Site icon Vistara News

Pawan Kalyan | ಜನುಮದಿನಕ್ಕೆ ಭರ್ಜರಿ ಗಿಫ್ಟ್‌: ಹರಿ ಹರ ವೀರಮಲ್ಲು ಟೀಸರ್‌ ಔಟ್‌

Pawan Kalyan

ಬೆಂಗಳೂರು: ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ (Pawan Kalyan) ಜನುಮದಿನವಾದ (ಸೆ.೨) ಶುಕ್ರವಾರದಂದು ಅವರ ಮುಂದಿನ ಚಿತ್ರ ʻʻಹರಿ ಹರ ವೀರ ಮಲ್ಲುʼʼ ಚಿತ್ರದ ಟೀಸರ್‌ ಬಿಡುಗಡೆಗೊಂಡಿದೆ. ಸಖತ್‌ ಪವರ್‌ ಹಾಗೂ ಮಾಸ್‌ ಲುಕ್‌ನಲ್ಲಿ ಪವನ್‌ ಕಲ್ಯಾಣ್‌ ಮಿಂಚಿದ್ದಾರೆ.

ಅವರು ಪೈಲ್ವಾನ್‌ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಟೀಸರ್‌ ಟ್ರೆಂಡಿಂಗ್‌ನಲ್ಲಿದೆ. ಎಂ.ಎಂ. ಕೀರವಾಣಿ ಅವರ ಹಿನ್ನೆಲೆ ಸಂಗೀತ ಗಮನ ಸೆಳೆದಿದೆ. ʻʻಹರಿ ಹರ ವೀರಮಲ್ಲುʼ ಚಿತ್ರಕ್ಕೆ ಜಾಗರಲಮುಡಿ ರಾಧಾಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ತೆರೆಗೆ ಬಂದ ʻಭೀಮ್ಲಾ ನಾಯಕ್‌ʼ ಸಿನಿಮಾದಿಂದ ಪವನ್‌ ಅವರ ವೃತ್ತಿ ಜೀವನದಲ್ಲಿ ಮತ್ತೊಂದು ಗೆಲುವು ಸಿಕ್ಕಿದೆ.

ಇದನ್ನೂ ಓದಿ | Keeda Cola Movie | ಟಾಲಿವುಡ್‌ನಲ್ಲಿ ʼಕೀಡಾ ಕೋಲಾʼ ಪ್ಯಾನ್‌ ಇಂಡಿಯಾ ಸಿನಿಮಾ ಅನೌನ್ಸ್‌!

ಪ್ರಮುಖ ತಾರಾಗಣವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ರಿವೀಲ್‌ ಮಾಡಿಲ್ಲ. ತೋಟ ತರಣಿ ಅವರ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಜ್ಞಾನಶೇಖರ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಪವನ್ ಜತೆ ನಿಧಿ ಅಗರ್ವಾಲ್ ನಟಿಸಿದ್ದಾರೆ. ಚಿತ್ರವು 2023ರಲ್ಲಿ ತೆರೆಗೆ ಬರಲಿದ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ | ನೆಚ್ಚಿನ ನಟನನ್ನು ಭೇಟಿಯಾಗಲು 400 ಕಿ.ಮೀ ಕಾಲ್ನಡಿಗೆಯಲ್ಲಿ ಹೊರಟ ಅಭಿಮಾನಿ!

Exit mobile version