ಬೆಂಗಳೂರು: ಪವನ್ ಕಲ್ಯಾಣ್ (Pawan Kalyan) ಬೆಳಗ್ಗೆಯಿಂದಲೇ ಸುದ್ದಿಯಲ್ಲಿದ್ದಾರೆ. ಆದರೆ ರಾಜಕೀಯ ಕಾರಣಗಳಿಗಾಗಿ ಅಲ್ಲ. ತಮ್ಮ ವೈಯಕ್ತಿಕ ವಿಚಾರಕ್ಕಾಗಿ. ಪವನ್ ಮತ್ತು ಅವರ ಪತ್ನಿ ಅನ್ನಾ ಲೆಜ್ನೋವಾ (Anna Lezhnova) ಅವರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿತ್ತು. ಕೆಲ ದಿನಗಳಿಂದ ಇವರಿಬ್ಬರು ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಫೋಟೊ ಶೇರ್ ಮಾಡಿಕೊಳ್ಳುವುದರ ಮೂಲಕ ಪವನ್ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ. ಅನ್ನಾ ಲೆಜ್ನೆವಾ ಜತೆಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪತ್ನಿ ಅನ್ನಾ ಲೇಜ್ನೇವಾ ಜತೆಗಿನ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರು ನಗು ನಗುತ್ತ ಹೆಜ್ಜೆ ಇಡುತ್ತಿರುವ ಫೋಟೊವನ್ನು ತಮ್ಮ ಜನಸೇನಾ ಪಕ್ಷದ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿ, ಡಿವೋರ್ಸ್ ಎಂದು ಹೇಳವವರಿಗೆ ಬಾಯಿ ಮುಚ್ಚಿಸಿದ್ದಾರೆ.
ವದಂತಿ ಹಬ್ಬಿದ್ದೇಕೆ?
ಪವನ್ ಮೊದಲು ಮದುವೆಯಾಗಿದ್ದು ನಂದಿನಿ ಜತೆ. ಬಳಿಕ ಕೆಲವು ವರ್ಷಗಳ ನಂತರ ಡಿವೋರ್ಸ್ ನೀಡಿ, ನಂತರ ಹೀರೊಯಿನ್ ರೇಣು ದೇಸಾಯಿ ಜತೆ ಸಪ್ತಪದಿ ತುಳಿದರು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿ ಏಕಾಏಕಿ ದೂರವಾದರು. ಎರಡು ವರ್ಷ ಅಷ್ಟೇ. ರಷ್ಯಾ ಮೂಲದ ಅನ್ನಾ ಲೇಜ್ನೇವಾ ಜತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು ಪವನ್. ಇಬ್ಬರು ಮಕ್ಕಳೂ ಇದ್ದಾರೆ. ಮೊದಮೊದಲು ಜಂಟಿಯಾಗಿ ಸಮಾರಂಭಗಳಲ್ಲಿ ಕಾಣಿಸುತ್ತಿತ್ತು ಈ ಜೋಡಿ. ಆದರೆ ಇತ್ತೀಚೆಗೆ ನಡೆದ ಸಂಬಂಧಿ ಮದುವೆ ಹಾಗೂ ರಾಮ್-ಉಪಾಸನಾ ಮಗುವಿನ ನಾಮಕರಣಕ್ಕೂ ಪವನ್ ಏಕಾಂಗಿಯಾಗಿ ಹಾಜರಾದರು. ಇತ್ತೀಚೆಗೆ ನಡೆದ ಸಂಬಂಧಿ ಮದುವೆ ಹಾಗೂ ರಾಮ್-ಉಪಾಸನಾ ಮಗುವಿನ ನಾಮಕರಣಕ್ಕೂ ಪವನ್ ಏಕಾಂಗಿಯಾಗಿ ಹಾಜರಾದರು.
ಇದನ್ನೂ ಓದಿ: Pawan Kalyan: ಮಹೇಶ್ ಬಾಬು, ಪ್ರಭಾಸ್ ನನಗಿಂತ ದೊಡ್ಡ ಸ್ಟಾರ್‌ಗಳು; ಪವನ್ ಕಲ್ಯಾಣ್
జనసేన పార్టీ అధ్యక్షులు శ్రీ పవన్ కళ్యాణ్ గారు, శ్రీమతి అనా కొణిదెల గారు – వారాహి విజయ యాత్ర తొలి దశ దిగ్విజయంగా పూర్తి చేసుకొన్న సందర్భంగా హైదరాబాద్ లోని తమ నివాసంలో నిర్వహించిన పూజాదికాలలో పాల్గొన్నారు. శాస్త్రోక్తంగా చేపట్టిన ఈ ధార్మిక విధులను శ్రీ పవన్ కళ్యాణ్, శ్రీమతి అనా… pic.twitter.com/x3WJ5iUtQv
— JanaSena Party (@JanaSenaParty) July 5, 2023
ಆಗಾಗ ಪವನ್ ಜತೆ ಕಾಣಿಸಿಕೊಳ್ಳುತ್ತಿದ್ದ ಅನ್ನಾ ಲೆಜ್ನೋವಾ , ಕಳೆದ ತಿಂಗಳು ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥದಲ್ಲಿಯೂ ಕಾಣಿಸಿಕೊಂಡಿಲ್ಲ. ಪವನ್ ಅವರ ವಾರಾಹಿ ಯಾತ್ರೆಯ ಆರಂಭಕ್ಕೂ ಮುನ್ನ ನಡೆದ ಯಾಗದಲ್ಲಿ ಅನ್ನಾ ಲೆಜ್ನೋವಾ ಇರಲಿಲ್ಲ. ಪವನ್ ಅವರ ಮಕ್ಕಳೊಂದಿಗೆ ವಿಡಿಯೊ ಕಾಲ್ ಮೂಲಕ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಪವನ್ ಅವರು ಪತ್ನಿ ಜತೆಗಿನ ಫೋಟೊ ಹಂಚಿಕೊಳ್ಳುವುದರ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಅನ್ನಾ ಲೆಜ್ನೋವಾ ಯಾರು?
ತೀನ್ ಮಾರ್ ಚಿತ್ರೀಕರಣ ವೇಳೆ ಪವನ್ ಕಲ್ಯಾಣ್ 2011ರಲ್ಲಿ ಅನ್ನಾ ಲೆಜ್ನೋವಾ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಅನ್ನಾ ಲೆಜ್ನೋವಾ ರಷ್ಯಾದ ರೂಪದರ್ಶಿ ಮತ್ತು ನಟಿ. ಇಬ್ಬರಿಗೂ ಪರಿಚಯವಾಗಿ ಪ್ರೀತಿಯಲ್ಲಿ ಸಿಲುಕಿ, 2013 ಸೆಪ್ಟೆಂಬರ್ 30ರಂದು ಮದುವೆಯಾದರು. ಮದುವೆಗೂ ಮುಂಚೆ ಅನ್ನಾ ಲೆಜ್ನೋವಾ ಅವರಿಗೆ ಪೋಲೆನಾ ಅಂಜನಾ ಪವನ್ನೋವಾ ಎಂಬ ಮಗಳಿದ್ದಳು. ಪವನ್ ಅವರು ಮದುವೆಯಾದ ಬಳಿಕ ಮಾರ್ಕ್ ಶಂಕರ್ ಪವನೋವಿಚ್ ಮಗ ಹುಟ್ಟಿದ.