Site icon Vistara News

Pawan Kalyan: ಮಹೇಶ್ ಬಾಬು,  ಪ್ರಭಾಸ್ ನನಗಿಂತ ದೊಡ್ಡ ಸ್ಟಾರ್‌ಗಳು; ಪವನ್ ಕಲ್ಯಾಣ್

Pawan Kalyan says Prabhas, Mahesh Babu are bigger stars than him

ಬೆಂಗಳೂರು: ಜನಸೇನಾ ಪಕ್ಷದ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ತಮ್ಮ ರಾಜಕೀಯ ಪ್ರಚಾರದ ಅಂಗವಾಗಿ ಆಂಧ್ರಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಯಾತ್ರೆ ಮಾಡುತ್ತಿದ್ದಾರೆ. `ವರಾಹಿ ವಿಜಯ ಯಾತ್ರೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಯಾತ್ರೆ ಆರಂಭಿಸಿದ್ದಾರೆ. ಜೂನ್ 21ರಂದು ಆಂಧ್ರಪ್ರದೇಶದ ಮುಮ್ಮಿಡಿವರಂಗೆ ಭೇಟಿ ನೀಡಿದ ಅವರು ಮಹೇಶ್ ಬಾಬು, ಪ್ರಭಾಸ್, ಜ್ಯೂನಿಯರ್‌ ಎನ್‌ಟಿಆರ್‌, ರಾಮ್ ಚರಣ್, ಚಿರಂಜೀವಿ, ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ಹೀಗೆ ತೆಲುಗು ಹೀರೊಗಳ ಬಗ್ಗೆ ಮಾತನಾಡಿದರು. ಈ ನಟರ ಯಶಸ್ಸನ್ನು ನೋಡಿ ನನಗೆ ಅಹಂ ಇಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಪವನ್‌ ಕಲ್ಯಾಣ್‌ ಮಾತನಾಡಿ ʻʻ”ಮಹೇಶ್ ಬಾಬು ಮತ್ತು ಪ್ರಭಾಸ್ ನನಗಿಂತ ದೊಡ್ಡ ಸ್ಟಾರ್‌ಗಳು. ಅವರ ಸ್ಟಾರ್‌ಡಮ್ ನೋಡಿ ನನಗೆ ಅಹಂ ಇಲ್ಲ. ಅವರಿಗೆ ನನಗಿಂತ ಹೆಚ್ಚು ಸಂಭಾವನೆ ಇದೆ. ಅವರೆಲ್ಲ ಪ್ಯಾನ್-ಇಂಡಿಯನ್ ಸ್ಟಾರ್‌ಗಳು. ರಾಮ್ ಚರಣ್ ಮತ್ತು ಜ್ಯೂನಿಯರ್‌ ಎನ್‌ಟಿಆರ್ ಗ್ಲೋಬಲ್‌ ತಾರೆಗಳಾಗಿದ್ದಾರೆ. ಇತರ ರಾಜ್ಯಗಳು ಮತ್ತು ದೇಶಗಳು, ಇವರ ಬಗ್ಗೆ ಮಾಡುತ್ತಾರೆ. ಇದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಅಹಂ ಇಲ್ಲʼʼ ಎಂದರು.

ʻʻನನ್ನ ಅಭಿಮಾನಿಗಳು ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಯಾವಾಗಲೂ ಜಗಳವಾಡುತ್ತಾರೆ ಎಂದು ಕೆಲವರು ಹೇಳುತ್ತಾರೆ. ಸಿನಿಮಾ ಎಂದರೆ ಮನರಂಜನೆ ಮತ್ತು ಖುಷಿ. ಜ್ಯೂನಿಯರ್‌ ಎನ್‌ಟಿಆರ್‌, ಮಹೇಶ್ ಬಾಬು, ರಾಮ್ ಚರಣ್, ಅಲ್ಲು ಅರ್ಜುನ್, ಚಿರಂಜೀವಿ, ಬಾಲಕೃಷ್ಣ ಹೀಗೆ ಎಲ್ಲ ಹೀರೊಗಳ ಬಗೆಗೂ ನನಗೆ ಗೌರವ ಇದೆ. ಅವರ ಎಲ್ಲ ಸಿನಿಮಾಗಳನ್ನು ನಾನು ನೋಡುತ್ತೇನೆ. ನಾವು ಮುಖಾಮುಖಿಯಾದಾಗ ಮಾತನಾಡುತ್ತೇವೆ. ರಾಜಕೀಯದಲ್ಲಿ ನಾಯಕರ ಮೇಲೆ ಪ್ರೀತಿ ತೋರಿಸಬೇಡಿ. ಸಿನಿಮಾ ಬೇರೆ, ರಾಜಕೀಯ ಬೇರೆ’ ಎಂದರು ಪವನ್ ಕಲ್ಯಾಣ್.

ಇದನ್ನೂ ಓದಿ: Pawan Kalyan: ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ

ಪವನ್ ಕಲ್ಯಾಣ್ ಕೊನೆಯದಾಗಿ ʻಭೀಮ್ಲಾ ನಾಯಕ್ʼ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಜತೆ ಕಾಣಿಸಿಕೊಂಡಿದ್ದರು. ಈ ಚಿತ್ರವು ಮಲಯಾಳಂನ ಸೂಪರ್‌ಹಿಟ್ ಚಿತ್ರವಾದ ʻಅಯ್ಯಪ್ಪನುಮ್ ಕೊಶಿಯುಮ್‌ʼ ಸಿನಿಮಾದ ರಿಮೇಕ್ ಆಗಿತ್ತು.

ಸದ್ಯ ಪವನ್ ಕಲ್ಯಾಣ್ ಮುಂಬರುವ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜೂ.21ರಂದು ನಡೆದ ರಾಜಕೀಯ ಸಮಾವೇಶದಲ್ಲಿ ಅಭಿಮಾನಿಗಳಲ್ಲಿ ಈ ರೀತಿ ಮನವಿ ಮಾಡಿದರು. ಪವನ್ ಕಲ್ಯಾಣ್ ಸದ್ಯ ಸಿನಿಮಾ ಮತ್ತು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಸಾಯಿಧರಮ್ ತೇಜ್ ಅವರೊಂದಿಗೆ ನಿರ್ದೇಶಕ ಸಮುದ್ರಕನಿ ಅವರ ʻಬ್ರೋʼ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.

Exit mobile version