ಬೆಂಗಳೂರು: ಕ್ರಾಂತಿಕಾರಿ ಅಲ್ಲೂರಿ ಸೀತಾರಾಮ ರಾಜು ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ತೆಲುಗು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ (Pawan Kalyan ) ಅವರು ಜು. 4ರಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ಗೆ ಎಂಟ್ರಿ ಪಡೆದರು. ಇದರ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ. ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಲೆಜ್ನೋವಾ (Anna Lezhnova) ಅವರು ಬೇರೆಯಾಗಿದ್ದಾರೆ ಎನ್ನಲಾಗುತ್ತಿದೆ.
ಪವನ್ ಮೊಟ್ಟಮೊದಲು ಮದುವೆಯಾಗಿದ್ದು ನಂದಿನಿ ಜತೆ. ಬಳಿಕ ಕೆಲವು ವರ್ಷಗಳ ನಂತರ ಡಿವೋರ್ಸ್ ನೀಡಿ, ನಂತರ ಹೀರೊಯಿನ್ ರೇಣು ದೇಸಾಯಿ ಜತೆ ಸಪ್ತಪದಿ ತುಳಿದರು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿ ಏಕಾಏಕಿ ದೂರವಾದರು. ಎರಡು ವರ್ಷ ಅಷ್ಟೇ. ರಷ್ಯಾ ಮೂಲದ ಅನ್ನಾ ಲೇಜ್ನೇವಾ ಜತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು ಪವನ್. ಇಬ್ಬರು ಮಕ್ಕಳೂ ಇದ್ದಾರೆ. ಮೊದಮೊದಲು ಜಂಟಿಯಾಗಿ ಸಮಾರಂಭಗಳಲ್ಲಿ ಕಾಣಿಸುತ್ತಿತ್ತು ಈ ಜೋಡಿ. ಆದರೆ ಇತ್ತೀಚೆಗೆ ನಡೆದ ಸಂಬಂಧಿ ಮದುವೆ ಹಾಗೂ ರಾಮ್-ಉಪಾಸನಾ ಮಗುವಿನ ನಾಮಕರಣಕ್ಕೂ ಪವನ್ ಏಕಾಂಗಿಯಾಗಿ ಹಾಜರಾದರು.
ಅನ್ನಾ ಲೆಜ್ನೋವಾ ಹಾಗೂ ಪವನ್ ಕಲ್ಯಾಣ್ ಮದುವೆಯಾಗಿ 10 ವರ್ಷಗಳಾಗಿವೆ. ಪವನ್ ಮತ್ತು ಅನ್ನಾ ಲೆಜ್ನೋವಾ ಈಗಾಗಲೇ ಬೇರೆಯಾಗಿದ್ದು, ಅವರು ಮಕ್ಕಳೊಂದಿಗೆ ರಷ್ಯಾಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳುತ್ತವೆ. ಈ ವಿವಾದಗಳಿಗೆ ಪವನ್ ಮತ್ತು ಅನ್ನಾ ಲೆಜ್ನೋವಾ ಇನ್ನೂ ಪ್ರತಿಕ್ರಿಯಿಸಿಲ್ಲ. ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೋವಾ ಅವರು ‘ಕಾನೂನುಬದ್ಧವಾಗಿ ಬೇರೆಯಾಗದಿದ್ದರೂ ಸಾಮಾಜಿಕವಾಗಿ ಬೇರ್ಪಟ್ಟಿದ್ದಾರೆ ಎಂದು ನಂಬಲಾಗಿದೆ.’ ಇತ್ತೀಚೆಗೆ ನಡೆದ ಸಂಬಂಧಿ ಮದುವೆ ಹಾಗೂ ರಾಮ್-ಉಪಾಸನಾ ಮಗುವಿನ ನಾಮಕರಣಕ್ಕೂ ಪವನ್ ಏಕಾಂಗಿಯಾಗಿ ಹಾಜರಾದರು.
ಆಗಾಗ ಪವನ್ ಜತೆ ಕಾಣಿಸಿಕೊಳ್ಳುತ್ತಿದ್ದ ಅನ್ನಾ ಲೆಜ್ನೋವಾ , ಕಳೆದ ತಿಂಗಳು ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥದಲ್ಲಿಯೂ ಕಾಣಿಸಿಕೊಂಡಿಲ್ಲ. ಪವನ್ ಅವರ ವಾರಾಹಿ ಯಾತ್ರೆಯ ಆರಂಭಕ್ಕೂ ಮುನ್ನ ನಡೆದ ಯಾಗದಲ್ಲಿ ಅನ್ನಾ ಲೆಜ್ನೋವಾ ಇರಲಿಲ್ಲ. ಪವನ್ ಅವರ ಮಕ್ಕಳೊಂದಿಗೆ ವಿಡಿಯೊ ಕಾಲ್ ಮೂಲಕ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಈ ಹೇಳಿಕೆಗಳಿಗೂ ನಟ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: Pawan Kalyan: ಮಹೇಶ್ ಬಾಬು, ಪ್ರಭಾಸ್ ನನಗಿಂತ ದೊಡ್ಡ ಸ್ಟಾರ್‌ಗಳು; ಪವನ್ ಕಲ್ಯಾಣ್
ಅನ್ನಾ ಲೆಜ್ನೋವಾ ಯಾರು?
ತೀನ್ ಮಾರ್ ಚಿತ್ರೀಕರಣ ವೇಳೆ ಪವನ್ ಕಲ್ಯಾಣ್ 2011ರಲ್ಲಿ ಅನ್ನಾ ಲೆಜ್ನೋವಾ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಅನ್ನಾ ಲೆಜ್ನೋವಾ ರಷ್ಯಾದ ರೂಪದರ್ಶಿ ಮತ್ತು ನಟಿ. ಇಬ್ಬರಿಗೂ ಪರಿಚಯವಾಗಿ ಪ್ರೀತಿಯಲ್ಲಿ ಸಿಲುಕಿ, 2013 ಸೆಪ್ಟೆಂಬರ್ 30ರಂದು ಮದುವೆಯಾದರು. ಮದುವೆಗೂ ಮುಂಚೆ ಅನ್ನಾ ಲೆಜ್ನೋವಾ ಅವರಿಗೆ ಪೋಲೆನಾ ಅಂಜನಾ ಪವನ್ನೋವಾ ಎಂಬ ಮಗಳಿದ್ದಳು. ಪವನ್ ಅವರು ಮದುವೆಯಾದ ಬಳಿಕ ಮಾರ್ಕ್ ಶಂಕರ್ ಪವನೋವಿಚ್ ಮಗ ಹುಟ್ಟಿದ.