ಬೆಂಗಳೂರು: ಪವನ್ ಕಲ್ಯಾಣ್ (Pawan Kalyan) ಅವರ ಮಾಜಿ ಪತ್ನಿ ರೇಣು ದೇಸಾಯಿ (Renu Desai ) ಆಗಾಗ ವೈಯಕ್ತಿಕ ವಿಚಾರಗಳಿಗೆ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ರೇಣು ದೇಸಾಯಿ ಈ ಹಿಂದೆ ಮಾಜಿ ಪತಿ ಪವನ್ ಕಲ್ಯಾಣ್ (Pawan Kalyan’s ex-wife Renu Desai ) ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದೇ ಕಾರಣಕ್ಕೆ ಪವನ್ ಫ್ಯಾನ್ಸ್ ಆಕೆಯನ್ನು ಟ್ರೋಲ್ ಮಾಡಿದ್ದರು. “ಇದಕ್ಕೆ ನಿನ್ನ ಪವನ್ ಕಲ್ಯಾಣ್ ಒದ್ದು ಓಡಿಸಿದ್ದು” ಎಂದು (Pawan Kalyan fan for abusing Renu )ನೆಟ್ಟಿಗನೊಬ್ಬರು ಕಮೆಂಟ್ ಮಾಡಿದ್ದು ಇದಕ್ಕೆ ರೇಣು ದೇಸಾಯಿ ಬೇಸರಗೊಂಡಿದ್ದಾರೆ.
‘ಬದ್ರಿ’ ಸಿನಿಮಾ ಚಿತ್ರೀಕರಣದ ವೇಳೆ ಪವನ್ ಕಲ್ಯಾಣ್- ರೇಣು ದೇಸಾಯಿ ಪರಿಚಯವಾಗಿತ್ತು. ಬಳಿಕ ಪವನ್ ಮೊದಲ ಪತ್ನಿ ನಂದಿನಿ ಕೋರ್ಟ್ ಮೆಟ್ಟಿಲೇರಿದ್ದರು. ನನಗೆ ಡಿವೋರ್ಸ್ ಕೊಡದೇ ಪವನ್ ಮತ್ತೊಂದು ಮದುವೆ ಆಗಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ 5 ಕೋಟಿ ಜೀವನಾಂಶ ನೀಡಿ ಪವನ್ ಮೊದಲ ಪತ್ನಿಗೆ ಡಿವೋರ್ಸ್ ನೀಡಿ ರೇಣು ದೇಸಾಯಿ ಕೈಹಿಡಿದಿದ್ದರು. ಇದೀಗ ನಟಿ ತನ್ನನ್ನು ನೆಟ್ಟಿಗರು ಕೆಟ್ಟದ್ದಾಗಿ ನಿಂದಿಸುತ್ತಿದ್ದಾರೆ ಎಂದು ಬೇಸರ ಹೊರ ಹಾಕುತ್ತಿದ್ದಾರೆ.
ಕೆಲ ದಿನಗಳ ಹಿಂದೆ “ಪವನ್ ಕಲ್ಯಾಣ್ ನನಗೆ ಮೋಸ ಮಾಡಿದ್ದಾರೆ ಎನ್ನುತ್ತಲೇ ಆತನಿಗೆ ಹಣದ ಬಗ್ಗೆ ಆಸಕ್ತಿ ಇಲ್ಲ, ಹಣ ಬೇಕಾಗಿಲ್ಲ, ಸಮಾಜದ ಬಗ್ಗೆ ಬಹಳ ಜವಾಬ್ದಾರಿ ಇರುವ ವ್ಯಕ್ತಿ. ಆತನಿಗೆ ಒಂದು ಅವಕಾಶ ಕೊಡಿ” ಎಂದು ವಿಡಿಯೊ ಶೇರ್ ಮಾಡಿದ್ದರು. ಇದೀಗ ಇದ್ದಕ್ಕಿದಂತೆ ನೆಟ್ಟಿಗನೊಬ್ಬ ಮಾಡಿರುವ ಕಮೆಂಟ್ ಬಗ್ಗೆ ರೇಣು ದೇಸಾಯಿ ಬೇಸರ ವ್ಯಕ್ತಪಡಿಸಿದ್ದಾರೆ. “ನನಗೆ ಬೈದಿದ್ದಕ್ಕೆ ನಿನಗೆ ಮನಃಶಾಂತಿ ಸಿಕ್ತಾ? ಇಲ್ಲದಿದ್ದರೆ ಮತ್ತಷ್ಟು ಬೈದುಬಿಡು. ನನ್ನ ಮಾಜಿ ಪತಿ ಅಭಿಮಾನಿಗಳು ಮತ್ತು ಆತನ ವಿರೋಧಿಗಳಿಂದ ಬೈಯಿಕೊಳ್ಳುವುದಕ್ಕೆ ನನ್ನ ಬದುಕು ಇರುವುದು. ಮುಂದುವರಿಸಿ ಎಂದು ರೇಣು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Pawan Kalyan: ಡಿವೋರ್ಸ್ ಗಾಸಿಪ್‌ಗಳಿಗೆ ಫುಲ್‌ಸ್ಟಾಪ್ ಇಟ್ಟ ಪವನ್ ಕಲ್ಯಾಣ್!
ʻʻನನ್ನ ವಿಚ್ಛೇದನದ ಬಗ್ಗೆ, ಮೋಸದ ಬಗ್ಗೆ ನಾನು ಮಾತನಾಡುವಾಗ ನನ್ನ ಮಾಜಿ ಗಂಡನ ಅಭಿಮಾನಿಗಳು ನನ್ನನ್ನು ನಿಂದಿಸಿದರು. ಈಗ, ನಾನು ದೇಶದ ಪ್ರಜೆಯಾಗಿ ಅವರ ಪರವಾಗಿ ಸತ್ಯವನ್ನು ಮಾತನಾಡಿದಾಗ, ಅವರ ದ್ವೇಷಿಗಳು ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಮೊದಲು ವಿಚ್ಛೇದನದ ಬಗ್ಗೆ ಮಾತನಾಡಲು ನಾನು ಹಣವನ್ನು ತೆಗೆದುಕೊಂಡೆ ಎಂದು ಟೀಕಿಸುತ್ತಿದ್ದಾರೆ. ಈಗ ನನ್ನ ಮಾಜಿ ಪತಿಯ ಬಳಿಯೇ ಹಣ ಪಡೆದು ಮಾತನಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ಒಂದಂತು ನಿಜ ನಾನು ಆಗ ಈಗ ಯಾವಾಗಳು ಸತ್ಯವನ್ನೇ ಮಾತನಾಡಿದ್ದೇನೆʼʼಎಂದು ಬರೆದುಕೊಂಡಿದ್ದಾರೆ. ರವಿತೇಜ ಅವರ ಮುಂಬರುವ ಚಿತ್ರ ಟೈಗರ್ ನಾಗೇಶ್ವರ ರಾವ್ ಮೂಲಕ 18 ವರ್ಷಗಳ ನಂತರ ರೇಣು ದೇಸಾಯಿ ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. `ಹೇಮಲತಾ ಲವಣಂ’ (Hemalatha Lavanam) ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದು ಅಕ್ಟೋಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.