ಬೆಂಗಳೂರು: ಅಭಿನಯ ಹಾಗೂ ರಾಜಕೀಯದಲ್ಲಿ ನಟ ಪವನ್ ಕಲ್ಯಾಣ್ (Pawan Kalyan) ಮತ್ತು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಪವನ್ ಅವರ ಮಾಜಿ ಪತ್ನಿಯೂ ಆಗಿರುವ ನಟಿ ಅನಾರೋಗ್ಯಪೀಡಿತರಾಗಿದ್ದಾರೆ. ಈ ವಿಷಯವನ್ನು ರೇಣು ದೇಸಾಯಿ ಅವರೇ ಸ್ವತಃ ನೀಡಿದ್ದಾರೆ. ರೇಣು ಅವರು ಆಗಾಗ ಮಗ ಅಕಿರಾ ಮತ್ತು ಮಗಳು ಆದ್ಯಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ರೇಣು ದೇಸಾಯಿ ಅವರು ಸ್ವಲ್ಪ ಸಮಯದಿಂದ ಎದುರಿಸುತ್ತಿರುವ ಹೃದಯ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಬರೆದಿದ್ದಾರೆ, “ನಾನು ಕೆಲವು ವರ್ಷಗಳಿಂದ ಹೃದಯ ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನನ್ನ ಹತ್ತಿರದ ಮತ್ತು ಆತ್ಮೀಯರಿಗೆ ಈ ವಿಷಯ ತಿಳಿದಿದೆ . ನಾನು ಈ ಬಗ್ಗೆ ಇಲ್ಲಿ ಪೋಸ್ಟ್ ಮಾಡುತ್ತಿರುವುದು ನನ್ನ ಮತ್ತು ತಮ್ಮ ಸ್ವಂತ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಇತರ ಅನೇಕರಿಗೆ ನೆನಪಿಸಲು. ನಾವು ಏನೇ ಸಮಸ್ಯೆಗಳಲ್ಲಿ ಇರಲಿ ನಾವು ಬಲವಾಗಿರಬೇಕು ಮತ್ತು ನಂಬಿಕೆಯನ್ನು ಇಟ್ಟುಕೊಳ್ಳಬೇಕು. ನಿಮ್ಮ ಜೀವನದಲ್ಲಿ ಭರವಸೆಯನ್ನು ಕಂಡುಕೊಳ್ಳಿ. ಟ್ರೀಟ್‌ಮೆಂಟ್, ಯೋಗ ಕಾರ್ಯಗಳನ್ನು ಮಾಡುತ್ತಿರುವೆ. ಆಶಾದಾಯಕವಾಗಿ ನಾನು ಮತ್ತೆ ಸಾಮಾನ್ಯ ಜೀವನಕ್ಕೆ ಮರಳುತ್ತೇನೆ. ಶೀಘ್ರದಲ್ಲೇ ಶೂಟಿಂಗ್‌ಗೆ ಹೋಗುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದ ಸಚಿವೆ ರೋಜಾ ವಿರುದ್ಧ ನಟ ಪವನ್ ಕಲ್ಯಾಣ್ ಬೆಂಬಲಿಗರ ಆಕ್ರೋಶ; ಕಾರಿನ ಮೇಲೆ ದಾಳಿ
ಇದೀಗ ರೇಣು ದೇಸಾಯಿ ಅವರ ಆರೋಗ್ಯ ಚೆನ್ನಾಗಿರಲಿ ಎಂದು ಹಲವರು ಹಾರೈಸಿದ್ದಾರೆ. ರವಿತೇಜ ಅವರ ಮುಂಬರುವ ಚಿತ್ರ ಟೈಗರ್ ನಾಗೇಶ್ವರ ರಾವ್ ಮೂಲಕ 18 ವರ್ಷಗಳ ನಂತರ ರೇಣು ದೇಸಾಯಿ ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಇದನ್ನೂ ಓದಿ: Pawan Kalyan | ಆವೇಶದಲ್ಲಿ ಭಾಷಣ ಮಾಡುತ್ತ, ಒಂದು ಕಾಲಿನ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದ ನಟ ಪವನ್ ಕಲ್ಯಾಣ್
ವಂಶಿ ನಿರ್ದೇಶನದ ಈ ಚಿತ್ರವು ಆ್ಯಕ್ಷನ್ ಥ್ರಿಲ್ಲರ್ ಆಗಿದ್ದು, ರವಿತೇಜ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗಾಯತ್ರಿ ಭಾರದ್ವಾಜ್, ಕೌಶಿಕ್ ಮಹಾತಾ, ನೂಪುರ್ ಸನೋನ್ ಮತ್ತು ರೇಣು ದೇಸಾಯಿ ತಾರೆಯರು ಈ ಚಿತ್ರದಲ್ಲಿ ನಟಿಸಿದ್ದಾರೆ ಪಾತ್ರವರ್ಗದ ಭಾಗವಾಗಿದೆ. ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದು, ಮಾಧಿ ಐಎಸ್ ಸಿ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ಅಗರ್ವಾಲ್ ನಿರ್ಮಿಸಿದ್ದಾರೆ.