಾಕಿ ತಾಯಿ, ಸಹೋದರಿ, ಮೇಕಪ್‌ಮ್ಯಾನ್ ಎಲ್ಲರನ್ನೂ ನೆನೆದು ಭಾವುಕರಾಗಿದ್ದರು. ನರೇಶ್ ಮಾತನಾಡಿ ʻʻ ನನಗೆ ಒಂಬತ್ತು ವರ್ಷವಿದ್ದಾಗ ‘ಪಂಡಂತಿ ಕಪುರಂ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದೇ ಸಮಯದಲ್ಲಿ ನನ್ನ ಸಹೋದರಿ ಜಯಸುಧಾ ಕೂಡ ಆ ಸಿನಿಮಾದಲ್ಲಿ ನಟಿಸಿದ್ದರು. ಹೀಗಾಗಿ ಸಿನಿಮಾದಲ್ಲಿ ನಮ್ಮಿಬ್ಬರದ್ದು 50 ವರ್ಷಗಳ ಜರ್ನಿ. ನನ್ನ ಅಮ್ಮ ನನಗೆ ಆಗಾಗ ಹೇಳುತ್ತಿದ್ದರು. ನಿನಗೆ ಎಲ್ಲಾ ಕೊಟ್ಟೆ, ನಿನ್ನನ್ನು ರಾಜನನ್ನಾಗಿ ಮಾಡಿದೆ. ಆದರೆ, ಒಳ್ಳೆ ಜೀವನ ಕೊಡುವುದಕ್ಕೆ ಆಗಲಿಲ್ಲ ಎಂದು ಬೇಸರಿಸಿಕೊಂಡಿದ್ದರು. ಆದರೆ, ಪವಿತ್ರಾರಂತಹ ಇನ್ನೊಬ್ಬ ತಾಯಿಯನ್ನು ಭೇಟಿಯಾದೆ” ಎಂದು ನರೇಶ್ ಭಾವುಕರಾದರು.
ಇದನ್ನೂ ಓದಿ: Pavitra Naresh: `ಮತ್ತೆ ಮದುವೆ’ ಸಿನಿಮಾ ಮೂಲಕ ಸಮಾಜಕ್ಕೆ ಸಂದೇಶ ನೀಡಲು ಹೊರಟಿದ್ದೇವೆ; ಪವಿತ್ರಾ ಲೋಕೇಶ್
ʻʻನನ್ನ ರೀಲ್ ಲೈಫ್ ಚೆನ್ನಾಗಿದೆ. ಆದರೆ ನಿಜ ಜೀವನ ಕೆಟ್ಟದಾಗಿದೆ. ಈ ವಯಸ್ಸಿನಲ್ಲಿ ನನ್ನ ತಾಯಿಯ ಬಳಿಕ ನಾನು ಇನ್ನೊಬ್ಬ ತಾಯಿಯನ್ನು ಭೇಟಿಯಾದೆ. ಅದಕ್ಕಿಂತ ಹೆಚ್ಚಿಗೆ ನಾನು ಹೇಳಲಾರೆʼʼ ಎಂದು ನರೇಶ್ ಭಾವುಕರಾಗಿ ಹೇಳಿದ್ದಾರೆ.
ಮೇ 26ಕ್ಕೆ ʻಮಳ್ಳಿ ಪೆಳ್ಳಿʼ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.